ಈ ಬಾರಿ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಸ್ಪರ್ಧಿಸುತ್ತಿರುವ ಸದಸ್ಯರ ಪೈಕಿ ಮೊದಲ ವಾರದಲ್ಲೇ ಅತಿ ಹೆಚ್ಚು ಚರ್ಚೆಗೆ ಒಳಗಾದ ವ್ಯಕ್ತಿ ಎಂದರೆ ಅದು ಡ್ರೋನ್ ಪ್ರತಾಪ್. ಹಲವು ಕಾರಣಗಳಿಂದಾಗಿ ಅವರನ್ನು ಟಾರ್ಗೆಟ್ ಮಾಡಲಾಗಿತ್ತು. ಮೊದಲನೆಯದಾಗಿ ಅವರು ಅಸಮರ್ಥರ ಗುಂಪಿನಲ್ಲಿ ಇದ್ದರು. ಎರಡನೆಯದಾಗಿ ಅವರನ್ನು ಅನೇಕರು ಹೀಯಾಳಿಸಿದ್ದರು. ಆ ನೋವಿನಿಂದಾಗಿ ಪ್ರತಾಪ್ (Drone Prathap) ಅವರು ಕಣ್ಣೀರು ಹಾಕಿದ್ದರು. ಆದರೆ ಶನಿವಾರದ (ಅಕ್ಟೋಬರ್ 14) ಎಪಿಸೋಡ್ನಲ್ಲಿ ಪ್ರತಾಪ್ ಅವರಿಗೆ ಕಿಚ್ಚ ಸುದೀಪ್ (Kichcha Sudeep) ಕಡೆಯಿಂದ ಬೆಂಬಲ ಸಿಕ್ಕಿತು. ಇನ್ನುಳಿದವರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡರು. ಸುದೀಪ್ ತುಂಬಿದ ಧೈರ್ಯದಿಂದ ಪ್ರತಾಪ್ ಸಂಪೂರ್ಣ ಬದಲಾಗಿದ್ದಾರೆ. ಅದರ ಝಲಕ್ ತೋರಿಸಲು ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ.
ಇಂದು (ಅಕ್ಟೋಬರ್ 15) ಮೊದಲ ವಾರದ ಎಲಿಮಿನೇಷನ್ ನಡೆಯಲಿದೆ. ಅದಕ್ಕೂ ಮುನ್ನ ಸುದೀಪ್ ಅವರು ಎಲ್ಲರನ್ನೂ ಮಾತನಾಡಿಸಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನ್ಯಾಯದ ತಕ್ಕಡಿ ಏರುಪೇರಾದರೆ ಅದನ್ನು ಸುದೀಪ್ ಅವರು ಸರಿಪಡಿಸುತ್ತಾರೆ. ಸ್ಪರ್ಧಿಗಳ ತಪ್ಪುಗಳನ್ನು ತಿದ್ದಿ ಹೇಳುತ್ತಾರೆ. ಪ್ರತಾಪ್ರನ್ನು ನಿಂದಿಸಿದವರಿಗೆ ಕಿಚ್ಚ ಕಿವಿಮಾತು ಹೇಳಿದ್ದರಿಂದ ಪ್ರತಾಪ್ ಅವರಿಗೆ ಏನೋ ಒಂದು ರೀತಿಯ ಸಮಾಧಾನ ಸಿಕ್ಕಂತೆ ಆಗಿದೆ. ಅಲ್ಲದೇ ಪ್ರತಾಪ್ ಬಗ್ಗೆ ಇನ್ನುಳಿದವರಿಗೆ ಇದ್ದ ಭಾವನೆ ಕೂಡ ಬದಲಾಗಿದೆ.
ಪ್ರತಾಪ್ ಅವರು ಎಲ್ಲರೊಂದಿಗೆ ಬೆರೆಯಬೇಕು ಎಂಬುದು ಬಹುತೇಕರ ಅಭಿಪ್ರಾಯ ಆಗಿತ್ತು. ಅವರು ಯಾವಾಗಲೂ ಚಿಂತೆಯಲ್ಲಿ ಮುಳುಗಿರುತ್ತಾರೆ ಎಂದು ಆರೋಪಿಸಲಾಗಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಪ್ರತಾಪ್ ಅವರು ತನಿಶಾ ಕುಪ್ಪಂಡ ಮತ್ತು ಸಂಗೀತಾ ಶೃಂಗೇರಿ ಜೊತೆ ಸೇರಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಅವರಲ್ಲಿ ಆಗಿರುವ ಬದಲಾವನೆ ಕಂಡು ಎಲ್ಲರಿಗೂ ಅಚ್ಚರಿ ಆಗಿದೆ. ಮನೆಯಲ್ಲಿ ಈ ಮೊದಲು ಉಂಟಾಗಿದ್ದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿದ್ದಕ್ಕಾಗಿ ಕಿಚ್ಚ ಸುದೀಪ್ ಅವರಿಗೆ ಪ್ರೇಕ್ಷಕರು ಭೇಷ್ ಎನ್ನುತ್ತಿದ್ದಾರೆ.
ಇದನ್ನೂ ಓದಿ: ಹರಕೆ ಕುರಿಯಂತಾಗಿದ್ದ ಡ್ರೋನ್ ಪ್ರತಾಪ್ ಬೆಂಬಲಕ್ಕೆ ನಿಂತ ಸುದೀಪ್, ಕ್ಷಮೆ ಕೇಳಿದ ಸಂತೋಶ್
‘ಪ್ರತಾಪ್ ಓಪನ್ಅಪ್ ಆಗಬೇಕು ಎಂದು ತುಕಾಲಿ ಅವರೇ ನೀವು ಹೇಳ್ತಾಯಿದ್ರಿ. ಓಪನ್ಅಪ್ ಮಾಡಿಸುವುದು ಎಂದರೆ ಹೀಗೆ ಸರ್.. ನಮ್ಮದು ವರ್ತೂರು ಟೊಮ್ಯಾಟೋ ಅಲ್ಲ. ನಾಟಿ ಟೊಮ್ಯಾಟೋ.. ವೆರಿ ನಾಟಿ’ ಎಂದು ಕಿಚ್ಚ ಸುದೀಪ್ ಅವರು ಹೇಳಿದ ಡೈಲಾಗ್ ಹೇಳಿ ಎಲ್ಲರೂ ನಕ್ಕಿದ್ದಾರೆ. ಒಟ್ಟಿನಲ್ಲಿ ‘ಸೂಪರ್ ಸಂಡೇ ವಿತ್ ಸುದೀಪ’ ಸಂಚಿಕೆ ಸಖತ್ ಫನ್ ಆಗಿರಲಿದೆ ಎಂಬುದಕ್ಕೆ ಈ ಪ್ರೋಮೋ ಸಾಕ್ಷಿ ಒದಗುಸುತ್ತಿದೆ. ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಬಿಗ್ ಬಾಸ್ ಪ್ರಸಾರ ಆಗುತ್ತಿದೆ. ‘ಜಿಯೋ ಸಿನಿಮಾ’ ಮೂಲಕ 24 ಗಂಟೆ ಉಚಿತವಾಗಿ ಈ ಶೋ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.