‘ನಿನ್ನ ಡ್ರೋನ್ ರೆಕ್ಕೆ-ಪುಕ್ಕ ಕಿತ್ತು ಹಾಕ್ತೀನಿ’; ಪ್ರತಾಪ್​ಗೆ ಎಚ್ಚರಿಕೆ ಕೊಟ್ಟ ವಿನಯ್

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ತುಕಾಲಿ ಸಂತೋಷ್ ಹಾಗೂ ವರ್ತೂರ್ ಸಂತೋಷ್ ಕೂಡ ಡ್ರೋನ್ ವಿಚಾರ ಇಟ್ಟುಕೊಂಡು ಟೀಕೆ ಮಾಡಿದ್ದಾರೆ. ಇನ್ನು, ಸ್ನೇಹಿತ್ ಅವರು ಪ್ರತಾಪ್ ಅವರನ್ನು ಡೋಂಗಿ ಎಂದು ಕರೆದಿದ್ದಾರೆ.

‘ನಿನ್ನ ಡ್ರೋನ್ ರೆಕ್ಕೆ-ಪುಕ್ಕ ಕಿತ್ತು ಹಾಕ್ತೀನಿ’; ಪ್ರತಾಪ್​ಗೆ ಎಚ್ಚರಿಕೆ ಕೊಟ್ಟ ವಿನಯ್
ಪ್ರತಾಪ್-ವಿನಯ್

Updated on: Oct 13, 2023 | 12:53 PM

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಮನೆಗೆ 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಪ್ರತಿ ಸ್ಪರ್ಧಿಗಳ ಮನಸ್ಥಿತಿ ಬೇರೆ ಬೇರೆ ರೀತಿಯಲ್ಲಿದೆ. ಈ ಕಾರಣದಿಂದಲೇ ಮನೆಯಲ್ಲಿ ಜಗಳಗಳು ಆಗುತ್ತಿವೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿಲ್ಲ. ಅನೇಕರು ಡ್ರೋನ್ ಪ್ರತಾಪ್ (Drone Prathap) ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈಗ ವಿನಯ್ ಗೌಡ ಅವರು ಡ್ರೋನ್ ಪ್ರತಾಪ್​ಗೆ ಎಚ್ಚರಿಕೆ ಕೊಟ್ಟಿದ್ದಾರೆ. ‘ನಿನ್ನ ಡ್ರೋನ್ ರೆಕ್ಕೆ-ಪುಕ್ಕ ಕಿತ್ತು ಹಾಕ್ತೀನಿ’ ಎಂದು ಹೇಳಿದ್ದಾರೆ. ಸದ್ಯ ಕಲರ್ಸ್ ಕನ್ನಡ ಹಂಚಿಕೊಂಡಿರುವ ಪ್ರೋಮೋ ಗಮನ ಸೆಳೆಯುತ್ತಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಅರ್ಹರು ಹಾಗೂ ಅನರ್ಹರು ಎಂದು ಎರಡು ವಿಧ ಮಾಡಲಾಗಿದೆ. ಅನರ್ಹರು ಮನೆಯನ್ನು ಕ್ಲೀನ್ ಮಾಡಬೇಕು. ಅಡುಗೆಯನ್ನೂ ಅವರೇ ಮಾಡಬೇಕು. ಅಡುಗೆ ಚೆನ್ನಾಗಿ ಮಾಡಿಲ್ಲ ಎಂದು ವಿನಯ್ ಗೌಡ ದೂರು ನೀಡಿದ್ದಾರೆ ಎಂಬುದಾಗಿ ಡ್ರೋನ್ ಪ್ರತಾಪ್ ಹೇಳಿದರು. ಆದರೆ, ವಿನಯ್ ತಾವು ಆ ರೀತಿ ಹೇಳಿಯೇ ಇಲ್ಲ ಎಂದರು. ಇಬ್ಬರ ಮಧ್ಯೆ ಕಿತ್ತಾಟ ನಡೆಯಿತು. ಈ ವೇಳೆ ‘ನಿನ್ನ ಡ್ರೋನ್ ರೆಕ್ಕೆ-ಪುಕ್ಕ ಕಿತ್ತು ಹಾಕ್ತೀನಿ’ ಎಂದು ಪ್ರತಾಪ್​ಗೆ ವಿನಯ್ ಎಚ್ಚರಿಕೆ ಕೊಟ್ಟರು.

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ತುಕಾಲಿ ಸಂತೋಷ್ ಹಾಗೂ ವರ್ತೂರ್ ಸಂತೋಷ್ ಕೂಡ ಡ್ರೋನ್ ವಿಚಾರ ಇಟ್ಟುಕೊಂಡು ಟೀಕೆ ಮಾಡಿದ್ದಾರೆ. ಇನ್ನು, ಸ್ನೇಹಿತ್ ಅವರು ಪ್ರತಾಪ್ ಅವರನ್ನು ಡೋಂಗಿ ಎಂದು ಕರೆದಿದ್ದಾರೆ. ಈ ವಿಚಾರ ವೀಕೆಂಡ್​ನಲ್ಲಿ ಚರ್ಚೆಗೆ ಬರೋ ಸಾಧ್ಯತೆ ಇದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆ ಸೇರಿರೋ ಸಂಗೀತಾ ಮತ್ತು ಕಾರ್ತಿಕ್ ಮಧ್ಯೆ ಸಮ್​ಥಿಂಗ್ ಸ್ಪೆಷಲ್?

ಇಂದು (ಅಕ್ಟೋಬರ್ 13) ರಾತ್ರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us