‘ವೀಕೆಂಡ್ ವಿತ್ ರಮೇಶ್’ನಲ್ಲಿ ತಮ್ಮನ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ ಡಿಕೆ ಶಿವಕುಮಾರ್​

| Updated By: Digi Tech Desk

Updated on: Jun 07, 2023 | 12:16 PM

DK Shivakumar: ಸಹೋದರ ಡಿಕೆ ಸುರೇಶ್ ಬಗ್ಗೆ ಶಿವಕುಮಾರ್​ಗೆ ವಿಶೇಷ ಪ್ರೀತಿ ಇದೆ. ಇದು ಅನೇಕ ಬಾರಿ ಸಾಬೀತಾಗಿದೆ. ತಮ್ಮನ ಜೊತೆಗಿನ ಒಡನಾಟದ ಕುರಿತು ಮಾತನಾಡುವಾಗ ಡಿಕೆಶಿ ಭಾವುಕರಾಗಿ ಕಣ್ಣೀರು ಹಾಕಿದರು.

‘ವೀಕೆಂಡ್ ವಿತ್ ರಮೇಶ್’ನಲ್ಲಿ ತಮ್ಮನ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ ಡಿಕೆ ಶಿವಕುಮಾರ್​
ಡಿಕೆ ಸುರೇಶ್​-ಡಿಕೆ ಶಿವಕುಮಾರ್
Follow us on

ಡಿ.ಕೆ. ಶಿವಕುಮಾರ್ ಅವರು ‘ವೀಕೆಂಡ್ ವಿತ್ ರಮೇಶ್​​’ನ (Weekend With Ramesh) ಈ ವಾರದ ಎಪಿಸೋಡ್​ಗೆ ಬರುತ್ತಿದ್ದಾರೆ. ಶನಿವಾರ ಹಾಗೂ ಭಾನುವಾರ ಈ ಎಪಿಸೋಡ್ ಪ್ರಸಾರ ಕಾಣಲಿದೆ. ಡಿಕೆಶಿ ಅವರ ಜೀವನವನ್ನು ಜನರ ಮುಂದಿಡುವ ಕೆಲಸ ಆಗಲಿದೆ. ಇದು ‘ವೀಕೆಂಡ್ ವಿತ್ ರಮೇಶ್ ಸೀಸನ್​ 5’ರ ಕೊನೆಯ ಎಪಿಸೋಡ್ ಆದ ಕಾರಣ ಹೆಚ್ಚು ಪ್ರಮೋಷನ್ ಮಾಡಲಾಗುತ್ತಿದೆ. ಜೀ ಕನ್ನಡ ವಾಹಿನಿ ವಿವಿಧ ಪ್ರೋಮೋ ಹಂಚಿಕೊಳ್ಳುತ್ತಿದೆ. ಈಗ ಡಿಕೆ ಶಿವಕುಮಾರ್ (DK Shivakumar) ಅವರು ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ.

ಸಹೋದರ ಡಿಕೆ ಸುರೇಶ್ ಬಗ್ಗೆ ಶಿವಕುಮಾರ್​ಗೆ ವಿಶೇಷ ಪ್ರೀತಿ ಇದೆ. ಇದು ಅನೇಕ ಬಾರಿ ಸಾಬೀತಾಗಿದೆ. ಇಬ್ಬರೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಅವರು ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರೆ, ಸುರೇಶ್ ಬೆಂಗಳೂರು ಗ್ರಾಮಾಂತರದಲ್ಲಿ ಸ್ಪರ್ಧಿಸಿದ್ದಾರೆ. ತಮ್ಮನ ಜೊತೆಗಿನ ಒಡನಾಟದ ಕುರಿತು ಮಾತನಾಡುವಾಗ ಡಿಕೆಶಿ ಭಾವುಕರಾಗಿ ಕಣ್ಣೀರು ಹಾಕಿದರು.

ಇದನ್ನೂ ಓದಿ: ಹೊರಗೆ ಟಫ್ ಆಗಿರೋ ಡಿಕೆ ಶಿವಕುಮಾರ್​ ಮನೆಯಲ್ಲಿ ಹೇಗಿರ್ತಾರೆ?; ವೀಕೆಂಡ್​ ವಿತ್ ರಮೇಶ್​ನಲ್ಲಿ ವಿವರಿಸಿದ ಮಗಳು ಐಶ್ವರ್ಯಾ

‘ನಾವು ಮೂರು ಜನರು ಒಟ್ಟಿಗೆ ಇರೋಕೆ ಆಗಲೇ ಇಲ್ಲ. ನನ್ನ ಅಂತರಾಳ ಅನೇಕರಿಗೆ ಗೊತ್ತಿಲ್ಲ. ಅವನು ನನ್ನ ತಮ್ಮ ಆದರೂ ಮಗ ಇದ್ದ ಹಾಗೆ’ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ ಡಿಕೆ ಶಿವಕುಮಾರ್. ಡಿಕೆ ಶಿವಕುಮಾರ್ ಓದಿ ಒಳ್ಳೆಯ ಕೆಲಸ ಹಿಡಿಯಬೇಕು ಎಂಬುದು ಅವರ ಪಾಲಕರ ಕನಸಾಗಿತ್ತು. ಆದರೆ ಅವರು ಓದಲೇ ಇಲ್ಲ. ಇದನ್ನು ಅವರು ಹೇಳಿಕೊಂಡಿದ್ದಾರೆ. ಅವರ ಕುಟುಂಬದವರು ‘ವೀಕೆಂಡ್ ವಿತ್ ರಮೇಶ್’ ವೇದಿಕೆ ಏರಿದ್ದಾರೆ.


ಇದನ್ನೂ ಓದಿ: ಡಿಕೆ ಶಿವಕುಮಾರ್​​ನ ಮೊದಲು ನೋಡಿದ ರಾಜೀವ್ ಗಾಂಧಿ ಹೇಳಿದ್ದು ಒಂದೇ ಮಾತು; ‘ವೀಕೆಂಡ್..’ ಶೋನಲ್ಲಿ​ ವಿವರಿಸಿದ ಡಿಕೆಶಿ

‘ವೀಕೆಂಡ್ ವಿತ್ ರಮೇಶ್​ ಸೀಸನ್ 5’ ಮಾರ್ಚ್​ ತಿಂಗಳಲ್ಲಿ ಆರಂಭ ಆಯಿತು. ಮೊದಲ ಅತಿಥಿಯಾಗಿ ರಮ್ಯಾ ಆಗಮಿಸಿದ್ದರು. ನಂತರ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ, ಡಾಕ್ಟರ್​ ಮಂಜುನಾಥ್, ಹಿರಿಯ ನಟ ದತ್ತಣ್ಣ, ಅವಿನಾಶ್, ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ನೆನಪಿರಲಿ ಪ್ರೇಮ್ ಮೊದಲಾದವರು ಬಂದು ಸಾಧಕರ ಚೇರ್ ಮೇಲೆ ಕುಳಿತಿದ್ದಾರೆ. ಈಗ ಡಿಕೆ ಶಿವಕುಮಾರ್ ಅವರ ಬದುಕಿನ ಬಗ್ಗೆ ತಿಳಿದುಕೊಳ್ಳುವ ಸಮಯ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:25 am, Wed, 7 June 23