ಮೇಕಪ್​ ಮಾಡಿಕೊಂಡು ಹೊಸ ಅವತಾರದಲ್ಲಿ ಪ್ರತಾಪ್​ ಎಂಟ್ರಿ; ತುಕಾಲಿ ಸಂತೋಷ್​ ಕಂಗಾಲು

|

Updated on: Feb 02, 2024 | 2:53 PM

ಬಿಗ್ ಬಾಸ್​ ಫಿನಾಲೆಯಲ್ಲಿ ರನ್ನರ್​ಅಪ್​ ಆದ ಡ್ರೋನ್​ ಪ್ರತಾಪ್​ ಅವರು ಕರ್ನಾಟಕದಲ್ಲಿ ಫುಲ್ ಫೇಮಸ್​ ಆಗಿದ್ದಾರೆ. ಆ ಶೋ ಮುಗಿದ ಕೂಡಲೇ ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿದೆ. ಬಿಗ್​ ಬಾಸ್​ ಮನೆಯೊಳಗೆ ಇದ್ದಾಗ ಸಿಂಪಲ್​ ಆಗಿ ಕಾಣಿಸಿಕೊಳ್ಳುತ್ತಿದ್ದ ಪ್ರತಾಪ್​ ಅವರು ಈಗ ಬದಲಾಗಿದ್ದಾರೆ. ಮೇಕಪ್​ ಹಚ್ಚಿಕೊಂಡು ಮಿಂಚುತ್ತಿದ್ದಾರೆ. ಅವರ ಬದಲಾದ ಗೆಟಪ್​ ನೋಡಿ ತುಕಾಲಿ ಸಂತೋಷ್​ ಅವರಿಗೆ ಅಚ್ಚರಿ ಆಗಿದೆ.

ಮೇಕಪ್​ ಮಾಡಿಕೊಂಡು ಹೊಸ ಅವತಾರದಲ್ಲಿ ಪ್ರತಾಪ್​ ಎಂಟ್ರಿ; ತುಕಾಲಿ ಸಂತೋಷ್​ ಕಂಗಾಲು
ಡ್ರೋನ್​ ಪ್ರತಾಪ್​, ತುಕಾಲಿ ಸಂತೋಷ್
Follow us on

ಇತ್ತೀಚೆಗೆ ಮುಕ್ತಾಯವಾದ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಶೋ ಮೂಲಕ ಡ್ರೋನ್​ ಪ್ರತಾಪ್​ ಅವರ ಜನಪ್ರಿಯತೆ ಹೆಚ್ಚಾಗಿದೆ. ಮೊದಲೆಲ್ಲ ಡ್ರೋನ್​ ಕುರಿತಾದ ವಿವಾದದಿಂದ ಸುದ್ದಿ ಆಗುತ್ತಿದ್ದ ಅವರು ಬಿಗ್​ ಬಾಸ್​ ಶೋಗೆ ಬಂದ ಬಳಿಕ ಬೇರೆಯದೇ ಇಮೇಜ್​ ಪಡೆದುಕೊಂಡರು. ಅವರೊಳಗೆ ಓರ್ವ ಕಲಾವಿದ ಇದ್ದಾನೆ ಎಂದು ಅನೇಕರು ಹೇಳಿದ್ದುಂಟು. ಈಗ ಡ್ರೋನ್​ ಪ್ರತಾಪ್​ (Drone Prathap) ನಿಜಕ್ಕೂ ಕಲಾವಿದ ಆಗಿದ್ದಾರೆ! ಝಗಮಗಿಸುವ ವೇದಿಕೆಯ ಮೇಲೆ ಅವರು ಹೆಜ್ಜೆ ಹಾಕಿದ್ದಾರೆ. ‘ಗಿಚ್ಚಿ ಗಿಲಿಗಿಲಿ ಸೀಸನ್​ 3’ ಕಾರ್ಯಕ್ರಮದಲ್ಲಿ ಅವರು ಡ್ಯಾನ್ಸ್​ ಮಾಡಿದ್ದಾರೆ. ಅವರ ಹೊಸ ಅವತಾರ ನೋಡಿ ತುಕಾಲಿ ಸಂತೋಷ್​ (Tukali Santhosh) ಕಂಗಾಲಾಗಿದ್ದಾರೆ.

ಡ್ರೋನ್​ ಪ್ರತಾಪ್​ ಅವರು ಬಿಗ್ ಬಾಸ್​ ಫಿನಾಲೆಯಲ್ಲಿ ರನ್ನರ್​ಅಪ್​ ಆಗಿ ಹೊರಹೊಮ್ಮಿದರು. ಕೂಡಲೇ ಅವರಿಗೆ ‘ಗಿಚ್ಚಿ ಗಿಲಿ ಗಿಲಿ’ ಶೋನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ದೊಡ್ಮನೆಯಲ್ಲಿ ಸಿಂಪಲ್​ ಆಗಿ ಇರುತ್ತಿದ್ದ ಪ್ರತಾಪ್​ ಅವರು ಈಗ ಮೇಕಪ್​ ಹಚ್ಚಿಕೊಂಡು ಮಿಂಚಲು ಶುರು ಮಾಡಿದ್ದಾರೆ. ಅವರ ಗೆಟಪ್​ ಬದಲಾಗಿದ್ದು ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ತುಕಾಲಿ ಸಂತೋಷ್​ ಅವರು ಅಚ್ಚರಿಯಿಂದ ನೋಡಿದ್ದಾರೆ.

ಇದನ್ನೂ ಓದಿ: ಡ್ರೋನ್ ಪ್ರತಾಪ್​ಗೆ ಸಿನಿಮಾ-ಧಾರಾವಾಹಿ ಆಫರ್​ಗಳು ಬಂದಿವೆಯೇ? ಒಪ್ಪಿಕೊಂಡಿದ್ದಾರಾ?

ಒಂದು ಕಾಲದಲ್ಲಿ ಡ್ರೋನ್​ ಪ್ರತಾಪ್​ ಅವರನ್ನು ಎಲ್ಲರೂ ಟ್ರೋಲ್​ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಅವರಿಗೂ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರನ್ನು ಬೆಂಬಲಿಸುವವರ ಸಂಖ್ಯೆ ಹೆಚ್ಚಾಗಿದೆ. ಬಿಗ್ ಬಾಸ್​ ಫಿನಾಲೆಯಲ್ಲಿ ಅವರಿಗೆ 2 ಕೋಟಿಗೂ ಅಧಿಕ ವೋಟ್ಸ್​ ಬಂದಿದ್ದವು. ಪ್ರತಾಪ್​ ಅವರಿಗೆ ಎಷ್ಟು ಜನ ಬೆಂಬಲ ಇದೆ ಎಂಬುದಕ್ಕೆ ಈ ಸಂಖ್ಯೆಯೇ ಸಾಕ್ಷಿ. ಈಗ ‘ಗಿಚ್ಚಿ ಗಿಲಿಗಿಲಿ ಸೀಸನ್​ 3’ ಕಾರ್ಯಕ್ರಮದಿಂದ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಲಿದೆ.

‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡ ‘ಗಿಚ್ಚಿ ಗಿಲಿಗಿಲಿ 3’ ಕಾರ್ಯಕ್ರಮದ ಪ್ರೋಮೋ:

‘ಗಿಚ್ಚಿ ಗಿಲಿಗಿಲಿ 3’ ಕಾರ್ಯಕ್ರಮದ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಇದನ್ನು ನೋಡಿ ನೆಟ್ಟಿಗರು ಪ್ರತಾಪ್​ ಅವರ ಡ್ಯಾನ್ಸ್​ಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ಶೋನ ನಿರ್ಣಾಯಕರಾಗಿ ಶ್ರುತಿ, ಸಾಧು ಕೋಕಿಲ, ಕೋಮಲ್​ ಇರಲಿದ್ದಾರೆ. ನಿರಂಜನ್​ ಅವರಿಗೆ ನಿರೂಪಣೆಯ ಜವಾಬ್ದಾರಿ ನೀಡಲಾಗಿದೆ. ಶನಿವಾರ (ಫೆಬ್ರವರಿ 3) ಅದ್ದೂರಿಯಾಗಿ ಈ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಮಾಜಿ ಬಿಗ್​ ಬಾಸ್​ ಸ್ಪರ್ಧಿ ಮಂಜು ಪಾವಗಡ ಕೂಡ ಈ ಕಾರ್ಯಕ್ರದಲ್ಲಿ ಮನರಂಜನೆ ನೀಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ