
ದ್ಯಾಮೇಶ್ (Dyamesh) ಅವರು ‘ಸರಿಗಮಪ ಸೀಸನ್ 21’ನಲ್ಲಿ ಪಾಲ್ಗೊಂಡಿದ್ದರು. ಅವರು ಫಿನಾಲೆವರೆಗೆ ಹೋದರು. ಈ ವೇಳೆ ಅವರು ಉತ್ತಮ ಪರ್ಫಾರ್ಮೆನ್ಸ್ ನೀಡಿದರು. ಆದರೆ, ಗೆಲ್ಲೋಕೆ ಅವರಿಗೆ ಸಾಧ್ಯವಾಗಲೇ ಇಲ್ಲ. ಈಗ ಅವರು ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ವೇದಿಕೆ ಮೇಲೆ ಅವರು ಹಾಡನ್ನು ಸುಕೃತಾಗೆ ಡೆಡಿಕೇಟ್ ಮಾಡಿದ್ದಾರೆ. ಈ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಶನಿವಾರ (ಜೂನ್ 14) ಹಾಗೂ ಭಾನುವಾರ (ಜೂನ್ 15) ಈ ಸಂಚಿಕೆ ಪ್ರಸಾರ ಕಂಡಿದೆ.
‘ಸರಿಗಮಪ’ ಶೋ ವಿವಿಧ ಹಂತಗಳಲ್ಲಿ ನಡೆದವು. ಹಲವು ತಿಂಗಳ ಕಾಲ ಈ ಶೋ ಇತ್ತು. ಇತ್ತೀಚೆಗೆ ಶೋನ ಫಿನಾಲೆಯು ನಡೆಯಿತು ಮತ್ತು ಶಿವಾನಿ ಸ್ವಾಮಿ ವಿನ್ನರ್ ಆದರು. ಟಾಪ್ 3ರಲ್ಲಿ ಇದ್ದ ಮೂವರು ಹೆಣ್ಣು ಮಕ್ಕಳೇ ಆಗಿದ್ದರು ಅನ್ನೋದು ವಿಶೇಷ. ದ್ಯಾಮೇಶ್ ಅವರಿಗೆ ಟಾಪ್ 3ನಲ್ಲಿ ಬರೋಕೆ ಆಗಲೇ ಇಲ್ಲ. ಈ ವಿಚಾರ ಅವರಿಗೇನು ಬೇಸರ ನೀಡಿಲ್ಲ. ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಈಗ ‘ಸರಿಗಮಪ’ ವಿನ್ನರ್ಗಳು ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆಗೆ ಅತಿಥಿಯಾಗಿ ಆಗಮಿಸಿದ್ದರು.
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಸ್ಪರ್ಧಿಗಳು ಹಾಡನ್ನು ಹಾಡಿ ಎಲ್ಲರೂ ರಂಜಿಸಿದರು. ‘ಇಲ್ಲಿ 10 ಜನರ ಏಂಜಲ್ಸ್ ಇದ್ದಾರೆ. ಇವರಲ್ಲಿ ಯಾರನ್ನು ನೋಡಿದರೆ ಯಾವ ಸಾಂಗ್ ನೆನಪಾಗುತ್ತದೆ. ಬೇಗ ಬೇಗ ಹೇಳಿ’ ಎಂದು ನಿರಂಜನ್ ಅವರು ದ್ಯಾಮೇಶ್ಗೆ ಕೇಳಿದರು. ಇದಕ್ಕೆ ದ್ಯಾಮೇಶ್ ಅವರು ನಾನು ಮೊದಲ ಹಾಡನ್ನು ಸುಕೃತಾಗೆ ಹೇಳುತ್ತೇನೆ ಎಂದರು.
ದ್ಯಾಮೇಶ್ ಅವರು ಮೊದಲು ಹಾಡನ್ನು ತಮಗಾಗಿ ಹೇಳುತ್ತಿದ್ದಾರೆ ಎಂದಾಗ ಸುಕೃತಾ ಅವರಿಗೆ ತುಂಬಾನೇ ಖುಷಿ ಆಯಿಯಿತು ಮತ್ತು ಖುಷಿಯಿಂದ ಅವರು ನಕ್ಕರು. ಈ ವೇಳೆ ಅವರಿಗಾಗಿ ಜಾಜಿ ಮಲ್ಲಿಗೆ ಹೂವೇ ಹಾಡನ್ನು ದ್ಯಾಮೇಶ್ ಹಾಡಿದರು. ಆ ಬಳಿಕ ರಚಿತಾ ರಾಮ್ಗೋಸ್ಕರವೂ ಹಾಡನ್ನು ಹಾಡಿದರು ದ್ಯಾಮೇಶ್. ಸುಕೃತಾ ಅವರು ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಗಮನ ಸೆಳೆಯುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ