ಬೈದು ಕಳಿಸಿದರೂ ಡಾಲಿ ಧನಂಜಯ್ ಪ್ರಗತಿಯಲ್ಲಿ ರವಿಚಂದ್ರನ್​ಗೆ ವಿಶೇಷ ಸ್ಥಾನ

Weekend With Ramesh: ಡಾಲಿ ಧನಂಜಯ್ ಹಿಂದೊಮ್ಮೆ ನಟ ರವಿಚಂದ್ರನ್ ಅವರಲ್ಲಿ ಅವಕಾಶ ಕೇಳಲು ಹೋಗಿ ಚೆನ್ನಾಗಿ ಬೈಸಿಕೊಂಡಿದ್ದರಂತೆ. ಆದರೆ ರವಿಚಂದ್ರನ್ ಬೈಗುಳದ ಕಾರಣಕ್ಕೆ ಡಾಲಿ ಜೀವನದಲ್ಲಿ ಮಹತ್ವದ ಘಟನೆಯೊಂದು ನಡೆದಿದೆ.

ಬೈದು ಕಳಿಸಿದರೂ ಡಾಲಿ ಧನಂಜಯ್ ಪ್ರಗತಿಯಲ್ಲಿ ರವಿಚಂದ್ರನ್​ಗೆ ವಿಶೇಷ ಸ್ಥಾನ
ರವಿಚಂದ್ರನ್- ಡಾಲಿ ಧನಂಜಯ್
Follow us
|

Updated on: Apr 17, 2023 | 8:30 AM

ಯಾವುದೇ ಸಿನಿಮಾ (Movie) ಹಿನ್ನೆಲೆ ಇಲ್ಲದ ವ್ಯಕ್ತಿಯೊಬ್ಬ ನಟನಾಗುವುದು ಅದರಲ್ಲಿಯೂ ಸಿನಿಮಾ ಹೀರೋ ಆಗಿ ಮಿಂಚುವುದು ದೊಡ್ಡ ಸಾಧನೆಯೇ ಸರಿ. ಹಿನ್ನೆಲೆಯಿಲ್ಲದೆ ಕೇವಲ ಪ್ರತಿಭೆಯನ್ನು ನಂಬಿಕೊಂಡು ಬಂದ ವ್ಯಕ್ತಿಗೆ ಎದುರಾಗುವ ಸಂಕಷ್ಟಗಳು ಒಂದೆರಡಲ್ಲ. ತಾವು ಕಲ್ಪಿಸಿಕೊಂಡಿದ್ದ ಗಾಂಧಿ ನಗರಕ್ಕೂ, ವಾಸ್ತವದ ಗಾಂಧಿ ನಗರಕ್ಕೂ ಬಹಳ ದೊಡ್ಡ ಅಂತರ ಮೊದಲಿಗೆ ಕಂಡು ಬರುತ್ತದೆ. ಆ ನಂತರ ಹೋದಲ್ಲೆಲ್ಲ ನಿರಾಕರಣೆಗಳೇ ಎದುರುಗೊಳ್ಳುತ್ತವೆ. ತಾವು ಆರಾಧ್ಯ ದೈವ ಎಂದೆಲ್ಲ ಭಾವಿಸಿದ್ದ ನಟ, ನಿರ್ದೇಶಕರು ಸಹ ನಿರಾಸೆ ಮೂಡಿಸಿಬಿಡುತ್ತಾರೆ. ಅಂಥಹಾ ಒಂದು ಸನ್ನಿವೇಶ ನಟ ಡಾಲಿ ಧನಂಜಯ್​ಗೂ (Daali Dhananjay) ಎದುರಾಗಿತ್ತು. ಆ ವಿಷಯವನ್ನು ಸ್ವತಃ ಡಾಲಿ, ವೀಕೆಂಡ್ ವಿತ್ ರಮೇಶ್​ನಲ್ಲಿ (Weekend With Ramesh) ಹೇಳಿಕೊಂಡಿದ್ದಾರೆ.

ಸಿನಿಮಾ ನಟನಾಗಲೇ ಬೇಕೆಂಬ ಆಸೆಯಿಂದ ಇನ್ಫೋಸಿಸ್ ನೌಕರಿ ಬಿಟ್ಟು ಬೆಂಗಳೂರಿಗೆ ಬಂದು ನಾಟಕಗಳಲ್ಲಿ ನಟಿಸುತ್ತಾ ಇದ್ದ ಡಾಲಿಗೆ ಒಮ್ಮೆ ಡೈರೆಕ್ಟರ್ ಸ್ಪೆಷಲ್ ಸಿನಿಮಾದ ಅವಕಾಶ ಸಿಕ್ಕುತ್ತದೆ. ಆದರೆ ಆ ಸಿನಿಮಾ ಚಿತ್ರೀಕರಣ ಮುಗಿಯುವುದೇ ಇಲ್ಲ, ಮುಗಿದರೂ ಬಿಡುಗಡೆ ಆಗುವುದು ಬಹಳ ತಡವಾಗುತ್ತದೆ. ಸುಮಾರು ಎರಡು ವರ್ಷ ಸಮಯ ಅಲ್ಲಿ ಕಳೆದಾಗಿರುತ್ತದೆ ಡಾಲಿ. ಅದೇ ಸಮಯದಲ್ಲಿ ಯಾರದ್ದೋ ಪರಿಚಯದ ಮೂಲಕ ನಟ ರವಿಚಂದ್ರನ್ ಅವರನ್ನು ಭೇಟಿಯಾಗಿ ಅವರ ಬಳಿ ಅವಕಾಶ ಕೇಳಲು ಹೋಗುತ್ತಾರೆ ಡಾಲಿ.

ರವಿಚಂದ್ರನ್ ಅಭಿಮಾನಿಯಾಗಿದ್ದ ಡಾಲಿ ಧನಂಜಯ್, ರವಿಚಂದ್ರನ್ ಅವರನ್ನು ಭೇಟಿಯಾಗಿ, ನಾನು ಎಂಜಿನಿಯರಿಂಗ್ ಮಾಡಿದ್ದೇನೆ, ಇನ್ಫೋಸಿಸ್​ನಲ್ಲಿ ಕೆಲಸ ಮಾಡುತ್ತಿದ್ದೆ. ಅದನ್ನು ಬಿಟ್ಟು ನಟನಾಗಲು ಬಂದಿದ್ದೇನೆ. ಈಗಾಗಲೇ ಎರಡು ವರ್ಷ ಸಿನಿಮಾ ಒಂದರ ಮೇಲೆ ಕಳೆದಿದ್ದೇನೆ. ಅವಕಾಶ ಇದ್ದರೆ ಕೊಡಿ ಎಂದೆಲ್ಲ ಹೇಳಿದ್ದಾರೆ. ಆದರೆ ರವಿಚಂದ್ರನ್, ಡಾಲಿಯನ್ನು ಬೈದಿದ್ದಾರೆ. ಬುದ್ಧಿಯಿದೆಯೇನ್ರಿ ನಿಮಗೆ, ನಮಗೆಲ್ಲ ಶಿಕ್ಷಣ ಧಕ್ಕಲಿಲ್ಲ ಅಂತ ಕೊರಗ್ತಾ ಇರ್ತೀವಿ ಆದರೆ ನೀವು ಇಷ್ಟೆಲ್ಲ ಓದಿಕೊಂಡು ಹೀಗೆ ಆಗಿದ್ದೀರಲ್ಲ. ನೀವು ಈಗ ಕಳೆದಿರುವ ಎರಡು ವರ್ಷ ಯಾರಾದರೂ ವಾಪಸ್ಸು ತಂದುಕೊಡೋಕೆ ಆಗುತ್ತಾ? ನೋಡಿ ಹೇಗಿದ್ದೀರ ಗಡ್ಡ, ಕೂದಲು ಬಿಟ್ಟುಕೊಂಡು, ಮೊದಲು ಅದನ್ನೆಲ್ಲ ತೆಗೆದು ಮನುಷ್ಯನಂತೆ ಕಾಣಿ. ಒಬ್ಬರ ಬೆಂಬಲ ಇಲ್ಲದೆ ಈ ಇಂಡಸ್ಟ್ರಿಗೆ ಯಾವ ಧೈರ್ಯದ ಮೇಲೆ ಬಂದಿರಿ ಎಂದೆಲ್ಲ ಬುದ್ಧಿ ಹೇಳಿದ್ದಾರೆ ರವಿಚಂದ್ರನ್.

ರವಿಚಂದ್ರನ್ ಅವರ ಮಾತು ಮೊದಲು ಡಾಲಿಗೆ ಶಾಕಿಂಗ್ ಎನಿಸಿದರು, ಅವರ ಮಾತಿನಿಂದ ಪ್ರೇರಣೆ ಪಡೆದ ಡಾಲಿ, ನನಗಾಗಿ ನಾನು ಏನನ್ನಾದರೂ ಮಾಡಿಕೊಳ್ಳಬೇಕು ಎಂದುಕೊಂಡು ಆಗ ಬರೆಯಲು ಶುರು ಮಾಡಿದರಂತೆ. ಅದರ ಫಲವಾಗಿಯೇ ಜಯನಗರ 4ಬ್ಲಾಕ್ ಶಾರ್ಟ್ ಸಿನಿಮಾ ಶುರುವಾಗಿದ್ದು, ಜಯನಗರ 4 ಬ್ಲಾಕ್ ಕತೆಯನ್ನು ಬರೆದು ತನ್ನೆಲ್ಲ ಗೆಳೆಯರಿಗೆ ಹೇಳುವಾಗ ಅದನ್ನು ಕೇಳಿದ ಸತ್ಯ, ಇದನ್ನು ಕಿರುಚಿತ್ರ ಮಾಡೋಣ ಎಂದುಕೊಂಡು ಜಯನಗರ 4 ಬ್ಲಾಕ್​ನಲ್ಲಿಯೇ ಚಿತ್ರೀಕರಣ ಮಾಡಿ ಅಲ್ಲಿಯೇ ಅದನ್ನು ಪ್ರದರ್ಶನ ಸಹ ಮಾಡಿದ್ದಾರೆ. ಇಂದಿನಂತೆ ಇಂಟರ್ನೆಟ್ ಹೆಚ್ಚಿಗಿಲ್ಲದ ಆಗಿನ ಸಮಯದಲ್ಲಿ ಸಹ ಅದು ವೈರಲ್ ಕಿರುಚಿತ್ರ.

ಇದನ್ನೂ ಓದಿ:ಜೀವ ಕೊಟ್ಟ ಎರಡನೇ ತಾಯಿಯನ್ನು ವೀಕೆಂಡ್ ವಿತ್ ರಮೇಶ್​ನಲ್ಲಿ ಭೇಟಿಯಾದ ಡಾಲಿ

ಅದಾದ ಬಳಿಕ ಡಾಲಿ ರಾಟೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರಾದರೂ ಯಾವೊಂದು ಸಿನಿಮಾ ಸಹ ಹಿಟ್ ಆಗಲಿಲ್ಲ. ಬಹಳ ಅವಮಾನಗಳನ್ನು ಸಹ ಡಾಲಿ ಎದುರಿಸಿದರು. ಕೊನೆಗೆ ತಾವೇ ಮತ್ತೊಂದು ಕತೆ ಬರೆದು ಅದನ್ನು ಶಾರ್ಟ್ ಫಿಲಂ ಮಾಡಲು ಊರಿಗೆ ಹೋಗಲು ರೆಡಿಯಾಗಿದ್ದಾಗಲೇ ಜಿಮ್ ನಲ್ಲಿ ನಿರ್ದೇಶಕ ಸೂರಿ ಸಿಕ್ಕಿ ವಿಲನ್ ಪಾತ್ರ ಮಾಡುತ್ತೀಯಾ ಎಂದು ಕೇಳಿದ್ದಾರೆ. ಒಂದೇ ಏಟಿಗೆ ಹೂ ಎಂದು ಒಪ್ಪಿಕೊಂಡ ಡಾಲಿ ಧನಂಜಯ್, ಆ ಪಾತ್ರಕ್ಕೆ ತಯಾರಾಗಿ, ಆವರೆಗೆ ತಾವು ಅನುಭವಿಸಿದ ನೋವುಗಳನ್ನೆಲ್ಲ ಆ ಪಾತ್ರದ ಮೇಲೆ ಹಾಕಿ ಅದ್ಭುತವಾಗಿ ಪ್ರದರ್ಶನ ನೀಡಿ ನಟರಾಕ್ಷಸ ಎನಿಸಿಕೊಂಡರು. ಆಮೇಲಿನದ್ದೆಲ್ಲ ಇತಿಹಾಸ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು