
ಧ್ರುವಂತ್ ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಯಾವ ಕ್ಷಣದಲ್ಲಿ ಯಾರ ಜೊತೆ ಅವರು ಹೇಗಿರುತ್ತಾರೆ ಎಂಬುದನ್ನು ಊಹಿಸೋದು ಕೂಡ ಕಷ್ಟ. ಒಬ್ಬರ ಜೊತೆ ಒಳ್ಳೆಯ ರೀತಿಯಲ್ಲಿ ಮಾತನಾಡಿ, ನಂತರ ಅವರ ವಿರುದ್ಧವೇ ಪಿತೂರಿ ಮಾಡುತ್ತಾರೆ. ಈ ವಿಷಯ ಮನೆಯ ಇತರ ಸ್ಪರ್ಧಿಗಳಿಗೆ ಇಷ್ಟ ಆಗಿಲ್ಲ. ಇದನ್ನು ಸುದೀಪ್ ಎದುರು ಎಲ್ಲರೂ ಹೇಳಿದ್ದಾರೆ. ಹೀಗಾಗಿ, ಧ್ರುವಂತ್ ಅವರು ಬಿಗ್ ಬಾಸ್ನಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.
ಭಾನುವಾರ ಸುದೀಪ್ ಒಂದು ಚಟುವಟಿಕೆ ನೀಡಿದರು. ಈ ಚಟುವಟಿಕೆ ಪ್ರಕಾರ ಟೇಬಲ್ ಮೇಲಿರುವ ಕೆಲವು ಬೋರ್ಡ್ಗಳನ್ನು ಸರಿ ಹೊಂದುವ ಸ್ಪರ್ಧಿಗಳಿಗೆ ನೀಡಬೇಕು. ಇಲ್ಲಿ ಎಲ್ಲವೂ ನೆಗೆಟಿವ್ ಟ್ಯಾಗ್ಗಳೇ ಇದ್ದವು. ಅನೇಕರು ಧ್ರುವಂತ್ ಹೆಸರನ್ನು ತೆಗೆದುಕೊಂಡರು. ಆಗಲೇ ಅವರಿಗೆ ಬೇಸರವಾಗಿ ಹೊರ ಹೋಗುತ್ತೇನೆ ಎಂದು ಸುದೀಪ್ ಬಳಿ ಹೇಳಿಕೊಂಡರು.
ಇದಕ್ಕೆ ಸುದೀಪ್ ಅವರು ಒಪ್ಪಿಗೆ ಕೊಟ್ಟಿಲ್ಲ. ‘ಒಳಕ್ಕೆ ಹೋಗೋದು ಮಾತ್ರ ನಿಮ್ಮ ನಿರ್ಧಾರ. ಆ ಬಳಿಕ ಏನೇ ಆದರೂ ಜನ ನಿರ್ಧರಿಸಬೇಕು. ನಿಮ್ಮ ಅಗ್ರಿಮೆಂಟ್ನಲ್ಲಿ ಏನಿದೆ ಎಂಬುದು ನಿಮಗೆ ಗೊತ್ತಿದೆ ಅಲ್ಲವೆ’ ಎಂದು ಸುದೀಪ್ ನೆಪಿಸಿದರು. ಶೋ ಮುಗಿದ ಬಳಿಕ ಧ್ರುವಂತ್ ಅವರು ಕ್ಯಾಮೆರಾ ಬಳಿ ಮಾತನಾಡಿದ್ದಾರೆ.
ಇದನ್ನೂ ಓದಿ: ಗಿಲ್ಲಿ-ರಘು ಗೆಳೆತನದಲ್ಲಿ ಬಿರುಕು; ಜಗಳ ತಪ್ಪಿಸಲು ಇಡೀ ಮನೆ ಬರಬೇಕಾಯ್ತು
‘ನನ್ನ ಕ್ಯಾರೆಕ್ಟರ್ ಜೊತೆ ಕಾಂಪ್ರಮೈಸ್ ಆಗಬೇಕಾದ ದಿನ ಬಂದಾಗ ನಾನು ಬದುಕಿರೋದಿಲ್ಲ. ಇಲ್ಲಿ ಇರುವುದಕ್ಕೆ ಅಥವಾ ಪೇಮೆಂಟ್ ಸಿಗುತ್ತದೆ ಎಂಬ ಕಾರಣಕ್ಕೆ ಸೇಫ್ ಗೇಮ್ ಆಡೋಕೆ ನನಗೆ ಇಷ್ಟ ಇಲ್ಲ. ಈ ಗೇಮ್ ಅಲ್ಲಿ ಮುಂದುವರಿಯಬೇಕು ಎಂಬ ಕಾರಣಕ್ಕೆ ಬಹಳ ಒಳ್ಳೆಯವನ ರೀತಿ ಇರೋಕೆ ಸಾಧ್ಯವಿಲ್ಲ. ಈ ಶೋನಿಂದ ಹೊರ ಹೋಗೋದು ನನಗೆ ಇಷ್ಟ. ನಿಮ್ಮ ಜೊತೆ ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದೇನೆ. ಇಲ್ಲಿಂದ ನನ್ನನ್ನು ಕಳುಹಿಸಿ’ ಎಂದು ಧ್ರುವಂತ್ ಅವರು ಕ್ಯಾಮೆರಾ ಎದುರು ಕೋರಿಕೆ ಇಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.