ಶರತ್​ಗೆ ನಾನು ಸರಿಯಾದ ಹುಡುಗಿ ಅಲ್ಲ; ನಯನಾ ಶಾಕಿಂಗ್ ಹೇಳಿಕೆ

ಕಾಮಿಡಿ ಶೋಗಳ ಮೂಲಕ ಖ್ಯಾತಿ ಗಳಿಸಿರುವ ನಟಿ ನಯನಾ, ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಬದುಕು ಮತ್ತು ಪತಿ ಶರತ್ ಅವರೊಂದಿಗಿನ ದಾಂಪತ್ಯ ಜೀವನದ ಕುರಿತು ಮಾತನಾಡಿದ್ದಾರೆ. ತಮ್ಮ ಬಿಡುವಿಲ್ಲದ ವೃತ್ತಿಜೀವನದಿಂದಾಗಿ ಪತಿಗೆ ಸಮಯ ನೀಡಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ .

ಶರತ್​ಗೆ ನಾನು ಸರಿಯಾದ ಹುಡುಗಿ ಅಲ್ಲ; ನಯನಾ ಶಾಕಿಂಗ್ ಹೇಳಿಕೆ
ನಯನಾ
Edited By:

Updated on: Oct 19, 2026 | 8:02 AM

ಮುಖ್ಯಾಂಶಗಳು

  • ಕಾಮಿಡಿ ಶೋ ಖ್ಯಾತಿಯ ನಟಿ ನಯನಾ ವೈಯಕ್ತಿಕ ಮಾತುಗಳು
  • ಶರತ್ ಜೊತೆಗಿನ ದಾಂಪತ್ಯದಲ್ಲಿ ಎದುರಾದ ಸವಾಲುಗಳು
  • ನಟನೆಯ ಬ್ಯುಸಿಯಿಂದ ಪತಿಗೆ ಸಮಯ ನೀಡಲಾಗಲಿಲ್ಲ

ಕಾಮಿಡಿ ಶೋಗಳ ಮೂಲಕ ಕನ್ನಡಿಗರ ಮನೆಮನಗಳಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿರುವ ಜನಪ್ರಿಯ ನಟಿ ನಯನಾ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಪತಿ ಶರತ್ ಅವರೊಂದಿಗೆ ದಾಂಪತ್ಯ ಜೀವನ ಮತ್ತು ಪರಸ್ಪರ ಸಂಬಂಧದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

‘ಕಾಫಿ ವಿತ್ ಮೋನಿಕಾ ಸಂದರ್ಶನದಲ್ಲಿ ಮಾತನಾಡುತ್ತಾ, ತಮ್ಮ ಬದುಕಿನಲ್ಲಿ ಜೀವನ ಸಂಗಾತಿಯಾಗಿ ಶರತ್ ಅವರನ್ನು ಸ್ಕಿಪ್ ಮಾಡಲು ಬಯಸುವುದಾಗಿ ನಯನಾ ತಿಳಿಸಿದ್ದಾರೆ. ತಮ್ಮಿಂದಾಗಿ ಶರತ್ ಸಾಕಷ್ಟು ನೋವು ಮತ್ತು ಕಷ್ಟಗಳನ್ನು ಅನುಭವಿಸಿದ್ದಾರೆ ಎಂದು ಅವರು ಒಪ್ಪಿಕೊಂಡಿದ್ದಾರೆ. ತಾವು ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ವ್ಯಕ್ತಿಯಾಗಿದ್ದು, ಎಲ್ಲೆ ಹೋದರೂ ಜನ ಗುರುತಿಸುವುದರಿಂದ ಶರತ್ ಅವರೊಂದಿಗೆ ಮುಕ್ತವಾಗಿ ಓಡಾಡಲು ಅಥವಾ ನೆಮ್ಮದಿಯಿಂದ ಸಮಯ ಕಳೆಯಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Loading...

ತಮ್ಮ ಬಿಡುವಿಲ್ಲದ ಶೂಟಿಂಗ್ ಹಾಗೂ ವೃತ್ತಿಜೀವನದ ಕಾರಣದಿಂದ ಪತಿಗೆ ಬೇಕಾದಷ್ಟು ಸಮಯ ನೀಡಲು ಸಾಧ್ಯವಾಗಿಲ್ಲ ಎಂಬುದನ್ನು ನಯನಾ ಸ್ಪಷ್ಟಪಡಿಸಿದ್ದಾರೆ. ಕೆಲವೊಮ್ಮೆ ಹೆಂಡತಿಯಾಗಿ ಪತಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ತಮಗೆ ಆಗಿಲ್ಲ ಎಂಬ ಅಪರಾಧ ಪ್ರಜ್ಞೆ ಕಾಡುತ್ತದೆ ಎಂದಿದ್ದಾರೆ. ಶರತ್ ಒಬ್ಬ ಒಳ್ಳೆಯ ವ್ಯಕ್ತಿಯಾಗಿದ್ದು, ತಮಗಿಂತಲೂ ಉತ್ತಮವಾಗಿ ಅವರನ್ನು ನೋಡಿಕೊಳ್ಳುವ ಉತ್ತಮ ಸಂಗಾತಿ ಅವರಿಗೆ ಸಿಗಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅವರೊಂದಿಗೆ ಕಳೆದ ಸುಂದರ ಕ್ಷಣಗಳ ಜೊತೆಗೆ ತಮ್ಮ ವೃತ್ತಿಜೀವನದ ಬ್ಯುಸಿ ವೇಳಾಪಟ್ಟಿಯಿಂದಾಗಿ ಇಬ್ಬರ ನಡುವೆ ಅಂತರ ಹೆಚ್ಚಾಯಿತು ಎಂದು ನಯನಾ ಹೇಳಿದ್ದಾರೆ. ತಾವು ಶರತ್ ಅವರಿಗೆ ಆರ್ಥಿಕವಾಗಿ ಮಾತ್ರ ಬೆಂಬಲ ನೀಡಲು ಸಾಧ್ಯವಾಯಿತೇ ಹೊರತು ಮಾನಸಿಕವಾಗಿ ನಿರೀಕ್ಷಿತ ನೆಮ್ಮದಿ ನೀಡಲಾಗಲಿಲ್ಲ ಎಂದು ನಯನಾ ಭಾವುಕರಾಗಿದ್ದಾರೆ. ಒಟ್ಟಿನಲ್ಲಿ ತಮ್ಮ ದಾಂಪತ್ಯದ ಏಳುಬೀಳುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ನಯನಾ ಅವರ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಇದನ್ನೂ ಓದಿ: ಹೀರೋ ಆದ ಕಾಮಿಡಿ ಕಿಲಾಡಿ ಖ್ಯಾತಿಯ ಹರೀಶ್; ‘ಚಂದ್ರಹಾಸ’ ಟ್ರೇಲರ್ ನೋಡಿ

ನಯನಾ ಅವರು ಏಪ್ರಿಲ್ 19, 2018ರಂದು ಬೆಂಗಳೂರಿನ ಉದ್ಯಮಿಯಾದ ಶರತ್ ಎಂಬುವವರೊಂದಿಗೆ ಧರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಟಿ ನಯನಾ ಅವರಿಗೆ ಸುಂದರವಾದ ಹೆಣ್ಣು ಮಗು ಜನಿಸಿದೆ. ಮಗುವಿಗೆ ಅವಿನ್ಯಾ ಶ್ರೇಯಾ ಶೆಟ್ಟಿ ಎಂದು ಹೆಸರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:59 am, Mon, 19 October 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us