ಧನಂಜಯ್ ಪಿಯುಸಿಯಲ್ಲಿ ತೆಗೆದ ಅಂಕ ಎಷ್ಟು? ‘ವೀಕೆಂಡ್ ವಿತ್ ರಮೇಶ್’​ನಲ್ಲಿ ಮಾಹಿತಿ ರಿವೀಲ್

|

Updated on: Apr 17, 2023 | 9:28 AM

ಧನಂಜಯ್ ಅವರು ಪಿಯುಸಿ ಓದಿದ್ದು ಮೈಸೂರಿನಲ್ಲಿ. ಮರಿ ಮಲ್ಲಪ್ಪ ಕಾಲೇಜಿನಲ್ಲಿ ವಿಜ್ಞಾನ ವಿಷಯ ಓದಿದ್ದರು. ಓದೋಕೆ ಒಳ್ಳೆಯ ವಾತಾವರಣ ಇದೆ ಎಂದು ಅವರನ್ನು ಈ ಕಾಲೇಜಿಗೆ ತಂದೆ ಸೇರಿಸಿದ್ದರು.

ಧನಂಜಯ್ ಪಿಯುಸಿಯಲ್ಲಿ ತೆಗೆದ ಅಂಕ ಎಷ್ಟು? ‘ವೀಕೆಂಡ್ ವಿತ್ ರಮೇಶ್’​ನಲ್ಲಿ ಮಾಹಿತಿ ರಿವೀಲ್
ಧನಂಜಯ್
Follow us on

‘ವೀಕೆಂಡ್ ವಿತ್ ರಮೇಶ್ ಸೀಸನ್​ 5’ ಆರಂಭ ಆಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಶೋ ಪ್ರಸಾರ ಕಾಣುತ್ತಿದೆ. ಕಳೆದ ನಾಲ್ಕು ಸೀಸನ್​ನಲ್ಲಿ ಸಾಕಷ್ಟು ಸಾಧಕರು ಈ ಶೋಗೆ ಬಂದು ಹೋಗಿದ್ದಾರೆ. ಈ ಸೀಸನ್​ನಲ್ಲೂ ಅನೇಕ ಸಾಧಕರು ವೇದಿಕೆ ಏರಿದ್ದಾರೆ. ಧನಂಜಯ್ (Dhananjay) ಕೂಡ ವೀಕೆಂಡ್ ವಿತ್ ರಮೇಶ್ ಎಪಿಸೋಡ್​’ಗೆ ಬಂದಿದ್ದಾರೆ. ಅವರು ತುಂಬಾನೇ ಬ್ರಿಲಿಯಂಟ್ ಸ್ಟೂಡೆಂಟ್ ಆಗಿದ್ದರು. ಈ ವಿಚಾರ ವೀಕೆಂಡ್ ವಿತ್ ರಮೇಶ್ (Weekend With Ramesh) ಎಪಿಸೋಡ್​ನಲ್ಲಿ ರಿವೀಲ್ ಆಗಿದೆ.

ಧನಂಜಯ್ ಅವರು ಪಿಯುಸಿ ಓದಿದ್ದು ಮೈಸೂರಿನಲ್ಲಿ. ಮರಿ ಮಲ್ಲಪ್ಪ ಕಾಲೇಜಿನಲ್ಲಿ ವಿಜ್ಞಾನ ವಿಷಯ ಓದಿದ್ದರು. ಓದೋಕೆ ಒಳ್ಳೆಯ ವಾತಾವರಣ ಇದೆ ಎಂದು ಧನಂಜಯ್ ಅವರನ್ನು ಈ ಕಾಲೇಜಿಗೆ ತಂದೆ ಸೇರಿಸಿದ್ದರು. ‘ಓಡೋ ಕುದುರೆ ಜೊತೆ ನಮ್ಮದೊಂದು ಕುಂಟು ಕುದುರೆ. ಎಲ್ಲರ ಜೊತೆ ಸೇರಿ ಈ ಕುದುರೆ ಓಡಲಿ’ ಎಂದು ಡಾಲಿ ಧನಂಜಯ್ ತಂದೆ ಹೇಳಿದ್ದರಂತೆ. ‘ನಾನು ತುಂಬಾನೇ ಬ್ರಿಲಿಯಂಟ್ ಸ್ಟೂಡೆಂಟ್. ಹಾಗಿದ್ದರೂ, ನನ್ನನ್ನು ಅವರು ಕುಂಟು ಕುದುರೆ ಎಂದು ಹೇಳ್ತಿರೋದು ಏಕೆ ಎನ್ನುವ ಪ್ರಶ್ನೆ ಮೂಡಿತ್ತು. ಆ ಕಾಲೇಜಿಗೆ ಸೇರಿದ ಮೇಲೆ ನಾನು ನಿಜಕ್ಕೂ ಕುಂಟು ಕುದುರೆ ಎನಿಸಿತ್ತು’ ಎಂದಿದ್ದಾರೆ ಧನಂಜಯ್.

ಇದನ್ನೂ ಓದಿ: ಧನಂಜಯ್​ಗೆ ಇತ್ತೀಚೆಗೆ ಬೀಳುತ್ತಿದೆ ಕೆಟ್ಟ ಕನಸು; ಕಾರಣ ತಿಳಿಸಿದ ಡಾಲಿ

ಧನಂಜಯ್ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 520 ಅಂಕ ಗಳಿಸಿದ್ದರು. ಫಿಸಿಕ್ಸ್​ಗೆ 99 ಅಂಕ ಬಂದಿತ್ತು. ಧನಂಜಯ್ ಬ್ರಿಲಿಯಂಟ್ ಸ್ಟೂಡೆಂಟ್ ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ. ಪಿಯುಸಿ ಮುಗಿದ ಬಳಿಕ ಅವರು ಇಂಜಿನಿಯರಿಂಗ್ ಸೇರಿದರು. ಆಗಲೇ ಅವರು ರಂಗಾಯಣಕ್ಕೆ ಹೋಗುತ್ತಿದ್ದರು. ಬಳಿಕ ಕೆಲಸಕ್ಕೂ ಸೇರಿದರು. ಆದರೆ, ಅವರನ್ನು ಬಣ್ಣದ ಲೋಕ ಕೈ ಬೀಸಿ ಕರೆಯಿತು.

ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್​ಗೆ ಡಾಲಿ ಧನಂಜಯ್, ಹಲವು ಅಚ್ಚರಿಯ ಅತಿಥಿಗಳು!

‘ಧನಂಜಯ್ ಅವರಿಗೆ ಸಾಕಷ್ಟು ಅವಮಾನ ಆಗಿದೆ. ಆದರೆ, ಅವರು ತಲೆ ತಗ್ಗಿಸಿಲ್ಲ. ಬದಲಿಗೆ ಎಲ್ಲರನ್ನೂ ಕ್ಷಮಿಸಬೇಕು ಎಂದು ಹೇಳುತ್ತಿದ್ದರು’ ಎಂದಿದ್ದಾರೆ ಧನಂಜಯ್ ಗೆಳೆಯರು. ಸದ್ಯ ಧನಂಜಯ್ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಕನ್ನಡದ ಬೇಡಿಕೆಯ ಹೀರೋ ಆಗಿ ಧನಂಜಯ್ ಹೊರಹೊಮ್ಮಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:33 am, Mon, 17 April 23