AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಕೃತಾಗಾಗಿ ವಿಶೇಷ ಹಾಡನ್ನು ಡೆಡಿಕೇಟ್ ಮಾಡಿದ ದ್ಯಾಮೇಶ್; ನಟಿಗೆ ಖುಷಿಯೋ ಖುಷಿ

bharjari bachelors 2: ಸರಿಗಮಪ ಮಾಜಿ ಸ್ಪರ್ಧಿ ದ್ಯಾಮಣ್ಣ ಈಗ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ವೇದಿಕೆ ಮೇಲೆ ಅವರು ಹಾಡನ್ನು ಸುಕೃತಾಗೆ ಡೆಡಿಕೇಟ್ ಮಾಡಿದ್ದಾರೆ. ಈ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಶನಿವಾರ (ಜೂನ್ 14) ಹಾಗೂ ಭಾನುವಾರ (ಜೂನ್ 15) ಈ ಸಂಚಿಕೆ ಪ್ರಸಾರ ಕಂಡಿದೆ.

ಸುಕೃತಾಗಾಗಿ ವಿಶೇಷ ಹಾಡನ್ನು ಡೆಡಿಕೇಟ್ ಮಾಡಿದ ದ್ಯಾಮೇಶ್; ನಟಿಗೆ ಖುಷಿಯೋ ಖುಷಿ
Sukratha
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 15, 2025 | 11:15 PM

Share

ದ್ಯಾಮೇಶ್ (Dyamesh) ಅವರು ‘ಸರಿಗಮಪ ಸೀಸನ್ 21’ನಲ್ಲಿ ಪಾಲ್ಗೊಂಡಿದ್ದರು. ಅವರು ಫಿನಾಲೆವರೆಗೆ ಹೋದರು. ಈ ವೇಳೆ ಅವರು ಉತ್ತಮ ಪರ್ಫಾರ್ಮೆನ್ಸ್ ನೀಡಿದರು. ಆದರೆ, ಗೆಲ್ಲೋಕೆ ಅವರಿಗೆ ಸಾಧ್ಯವಾಗಲೇ ಇಲ್ಲ. ಈಗ ಅವರು ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ವೇದಿಕೆ ಮೇಲೆ ಅವರು ಹಾಡನ್ನು ಸುಕೃತಾಗೆ ಡೆಡಿಕೇಟ್ ಮಾಡಿದ್ದಾರೆ. ಈ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಶನಿವಾರ (ಜೂನ್ 14) ಹಾಗೂ ಭಾನುವಾರ (ಜೂನ್ 15) ಈ ಸಂಚಿಕೆ ಪ್ರಸಾರ ಕಂಡಿದೆ.

‘ಸರಿಗಮಪ’ ಶೋ ವಿವಿಧ ಹಂತಗಳಲ್ಲಿ ನಡೆದವು. ಹಲವು ತಿಂಗಳ ಕಾಲ ಈ ಶೋ ಇತ್ತು. ಇತ್ತೀಚೆಗೆ ಶೋನ ಫಿನಾಲೆಯು ನಡೆಯಿತು ಮತ್ತು ಶಿವಾನಿ ಸ್ವಾಮಿ ವಿನ್ನರ್ ಆದರು. ಟಾಪ್ 3ರಲ್ಲಿ ಇದ್ದ ಮೂವರು ಹೆಣ್ಣು ಮಕ್ಕಳೇ ಆಗಿದ್ದರು ಅನ್ನೋದು ವಿಶೇಷ. ದ್ಯಾಮೇಶ್ ಅವರಿಗೆ ಟಾಪ್ 3ನಲ್ಲಿ ಬರೋಕೆ ಆಗಲೇ ಇಲ್ಲ. ಈ ವಿಚಾರ ಅವರಿಗೇನು ಬೇಸರ ನೀಡಿಲ್ಲ. ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಈಗ ‘ಸರಿಗಮಪ’ ವಿನ್ನರ್​ಗಳು ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆಗೆ ಅತಿಥಿಯಾಗಿ ಆಗಮಿಸಿದ್ದರು.

View this post on Instagram

A post shared by Zee Kannada (@zeekannada)

‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಸ್ಪರ್ಧಿಗಳು ಹಾಡನ್ನು ಹಾಡಿ ಎಲ್ಲರೂ ರಂಜಿಸಿದರು. ‘ಇಲ್ಲಿ 10 ಜನರ ಏಂಜಲ್ಸ್ ಇದ್ದಾರೆ. ಇವರಲ್ಲಿ ಯಾರನ್ನು ನೋಡಿದರೆ ಯಾವ ಸಾಂಗ್ ನೆನಪಾಗುತ್ತದೆ. ಬೇಗ ಬೇಗ ಹೇಳಿ’ ಎಂದು ನಿರಂಜನ್ ಅವರು ದ್ಯಾಮೇಶ್​ಗೆ ಕೇಳಿದರು. ಇದಕ್ಕೆ ದ್ಯಾಮೇಶ್ ಅವರು ನಾನು ಮೊದಲ ಹಾಡನ್ನು ಸುಕೃತಾಗೆ ಹೇಳುತ್ತೇನೆ ಎಂದರು.

ದ್ಯಾಮೇಶ್ ಅವರು ಮೊದಲು ಹಾಡನ್ನು ತಮಗಾಗಿ ಹೇಳುತ್ತಿದ್ದಾರೆ ಎಂದಾಗ ಸುಕೃತಾ ಅವರಿಗೆ ತುಂಬಾನೇ ಖುಷಿ ಆಯಿಯಿತು ಮತ್ತು ಖುಷಿಯಿಂದ ಅವರು ನಕ್ಕರು. ಈ ವೇಳೆ ಅವರಿಗಾಗಿ ಜಾಜಿ ಮಲ್ಲಿಗೆ ಹೂವೇ ಹಾಡನ್ನು ದ್ಯಾಮೇಶ್ ಹಾಡಿದರು. ಆ ಬಳಿಕ ರಚಿತಾ ರಾಮ್​ಗೋಸ್ಕರವೂ ಹಾಡನ್ನು ಹಾಡಿದರು ದ್ಯಾಮೇಶ್. ಸುಕೃತಾ ಅವರು ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಗಮನ ಸೆಳೆಯುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗ್ರಾಮ ದೇವತೆ ಮೆರವಣಿಗೆ ವೇಳೆ ಗುಂಪು ಘರ್ಷಣೆ: ರಸ್ತೆಯಲ್ಲಿ ಅನಾಥವಾದ ವಿಗ್ರಹ
ಗ್ರಾಮ ದೇವತೆ ಮೆರವಣಿಗೆ ವೇಳೆ ಗುಂಪು ಘರ್ಷಣೆ: ರಸ್ತೆಯಲ್ಲಿ ಅನಾಥವಾದ ವಿಗ್ರಹ
ಶಾಲಾ ವಿದ್ಯಾರ್ಥಿನಿಗೆ ಕ್ಯಾನರ್ ಬಂದಿದ್ದಕ್ಕೆ ಶಿಕ್ಷಕಿ ಮಾಡಿದ್ದೇನು ನೋಡಿ
ಶಾಲಾ ವಿದ್ಯಾರ್ಥಿನಿಗೆ ಕ್ಯಾನರ್ ಬಂದಿದ್ದಕ್ಕೆ ಶಿಕ್ಷಕಿ ಮಾಡಿದ್ದೇನು ನೋಡಿ
ಹಾಸನ-ಸೋಲಾಪುರ ಎಕ್ಸ್​ಪ್ರೆಸ್​ ರೈಲಿನಲ್ಲಿ ನೀರಿಲ್ಲದೇ ಪ್ರಯಾಣಿಕರ ಪರದಾಟ
ಹಾಸನ-ಸೋಲಾಪುರ ಎಕ್ಸ್​ಪ್ರೆಸ್​ ರೈಲಿನಲ್ಲಿ ನೀರಿಲ್ಲದೇ ಪ್ರಯಾಣಿಕರ ಪರದಾಟ
ಅಡುಗೆ ಮಾಡುವಾಗ ಪಾತ್ರೆಯೊಳಗೆ ಬಿದ್ದ ಹಾವು
ಅಡುಗೆ ಮಾಡುವಾಗ ಪಾತ್ರೆಯೊಳಗೆ ಬಿದ್ದ ಹಾವು
ದರ್ಶನ ಜತೆಗಿನ ಆ ಘಟನೆಯನ್ನು ನೆನೆಪಿಸಿಕೊಂಡ ಬಿಗ್ ಬಾಸ್ ವಿನ್ನರ್ ಗಿಲ್ಲಿ
ದರ್ಶನ ಜತೆಗಿನ ಆ ಘಟನೆಯನ್ನು ನೆನೆಪಿಸಿಕೊಂಡ ಬಿಗ್ ಬಾಸ್ ವಿನ್ನರ್ ಗಿಲ್ಲಿ
50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್ ಮಾಡ್ತಾರೆ?
50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್ ಮಾಡ್ತಾರೆ?
ರನ್ನರ್ ಅಪ್ ಆದ ಬಳಿಕ ಫ್ಲೈಯಿಂಗ್ ಕಿಸ್ ಕೊಟ್ಟ ರಕ್ಷಿತಾ ಶೆಟ್ಟಿ
ರನ್ನರ್ ಅಪ್ ಆದ ಬಳಿಕ ಫ್ಲೈಯಿಂಗ್ ಕಿಸ್ ಕೊಟ್ಟ ರಕ್ಷಿತಾ ಶೆಟ್ಟಿ
ಲಕ್ಕುಂಡಿ: 4ನೇ ದಿನದ ಉತ್ಖನನದಲ್ಲಿ ಪುರಾತನ ಕೊಡಲಿ ಆಕಾರದ ಅವಶೇಷ ಪತ್ತೆ
ಲಕ್ಕುಂಡಿ: 4ನೇ ದಿನದ ಉತ್ಖನನದಲ್ಲಿ ಪುರಾತನ ಕೊಡಲಿ ಆಕಾರದ ಅವಶೇಷ ಪತ್ತೆ
ರೈಲು ಹತ್ತಲು ಹೋಗಿ ಬಿದ್ದ ತಂದೆ-ಮಗನನ್ನು ರಕ್ಷಿಸಿದ ಆರ್​ಪಿಫ್ ಸಿಬ್ಬಂದಿ
ರೈಲು ಹತ್ತಲು ಹೋಗಿ ಬಿದ್ದ ತಂದೆ-ಮಗನನ್ನು ರಕ್ಷಿಸಿದ ಆರ್​ಪಿಫ್ ಸಿಬ್ಬಂದಿ
Bigg Boss Live: ಬಿಗ್ ಬಾಸ್ ವಿನ್ನರ್ ಗಿಲ್ಲಿ ಸಂಭ್ರಮ ನೋಡಿ
Bigg Boss Live: ಬಿಗ್ ಬಾಸ್ ವಿನ್ನರ್ ಗಿಲ್ಲಿ ಸಂಭ್ರಮ ನೋಡಿ