AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಹೀರಾತೇ ಇಲ್ಲದ ಧಾರಾವಾಹಿ, ಮನೊರಂಜನಾ ಲೋಕದ ದಿಕ್ಕನ್ನೇ ಬದಲಿಸಲಿದೆ ಈ ಯೋಜನೆ

ಟಿವಿ ಕಾರ್ಯಕ್ರಮಗಳ ಆದಾಯದ ಮೂಲವೇ ಜಾಹೀರಾತು. ಪ್ರಸ್ತುತ ಪ್ರಸಾರ ಆಗುವ ಜಾಹೀರಾತುಗಳು ಹೇಗಿರುತ್ತವೆಂದರೆ, ಪ್ರಸಾರ ಆಗುತ್ತಿರುವ ಧಾರಾವಾಹಿ ಅಥವಾ ಯಾವುದೇ ಟಿವಿ ಕಾರ್ಯಕ್ರಮದ ಮಧ್ಯೆ ಕೆಲ ಸೆಕೆಂಡುಗಳಿಗೆ ಅಥವಾ ನಿಮಿಷಗಳಿಗೆ ಜಾಹೀರಾತು ಪ್ರಸಾರ ಆಗುತ್ತದೆ. ಬಳಿಕ ವೀಕ್ಷಕರು ನೋಡುತ್ತಿರುವ ಧಾರಾವಾಹಿ ಅಥವಾ ಇನ್ಯಾವುದೇ ಕಾರ್ಯಕ್ರಮ ಮುಂದುವರೆಯುತ್ತದೆ. ಆದರೆ ಇನ್ನು ಮುಂದೆ ಹಾಗಿರುವುದಿಲ್ಲ, ಬದಲಿಗೆ ಜಾಹೀರಾತೆ ಇಲ್ಲದೆ ಧಾರಾವಾಹಿ ನೋಡುವ ಕಾಲ ಹತ್ತಿರದಲ್ಲೇ ಇದೆ.

ಜಾಹೀರಾತೇ ಇಲ್ಲದ ಧಾರಾವಾಹಿ, ಮನೊರಂಜನಾ ಲೋಕದ ದಿಕ್ಕನ್ನೇ ಬದಲಿಸಲಿದೆ ಈ ಯೋಜನೆ
Tv ImageImage Credit source: AI Image
ಮಂಜುನಾಥ ಸಿ.
| Edited By: |

Updated on:Nov 07, 2026 | 6:03 PM

Share

ಮುಖ್ಯಾಂಶಗಳು

  • ಜಾಹೀರಾತೆ ಇಲ್ಲದ ಧಾರಾವಾಹಿ
  • ಜಾಹೀರಾತು ಪ್ರದರ್ಶನಕ್ಕೆ ಹೊಸ ರೀತಿ ಪ್ರಯೋಗ
  • ಟಿವಿ ಲೋಕದ ದಿಕ್ಕನೇ ಬದಲಿಸುವ ಯೋಜನೆ

ಟಿವಿಯ ಯಾವುದೇ ಕಾರ್ಯಕ್ರಮ ನೋಡಿದರೂ ಅಲ್ಲಿ ಜಾಹೀರಾತು ಇದ್ದೇ ಇರುತ್ತದೆ. ಧಾರಾವಾಹಿ, ವಾರ್ತೆ, ರಿಯಾಲಿಟಿ ಶೋ ಯಾವುದೇ ಇರಲಿ ಅಲ್ಲಿ ಜಾಹೀರಾತು ಕಡ್ಡಾಯವಾಗಿರುತ್ತದೆ. ಟಿವಿ ಕಾರ್ಯಕ್ರಮಗಳ ಆದಾಯದ ಮೂಲವೇ ಜಾಹೀರಾತು. ಪ್ರಸ್ತುತ ಪ್ರಸಾರ ಆಗುವ ಜಾಹೀರಾತುಗಳು ಹೇಗಿರುತ್ತವೆಂದರೆ, ಪ್ರಸಾರ ಆಗುತ್ತಿರುವ ಧಾರಾವಾಹಿ ಅಥವಾ ಯಾವುದೇ ಟಿವಿ ಕಾರ್ಯಕ್ರಮದ ಮಧ್ಯೆ ಕೆಲ ಸೆಕೆಂಡುಗಳಿಗೆ ಅಥವಾ ನಿಮಿಷಗಳಿಗೆ ಜಾಹೀರಾತು ಪ್ರಸಾರ ಆಗುತ್ತದೆ. ಬಳಿಕ ವೀಕ್ಷಕರು ನೋಡುತ್ತಿರುವ ಧಾರಾವಾಹಿ ಅಥವಾ ಇನ್ಯಾವುದೇ ಕಾರ್ಯಕ್ರಮ ಮುಂದುವರೆಯುತ್ತದೆ. ಆದರೆ ಇನ್ನು ಮುಂದೆ ಹಾಗಿರುವುದಿಲ್ಲ, ಬದಲಿಗೆ ಜಾಹೀರಾತೆ ಇಲ್ಲದೆ ಧಾರಾವಾಹಿ ನೋಡುವ ಕಾಲ ಹತ್ತಿರದಲ್ಲೇ ಇದೆ.

ನಾವು ಆಸಕ್ತಿವಹಿಸಿ ನೋಡುತ್ತಿರುವ ಕತೆಯ ಮಧ್ಯೆ ಜಾಹೀರಾತು ಬರುವುದರಿಂದ, ರಸಭಂಗವಾಗಿ ನಾವು ಚಾನೆಲ್ ಬದಲಿಸುತ್ತೇವೆ, ಅಥವಾ ಟಿವಿ ನೋಡುವುದರಿಂದ ಬಿಡುವು ಪಡೆದು ಜಾಹೀರಾತು ಮುಗಿದ ಮೇಲೆ ನಮ್ಮಿಷ್ಟದ ಕಾರ್ಯಕ್ರಮ ವೀಕ್ಷಣೆಗೆ ಮರಳುತ್ತೇವೆ. ಒಂದೊಮ್ಮೆ ನಾವು ನೋಡುತ್ತಿರುವ ಧಾರಾವಾಹಿಯ ಕತೆಯ ಭಾಗವಾಗಿಯೇ ಆ ಜಾಹೀರಾತು ಮೂಡಿ ಬಂದರೆ!

ಹೌದು, ಈಗ ಹೊಸದೊಂದು ಜಾಹೀರಾತು ಪ್ರಯೋಗ ಆರಂಭ ಆಗಿದೆ. ಅದುವೇ ‘ಕಂಟೆಂಟ್​ ಟು ಕಾಮರ್ಸ್’. ಇಲ್ಲಿ, ಧಾರಾವಾಹಿಯ ನಡುವೆ ಜಾಹಿರಾತು ಬರುವುದಿಲ್ಲ ಬದಲಿಗೆ ಕತೆಯ ಭಾಗವಾಗಿಯೇ ಜಾಹೀರಾತು ಇರುತ್ತದೆ. ಉದಾಹರಣೆಗೆ ಮೊಬೈಲ್​​ ಕಂಪೆನಿಯೊಂದು ತನ್ನ ಮೊಬೈಲ್ ಅನ್ನು ಜಾಹೀರಾತು ಮಾಡಬೇಕೆಂದರೆ ಅದು ಪ್ರತ್ಯೇಕವಾಗಿ ಜಾಹೀರಾತು ನೀಡುವುದಿಲ್ಲ, ಬದಲಿಗೆ ಧಾರಾವಾಹಿಯ ಪಾತ್ರವೊಂದು ಆ ಮೊಬೈಲ್​​ ಅನ್ನು ಬಳಸುತ್ತದೆ, ಇತರೆ ಪಾತ್ರಕ್ಕೆ ಮೊಬೈಲ್​​ನ ಗುಣವೈಶಿಷ್ಟ್ಯಗಳ ಬಗ್ಗೆ ತಿಳಿಸುತ್ತದೆ. ಇದೆಲ್ಲವೂ ಧಾರಾವಾಹಿಯ ಕತೆಯ ಭಾಗವಾಗಿಯೇ ನಡೆಯುತ್ತದೆ. ಹಾಗಾಗಿ, ವೀಕ್ಷಕರಿಗೆ ಇದು ಅವರ ಮೇಲೆ ಹೇರಲಾದ ಜಾಹೀರಾತು ಎನಿಸುವುದಿಲ್ಲ.

ಇದನ್ನೂ ಓದಿ:ಸೀತೆ ಪಾತ್ರದ ಮೂಲಕ ಮಿಂಚಿದ ಸಾಯಿ ಪಲ್ಲವಿ, ನೆಗೆಟಿವಿಟಿಗೆ ತಿರುಗೇಟು 

ಈಗಾಗಲೇ ಈ ಪ್ರಯೋಗ ಚಾಲ್ತಿಯಲ್ಲಿದೆ. ಫ್ಲಿಪ್​​ಕಾರ್ಟ್, ಎಂಟರ್ 10 ಟಿವಿ ನೆಟ್​​ವರ್ಕ್ಸ್ ಮತ್ತು ಸ್ಟಾರ್​​ಕಾಮ್ ಇಂಡಿಯಾ ಒಟ್ಟಿಗೆ ಸೇರಿ ಈ ರೀತಿಯ ಹೊಸ ಜಾಹೀರಾತು ಪ್ರಯೋಗ ಆರಂಭಿಸಿವೆ. ಜನಪ್ರಿಯ ದಂಗಲ್ ಟಿವಿಯಲ್ಲಿ ಪ್ರಸಾರ ಆಗುವ ‘ರಿಮ್​​ಜಿಮ್’ ಎಂಬ ಧಾರಾವಾಹಿಯಲ್ಲಿ ಈ ಹೊಸ ಮಾದರಿಯ ಜಾಹೀರಾತು ಪ್ರದರ್ಶನ ಅಥವಾ ಪ್ರಾಡಕ್ಟ್ ಪ್ಲೇಸ್​​ಮೆಂಟ್ ಈಗಾಗಲೇ ಆರಂಭ ಆಗಿದೆ.

ಒಂದೊಮ್ಮೆ ಅತ್ಯಾಧುನಿಕ ಟಿವಿ ಅಥವಾ ಮೊಬೈಲ್​​ನಲ್ಲಿ ‘ಕಂಟೆಂಟ್​ ಟು ಕಾಮರ್ಸ್’ ಮಾದರಿಯ ಕಾರ್ಯಕ್ರಮ ವೀಕ್ಷಿಸುತ್ತಿದ್ದರೆ, ಕಾರ್ಯಕ್ರಮ ನಡೆಯುವಾಗಲೇ ತಮಗೆ ಇಷ್ಟವಾದ ಪ್ರಾಡಕ್ಟ್ ಮೇಲೆ ಕ್ಲಿಕ್ ಮಾಡಿ ನೇರವಾಗಿ ಖರೀದಿ ಸಹ ಮಾಡಬಹುದಾಗಿರುತ್ತದೆ. ಇದೊಂದು ಪರಿಣಾಮಕಾರಿ ಜಾಹೀರಾತು ವಿಧಾನ ಎನ್ನಲಾಗುತ್ತಿದೆ. ಜೊತೆಗೆ ಈ ವಿಧಾನವು ಟಿವಿ ವೀಕ್ಷಣೆಯ ಅನುಭವವನ್ನೇ ಬದಲಾಯಿಸಲಿದೆ ಎಂಬ ಚರ್ಚೆ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Sat, 7 November 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಸ್ಟಿಂಗ್ ಕೇಸ್: ಕುಮಾರಸ್ವಾಮಿ ವಿರುದ್ಧ ಯತೀಂದ್ರ ಸ್ಫೋಟಕ ಹೇಳಿಕೆ
ಸ್ಟಿಂಗ್ ಕೇಸ್: ಕುಮಾರಸ್ವಾಮಿ ವಿರುದ್ಧ ಯತೀಂದ್ರ ಸ್ಫೋಟಕ ಹೇಳಿಕೆ
ಶೋಭಾ ಕರಂದ್ಲಾಜೆ, ಬೊಮ್ಮಾಯಿ ಮನೆ ಮುಂದೆ ವಿವಾದಾತ್ಮಕ ಪೋಸ್ಟರ್ !
ಶೋಭಾ ಕರಂದ್ಲಾಜೆ, ಬೊಮ್ಮಾಯಿ ಮನೆ ಮುಂದೆ ವಿವಾದಾತ್ಮಕ ಪೋಸ್ಟರ್ !
ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!
ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!
ಕೃಷ್ಣ ಭೈರೇಗೌಡ ಎದುರೇ ಕಾಂಗ್ರೆಸ್ ಮಾಜಿ MLC, ಬಿಜೆಪಿ MLA ​ಹೈಡ್ರಾಮಾ!
ಕೃಷ್ಣ ಭೈರೇಗೌಡ ಎದುರೇ ಕಾಂಗ್ರೆಸ್ ಮಾಜಿ MLC, ಬಿಜೆಪಿ MLA ​ಹೈಡ್ರಾಮಾ!
ಏರ್​ಪೋರ್ಟ್ ಪ್ರಯಾಣಿಕರಿಗೆ ಇಂದಿನಿಂದ ತಟ್ಟಲಿದೆ ಟ್ರಾಫಿಕ್ ಬಿಸಿ
ಏರ್​ಪೋರ್ಟ್ ಪ್ರಯಾಣಿಕರಿಗೆ ಇಂದಿನಿಂದ ತಟ್ಟಲಿದೆ ಟ್ರಾಫಿಕ್ ಬಿಸಿ
ಈ ವಾರ ಇಲ್ಲ ಎಲಿಮಿನೇಷನ್? ಪ್ರೋಮೋ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ಈ ವಾರ ಇಲ್ಲ ಎಲಿಮಿನೇಷನ್? ಪ್ರೋಮೋ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ