ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಧ್ರುವಂತ್ ಔಟ್; ಕಿಚ್ಚನ ಚಪ್ಪಾಳೆಯೇ ಮುಳುವಾಯ್ತಾ?

ಒಂಟಿಯಾಗಿ ಆಟ ಆಡುತ್ತಿದ್ದ ಧ್ರುವಂತ್ ಅವರು ಫಿನಾಲೆ ತಲುಪುವುದಕ್ಕೂ ಮುನ್ನವೇ ಔಟ್ ಆಗಿದ್ದಾರೆ. 108ನೇ ದಿನ ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್ ನಡೆದಿದ್ದು, ಧ್ರುವಂತ್ ಅವರ ಆಟ ಅಂತ್ಯ ಆಗಿದೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದಾರೆ.

ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಧ್ರುವಂತ್ ಔಟ್; ಕಿಚ್ಚನ ಚಪ್ಪಾಳೆಯೇ ಮುಳುವಾಯ್ತಾ?
Dhruvanth

Updated on: Jan 14, 2026 | 11:10 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ರಿಯಾಲಿಟಿ ಶೋನಲ್ಲಿ ಅಂತಿಮ ವಾರಕ್ಕೆ ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ ಶೈವ, ಮ್ಯಾಟೆಂಟ್ ರಘು, ಧ್ರುವಂತ್ (Dhruvanth), ಧನುಷ್, ರಕ್ಷಿತಾ ಶೆಟ್ಟಿ ಅವರು ಕಾಲಿಟ್ಟಿದ್ದರು. ಆದರೆ ಇವರಲ್ಲಿ ಒಬ್ಬರ ಆಟ ವಾರದ ಮಧ್ಯೆಯೇ ಅಂತ್ಯ ಆಗಲಿದೆ ಎಂದು ಮೊದಲೇ ಹೇಳಲಾಗಿತ್ತು. ಅದರಂತೆ 108ನೇ ದಿನದಲ್ಲಿ ಮಿಡ್ ವೀಕ್ ಎಲಿಮಿನೇಷನ್ (Mid Week Elimination) ನಡೆದಿದೆ. ಧ್ರುವಂತ್ ಅವರ ಬಿಗ್ ಬಾಸ್ ಆಟ ಅಂತ್ಯವಾಗಿದೆ. ಫಿನಾಲೆಗೆ ಹೋಗಬೇಕು, ಟ್ರೋಫಿ ಗೆಲ್ಲಬೇಕು ಎಂಬ ಅವರ ಕನಸು ಭಗ್ನವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ ಅವರು ಬಹುತೇಕ ಒಂಟಿಯಾಗಿ ಗುರುತಿಸಿಕೊಂಡಿದ್ದರು. ಅವರು ಯಾವುದೇ ರೀತಿಯ ಗುಂಪುಗಾರಿಕೆ ಮಾಡಿರಲಿಲ್ಲ. ಸೀಸನ್ ಮಧ್ಯದಲ್ಲಿ ಅವರು ಸ್ವಲ್ಪ ಕುಗ್ಗಿದ್ದರು. ತಾವಾಗಿಯೇ ಶೋ ತೊರೆಯುವ ನಿರ್ಧಾರ ಕೂಡ ಮಾಡಿದ್ದರು. ಆದರೆ ಸುದೀಪ್ ಅವರು ಧೈರ್ಯ ತುಂಬಿದ ಬಳಿಕ ಮರಳಿ ಆಟವನ್ನು ಚುರುಕುಗೊಳಿಸಿದ್ದರು. ಆದರೆ ಈಗ ಅವರು ಎಲಿಮಿನೇಟ್ ಆಗಿದ್ದಾರೆ.

ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಗಿಲ್ಲ ನಟ, ಧನುಷ್, ಮ್ಯೂಟೆಂಟ್ ರಘು ಮತ್ತು ಕಾವ್ಯಾ ಶೈವ ಅವರು ಈಗ ಬಿಗ್ ಬಾಸ್ ಫಿನಾಲೆಗೆ ಎಂಟ್ರಿ ನೀಡಿದ್ದಾರೆ. ಪೈಪೋಟಿ ಜೋರಾಗಿದೆ. ಆದರೆ ಎಲ್ಲರಿಗಿಂತ ಗಿಲ್ಲಿ ನಟ ಅವರಿಗೆ ಹೆಚ್ಚು ಫ್ಯಾನ್ ಫಾಲೋಯಿಂಗ್ ಇದೆ. ಹಾಗಾಗಿ ಅವರೇ ಬಿಗ್ ಬಾಸ್ ಟ್ರೋಫಿ ಗೆಲ್ಲಬಹುದು ಎಂಬ ಅಭಿಪ್ರಾಯ ಬಲವಾಗಿದೆ. ಅವರ ಪರವಾಗಿ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ.

ಧನುಷ್ ಅವರಿಗೆ ಕಳೆದ ವಾರ ಕಿಚ್ಚ ಸುದೀಪ್ ಅವರು ಚಪ್ಪಾಳೆ ನೀಡಿದ್ದರು. ಇಡೀ ಸೀಸನ್​ನ ಆಟವನ್ನು ಪರಿಗಣಿಸಿ ಅವರಿಗೆ ಕಿಚ್ಚನ ಚಪ್ಪಾಳೆ ನೀಡಲಾಗಿತ್ತು. ಆದರೆ ಅದು ವೀಕ್ಷಕರಿಗೆ ಇಷ್ಟ ಆಗಲಿಲ್ಲ. ಪೂರ್ತಿ ಸೀಸನ್​ನ ಪರಿಗಣಿಸಿ ಧ್ರುವಂತ್​ಗೆ ಕಿಚ್ಚನ ಚಪ್ಪಾಳೆ ನೀಡದ್ದನ್ನು ಖಂಡಿಸಿ ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಧ್ರುವಂತ್​ಗೆ ಸೀಸನ್ ಚಪ್ಪಾಳೆ ಬದಲು ವಾರದ ಚಪ್ಪಾಳೆ; ನಿರ್ಧಾರ ಬದಲಿಸಿದ ಬಿಗ್ ಬಾಸ್

ಕಿಚ್ಚನ ಚಪ್ಪಾಳೆ ಪಡೆದ ಬಳಿಕ ಧ್ರುವಂತ್ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಅಭಿಪ್ರಾಯ ಜಾಸ್ತಿ ಆಯಿತು. ಆ ಕಾರಣದಿಂದಲೂ ಅವರಿಗೆ ಕಡಿಮೆ ವೋಟ್ ಬಂದಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಹಾಗೆ ಆಗದೇ ಇದ್ದಿದ್ದರೆ ಅವರು ಕೊನೇ ಪಕ್ಷ ಫಿನಾಲೆಗಾದರೂ ಬರುತ್ತಿದ್ದರು ಎಂಬುದು ಹಲವರ ಅಭಿಪ್ರಾಯ. ಅಂತಿಮವಾಗಿ ಯಾರು ಟ್ರೋಫಿ ಗೆಲ್ಲುತ್ತಾರೆ ಎಂಬುದನ್ನು ತಿಳಿಯಲು ಕಾತರ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.