
ಧ್ರುವಂತ್ ಅವರಿಗೆ ಸೀಸನ್ ಚಪ್ಪಾಳೆ ಸಿಕ್ಕಿತ್ತು. ಅದಕ್ಕೂ ಮೊದಲು ಅವರು ಅಷ್ಟಾಗಿ ಸ್ಟ್ರಾಂಗ್ ಸ್ಪರ್ಧಿಯೇ ಅಲ್ಲ ಎಂಬಂತೆ ಆಗಿತ್ತು. ಯಾವಾಗ ಅವರು ಸೀಕ್ರೆಟ್ ರೂಂ ಹೋದರೋ ಅಲ್ಲಿಂದ ಅವರ ಆಟ ಸಂಪೂರ್ಣವಾಗಿ ಬದಲಾಗಿತ್ತು ಎಂದರೂ ತಪ್ಪಾಗಲಿಕ್ಕಿಲ್ಲ. ಈಗ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಈ ಬೆನ್ನಲ್ಲೇ ಅವರ ಕುರಿತ ಮೀಮ್ ಒಂದು ವೈರಲ್ ಆಗಿ ಗಮನ ಸೆಳೆದಿದೆ. ಅಷ್ಟಕ್ಕೂ ಏನು ಆ ಮೀಮ್? ಇಲ್ಲಿದೆ ವಿವರ.
ಧ್ರುವಂತ್ ಅವರು ಫಿನಾಲೆಗೂ ಮೊದಲು ವಾರದ ಮಧ್ಯವೇ ಎಲಿಮಿನೇಟ್ ಆಗಿದ್ದಾರೆ. ಕಡಿಮೆ ವೋಟ್ ಪಡೆದು ಅವರು ಹೊರ ಹೋದರು. ಇದಕ್ಕೂ ಮೊದಲು ಬಿಗ್ ಬಾಸ್ ಮನೆಗೆ ಬಂದ ಜನರ ಎದುರು ಅವರು ಆವೇಶದಿಂದ ಮಾತನಾಡಿದ್ದರು. ಆ ವಿಡಿಯೋನ ವೈರಲ್ ಮಾಡಿ ಚಿಕ್ಕಣ್ಣನ ಮೀಮ್ ಹಾಕಲಾಗಿದೆ.
‘ಬಿಗ್ ಬಾಸ್ ಮನೆಯಲ್ಲಿ 24 ಜನರು ಇದ್ದರು. ನಾನು ಅದನ್ನು 6ಕ್ಕೆ ಇಳಿಸಿದ್ದೇನೆ. ನನಗೆ ಕಾಂಪಿಟೇಟರ್ ಇರಬಾರದು’ ಎಂದು ಬಿಗ್ ಬಾಸ್ ಮನೆಗೆ ಬಂದ ಅತಿಥಿಗಳ ಎದುರು ಹೇಳಿದ್ದರು. ಈ ವಿಡಿಯೋಗೆ ‘ಮಾಸ್ಟರ್ಪೀಸ್’ ಸಿನಿಮಾದಲ್ಲಿ ಬರೋ ಚಿಕ್ಕಣ್ಣನ ವಿಡಿಯೋ ಕ್ಲಿಪ್ ಹಾಕಲಾಗಿದೆ. ‘ನೀನು ಗೆದ್ರೆ ತಾನೆ’ ಎಂದು ಚಿಕ್ಕಣ್ಣ ಹೇಳುತ್ತಾರೆ. ಈ ವಿಡಿಯೋ ಗಮನ ಸೆಳೆಯುತ್ತಿದೆ.
ಧ್ರುವಂತ್ ಅವರು ಈ ಮೊದಲು ಸ್ಪರ್ಧಿ ಎಂದೇ ಎನಿಸಿಕೊಂಡಿರಲಿಲ್ಲ. ಅವರು ಬೇಗ ಎಲಿಮಿನೇಷನ್ ಆಗುವ ಸಾಧ್ಯತೆ ಇತ್ತು. ಆದರೆ, ನಂತರ ಅವರ ಆಟದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡರು. ಇತ್ತೀಚೆಗೆ ಅವರು ಸಾಕಷ್ಟು ಹೈಪ್ ಪಡೆದುಕೊಂಡರು. ಇದರಿಂದ ಅವರು ತಾವು ಫಿನಾಲೆ ಏರಿ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆಯಲ್ಲಿ ಇದ್ದಂತೆ ಕಾಣಿಸುತ್ತದೆ.
ಇದನ್ನೂ ಓದಿ: ಎಲಿಮಿನೇಷನ್ ವಿಷಯದಲ್ಲಿ ಕಣ್ಣೀರು ಹಾಕಿ ನಾಟಕ ಆಡಿದ್ದ ಧ್ರುವಂತ್; ಕರ್ಮ ಹೇಗೆ ತಿರುಗುತ್ತೆ ನೋಡಿ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈಗ ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯಾ ಶೈವ, ರಕ್ಷಿತಾ ಶೆಟ್ಟಿ, ಧನುಶ್ ಹಾಗೂ ರಘು ಇದ್ದಾರೆ. ಇವರ ಪೈಕಿ ಒಬ್ಬರು ಕಪ್ ಗೆಲ್ಲುತ್ತಾರೆ. ಶನಿವಾರ ಒಬ್ಬರನ್ನು ಎಲಿಮಿನೇಷನ್ ಮಾಡಿ, ಉಳಿದವರನ್ನು ಎರಡನೇ ದಿನದ ಫಿನಾಲೆಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.