‘ಜೊತೆ ಜೊತೆಯಲಿ’ ಧಾರಾವಾಹಿ ಹಿಂದಿಗೆ ರಿಮೇಕ್; ಅದೇ ಹೆಸರಿಟ್ಟ ವಾಹಿನಿ
ಜೊತೆ ಜೊತೆಯಲಿ ಧಾರಾವಾಹಿಯು ಜೀ ಕನ್ನಡದಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿ ಈಗ ಹಿಂದಿಗೆ ರಿಮೇಕ್ ಆಗುತ್ತಿದೆ. ‘ಜೊತೆ ಜೊತೆಯಲಿ’ ಧಾರಾವಾಹಿಯ ಟೈಟಲ್ ಟ್ರ್ಯಾಕ್ ಗಮನ ಸೆಳೆದಿತ್ತು. ಈ ಟೈಟಲ್ ಹಾಡು ಸೂಪರ್ ಹಿಟ್ ಆಗಿತ್ತು. ಇದೇ ಟೋನ್ನಲ್ಲಿ ಹಿಂದಿ ಧಾರಾವಾಹಿಯ ಹಾಡು ಮೂಡಿ ಬಂದಿದೆ.

‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿಯು ಜೀ ಕನ್ನಡದಲ್ಲಿ ಪ್ರಸಾರ ಕಂಡು ಸೂಪರ್ ಹಿಟ್ ಆಯಿತು. ಈ ಧಾರಾವಾಹಿ ಎಲ್ಲರ ಮೆಚ್ಚುಗೆ ಪಡೆಯಿತು. ಕೆಲವು ವಿವಾದಗಳಿಂದ ಕೊನೆಯಲ್ಲಿ ಧಾರಾವಾಹಿ ಟಿಆರ್ಪಿ ಕಳೆದುಕೊಂಡಿತ್ತು ನಿಜ. ಆದರೆ, ಆರಂಭದಲ್ಲಿ ಧಾರಾವಾಹಿ ಟಾಪ್ನಲ್ಲಿ ಇತ್ತು. ಎಲ್ಲರೂ ಅಚ್ಚರಿ ಪಡುವಂತೆ ಧಾರಾವಾಹಿ ಟಿಆರ್ಪಿಯನ್ನು ತಂದುಕೊಟ್ಟಿದ್ದಂತೂ ನಿಜ. ಪ್ರತಿ ವಾರ ಈ ಧಾರಾವಾಹಿ ಟಿಆರ್ಪಿಯಲ್ಲಿ ಮೊದಲ ಸ್ಥಾನ ಕಾಪಾಡಿಕೊಳ್ಳುತ್ತಿತ್ತು. ಈಗ ಧಾರಾವಾಹಿ ಹಿಂದಿಗೆ ರಿಮೇಕ್ ಆಗುತ್ತಿದೆ.
2019ರಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ ಪ್ರಸಾರ ಆರಂಭಿಸಿತು. ಬರೋಬ್ಬರಿ 953 ಎಪಿಸೋಡ್ಗಳು ಪ್ರಸಾರ ಕಂಡವು. 2019ರಿಂದ 2023ರವರೆಗೆ ಸೀರಿಯಲ್ ಪ್ರಸಾರ ಕಂಡಿತು. ಈ ಧಾರಾವಾಹಿಯಲ್ಲಿ ಅನಿರುದ್ಧ್ ಜತ್ಕರ್ ಹಾಗೂ ಮೇಘಾ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಧಾರಾವಾಹಿ ಮರಾಠಿಯ ‘ತುಲಾ ಪಹಾತೆ ರೇ’ಯ ರಿಮೇಕ್ ಆಗಿದೆ. ರಿಮೇಕ್ ಆದರೂ ಕನ್ನಡ ಜನರು ಇದನ್ನು ಮೆಚ್ಚಿಕೊಂಡರು.
View this post on Instagram
ಈಗ ಹಿಂದಿಯಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ ‘ತುಮ್ ಸೇ ತುಮ್ ತಕ್’ ಹೆಸರಿನಲ್ಲಿ ಪ್ರಸಾರ ಕಾಣಲಿದೆ. ವಿಶೇಷ ಎಂದರೆ ಕನ್ನಡ ಧಾರಾವಾಹಿಯಲ್ಲಿ ಕಥಾ ನಾಯಕನಿಗೆ ಆರ್ಯವರ್ಧನ್ ಹಾಗೂ ಕಥಾ ನಾಯಕಿಗೆ ಅನು ಸಿರಿಮನೆ ಎಂದು ಹೆಸರು ಇಡಲಾಗಿತ್ತು. ಈ ಪಾತ್ರದ ಹೆಸರನ್ನು ಹಿಂದಿ ಧಾರಾವಾಹಿಯಲ್ಲೂ ಮುಂದುವರಿಸಲಾಗಿದೆ.
ಇದನ್ನೂ ಓದಿ: ಚೈತ್ರಾ ಆಚಾರ್ ಧ್ವನಿಯಲ್ಲಿ ‘ಜೊತೆಯಲಿ ಜೊತೆ ಜೊತೆಯಲಿ..’ ಸಾಂಗ್
‘ಜೊತೆ ಜೊತೆಯಲಿ’ ಧಾರಾವಾಹಿಯ ಟೈಟಲ್ ಟ್ರ್ಯಾಕ್ ಗಮನ ಸೆಳೆದಿತ್ತು. ಈ ಟೈಟಲ್ ಹಾಡು ಸೂಪರ್ ಹಿಟ್ ಆಗಿತ್ತು. ಇದೇ ಟೋನ್ನಲ್ಲಿ ಹಿಂದಿ ಧಾರಾವಾಹಿಯ ಹಾಡು ಮೂಡಿ ಬಂದಿದೆ. ಮ್ಯೂಸಿಕ್ ಹಾಗೆಯೇ ಇದ್ದು ಹಿಂದಿಯಲ್ಲಿ ಲಿರಿಕ್ಸ್ ಬರೆಯಲಾಗಿದೆ. ಅನೇಕರು ಇದನ್ನು ಕೇಳಿ ‘ಕನ್ನಡದ ಹಾಡನ್ನು ಮತ್ತೆ ಕೇಳಿದಂತೆ ಆಗುತ್ತದೆ’ ಎಂದು ಅನೇಕರು ಹೇಳಿದ್ದಾರೆ.
ಏನಿದು ಕತೆ?
ಆರ್ಯವರ್ಧನ್ ವಯಸ್ಸಾದ ಉದ್ಯಮಿ. ಆತನ ವಯಸ್ಸು 45ರ ಆಸುಪಾಸಿನಲ್ಲಿದೆ. ಕಥಾ ನಾಯಕಿ ಅನು ವಯಸ್ಸು 20. ಆಕೆ ಬಂದು ಆರ್ಯವರ್ಧನ್ ಕಂಪನಿಯಲ್ಲಿ ಕೆಲಸಕ್ಕೆ ಸೇರುತ್ತಾಳೆ. ಆರ್ಯವರ್ಧನ್ ಹೇಗೆ ಆ ಹಂತಕ್ಕೆ ಬಂದ? ಇಬ್ಬರ ಮಧ್ಯೆ ಪ್ರೀತಿ ಹೇಗೆ ಮೂಡುತ್ತದೆ ಎಂಬುದು ಧಾರಾವಾಹಿಯ ಕಥೆ. ಕನ್ನಡಕ್ಕೆ ತಕ್ಕಂತೆ ಈ ಧಾರಾವಾಹಿಯ ಕಥೆಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿತ್ತು. ಕನ್ನಡದಲ್ಲಿ ಅನಿರುದ್ಧ್ ಬದಲು ಹರೀಶ್ ರಾಜ್ ಅವರು ಬಂದಿದ್ದರು. ಈ ವೇಳೆ ಕಥೆಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿತ್ತು. ಆದರೆ, ಹಿಂದಿಯಲ್ಲಿ ಮರಾಠಿ ಧಾರಾವಾಹಿಯ ಕಥೆಯ ಕ್ಲೈಮ್ಯಾಕ್ಸ್ನೇ ನೀಡೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







