ಯಶ್-ರಚಿತಾ ರಾಮ್ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದರಾ? ಇಲ್ಲಿದೆ ಅಸಲಿಯತ್ತು

| Updated By: ಮಂಜುನಾಥ ಸಿ.

Updated on: Feb 22, 2025 | 7:30 AM

Yash and Rachita Ram: ನಟ ಯಶ್ ಮೊದಲು ನಾಟಕಗಳಲ್ಲಿ ನಟಿಸಿ ಬಳಿಕ ಧಾರಾವಾಹಿಗಳಲ್ಲಿ ನಟಿಸಿ ಆ ನಂತರ ಸಿನಿಮಾಕ್ಕೆ ಬಂದವರು. ರಚಿತಾ ರಾಮ್ ಸಹ ಧಾರಾವಾಹಿಗಳಿಂದಲೇ ವೃತ್ತಿ ಆರಂಭಿಸಿದವರು. ಅಂದಹಾಗೆ ಯಶ್ ಮತ್ತು ರಚಿತಾ ರಾಮ್ ಮತ್ತು ಯಶ್ ಇಬ್ಬರೂ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದರೆ? ಇಲ್ಲಿದೆ ನೋಡಿ ಸತ್ಯ.

ಯಶ್-ರಚಿತಾ ರಾಮ್ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದರಾ? ಇಲ್ಲಿದೆ ಅಸಲಿಯತ್ತು
Yash Rachita Ram
Follow us on

ಯಶ್ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ. ಅವರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುತ್ತಾರೆ. ಯಶ್ ಅವರ ಹಳೆಯ ವಿಡಿಯೋಗಳು ಆಗಾಗ ವೈರಲ್ ಆಗುತ್ತವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. ಈಗ ಕಿರುತೆರೆಯಲ್ಲಿ ಅವರ ಧಾರಾವಾಹಿ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯಶ್ ಅವರು ನಟಿಯೊಬ್ಬರ ಜೊತೆ ಮಾತನಾಡುವುದು ಇದೆ. ಈ ನಟಿ ರಚಿತಾ ರಾಮ್ ಎಂದು ಅನೇಕರು ಹೇಳಿದ್ದಾರೆ. ಆದರೆ, ಅಸಲಿಗೆ ಅವರು ರಚಿತಾ ರಾಮ್ ಅಲ್ಲ, ಅವರ ಸಹೋದರಿ ನಿತ್ಯಾ ರಾಮ್. ಈ ವಿಡಿಯೋ ಕಮೆಂಟ್ ಬಾಕ್ಸ್ನಲ್ಲಿ ಕೆಲವರು ಅಸಲಿ ವಿಚಾರ ಹೇಳುವ ಪ್ರಯತ್ನ ಮಾಡಿದ್ದಾರೆ.

ನಿತ್ಯಾ ರಾಮ್ ಕೂಡ ರಚಿತಾ ರಾಮ್ ರೀತಿಯೇ ಹೀರೋಯಿನ್. ಅವರು ಸಿನಿಮಾಗಿಂತ ಧಾರಾವಾಹಿಗಳಲ್ಲಿ ನಟಿಸಿದ್ದೇ ಹೆಚ್ಚು. ಸದ್ಯ ತಮಿಳಿನ ‘ಅಣ್ಣ’ ಹಾಗೂ ಕನ್ನಡದ ‘ಶಾಂತಿ ನಿವಾಸ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅವರು ಈ ಮೊದಲು ಯಶ್ ಜೊತೆ ಧಾರಾವಾಹಿ ಒಂದರಲ್ಲಿ ಕಾಣಿಸಿಕೊಂಡಿದ್ದರು. ಆ ದೃಶ್ಯಗಳನ್ನು ಈಗ ವೈರಲ್ ಮಾಡಲಾಗಿದೆ. ಆದರೆ, ಅವರನ್ನು ಕೆಲವರು ರಚಿತಾ ರಾಮ್ ಎಂದಿದ್ದಾರೆ.

ಯಶ್ ಅವರು ಕಿರುತೆರೆ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು. ಆ ಬಳಿಕ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದರು. ಈಗ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿದೆ. ‘ಕೆಜಿಎಫ್ 2’ ಮೂಲಕ ಸಖತ್ ಫೇಮಸ್ ಆದರು.

ಇದನ್ನೂ ಓದಿ:ನಟ ಯಶ್​ಗೆ ಅವಮಾನ ಮಾಡಿದ ಮಲಯಾಳಂ ಸಿನಿಮಾ

ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಗೊವಾದಲ್ಲಿ ಸಿನಿಮಾದ ಶೂಟ್ ನಡೆದಿದೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಟೀಸರ್ಗೆ ಅಭಿಮಾನಿಗಳು ಕಾದಿದ್ದರು. ಯಶ್ ಜನ್ಮದಿನದ ಪ್ರಯುಕ್ತ ಜನವರಿ 8ರಂದು ಚಿತ್ರದ ಟೀಸರ್ ರಿಲೀಸ್ ಆಯಿತು. ಈ ಟೀಸರ್ಗ್​ಗೆ ಮಿಶ್ರಪ್ರತಿಕ್ರಿಯೆ ಕೇಳಿ ಬಂದಿದೆ. ರಚಿತಾ ರಾಮ್ ಅವರು ಇತ್ತೀಚೆಗೆ ‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ಕಾಣಿಸಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ