ಸದ್ದಿಲ್ಲದೆ ಮದುವೆ ಆದ ಕಿರುತೆರೆ ನಟಿ ಗೀತಾ ಭಾರತಿ ಭಟ್; ಫೋಟೋ ನೋಡಿ

‘ಬ್ರಹ್ಮಗಂಟು’ ಧಾರಾವಾಹಿ 2017ರಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಕಂಡಿತು. ಧಾರಾವಾಹಿಯಲ್ಲಿ ಗೀತಾ ಅವರು ಗುಂಡಮ್ಮ ಹೆಸರಿನ ಪಾತ್ರ ಮಾಡಿದರು. ಅವರು 2021ರವರೆಗೆ ಧಾರಾವಾಹಿ ಪ್ರಸಾರ ಕಂಡಿದೆ. ಆ ಬಳಿಕ ಅವರು ಬಿಗ್ ಬಾಸ್ ಕನ್ನಡದಲ್ಲಿ ಭಾಗಿ ಆದರು. 2021ರಲ್ಲಿ ಸೀಸನ್ 8 ಪ್ರಸಾರ ಕಂಡಿತು. ಅವರು ಮೂರನೇ ವಾರವೇ ಹೊರ ಹೋದರು. ಈಗ ಅವರು ಮದುವೆ ಆಗಿ ಅಚ್ಚರಿ ಮೂಡಿಸಿದ್ದಾರೆ.

ಸದ್ದಿಲ್ಲದೆ ಮದುವೆ ಆದ ಕಿರುತೆರೆ ನಟಿ ಗೀತಾ ಭಾರತಿ ಭಟ್; ಫೋಟೋ ನೋಡಿ
ಗೀತಾ
Edited By:

Updated on: Dec 14, 2025 | 8:36 PM

‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡಿದ್ದ ಗೀತಾ ಭಾರತಿ ಭಟ್ (Geetha Bharathi Bhat) ಅವರು ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಈಗ ಅವರ ಹೊಸ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋಗೆ ವಿಶೇಷ ಕಾರಣ ಇದೆ. ಏಕೆಂದರೆ ಅವರು ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬುದು ವಿಶೇಷ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಶುಭಾಶಯ ಕೋರುತ್ತಾ ಇದ್ದಾರೆ. ಅವರಿಗೆ ಅಭಿನಂದನೆ ತಿಳಿಸಲಾಗುತ್ತಾ ಇದೆ.

‘ಬ್ರಹ್ಮಗಂಟು’ ಧಾರಾವಾಹಿ 2017ರಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಕಂಡಿತು. ಧಾರಾವಾಹಿಯಲ್ಲಿ ಗೀತಾ ಅವರು ಗುಂಡಮ್ಮ ಹೆಸರಿನ ಪಾತ್ರ ಮಾಡಿದರು. ಅವರು 2021ರವರೆಗೆ ಧಾರಾವಾಹಿ ಪ್ರಸಾರ ಕಂಡಿದೆ. ಆ ಬಳಿಕ ಅವರು ಬಿಗ್ ಬಾಸ್ ಕನ್ನಡದಲ್ಲಿ ಭಾಗಿ ಆದರು. 2021ರಲ್ಲಿ ಸೀಸನ್ 8 ಪ್ರಸಾರ ಕಂಡಿತು. ಅವರು ಮೂರನೇ ವಾರವೇ ಹೊರ ಹೋದರು. ಆ ಬಳಿಕ ಅವರು ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ನಟಿಸಿದರು.

ಈಗ ಗೀತಾ ಭಾರತಿ ಭಟ್ ಅವರು ಸೈಲೆಂಟ್ ಆಗಿ ವಿವಾಹ ಆಗಿದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಾ ಇದ್ದಾರೆ. ಅವರ ಮದುವೆ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ. ಕೆಲವರಿಗೆ ಇದು ಅಚ್ಚರಿ ತಂದಿದೆ. ಅವರು ವಿವಾಹ ಆಗಿರುವ ಹುಡುಗ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದು ಲವ್ ಮ್ಯಾರೇಜೋ ಅಥವಾ ಅರೆಂಜ್ ಮ್ಯಾರೆಜೋ ಎಂಬ ಕುತೂಹಲವೂ ಮೂಡಿದೆ. ಈ ಎಲ್ಲಾ ಪ್ರಶ್ನೆಗೆ ಅವರೇ ಉತ್ತರಿಸಬೇಕಿದೆ.

ಗೀತಾ ಭಟ್ ದೇಹದ ವಿಚಾರಕ್ಕೆ ಹಲವು ಬಾರಿ ಅವಮಾನ ಎದುರಿಸಿದ್ದು. ಸಾಕಷ್ಟು ಜನರು ಅವರನ್ನು ಬಾಡಿ ಶೇಮಿಂಗ್ ಮಾಡಿದ್ದರು. ಇದನ್ನು ಗೀತಾ ಭಾರತಿ ಭಟ್ ಅವರು ಸಾಕಷ್ಟು ಬಾರಿ ಖಂಡಿಸಿದ್ದಾರೆ. ಇದು ಸರಿ ಅಲ್ಲ ಎಂದು ಅನೇಕ ಬಾರಿ ನೇರವಾಗಿ ಹೇಳಿದ್ದು ಇದೆ.

ಇದನ್ನೂ ಓದಿ: ‘ಲವ್ ಮಾಕ್ಟೇಲ್​ನಲ್ಲಿ ನನಗೆ ಬಾಡಿ ಶೇಮಿಂಗ್ ಆಗಿದೆ, ಆ ಪಾತ್ರ ಮಾಡಿ ತಪ್ಪು ಮಾಡಿದೆ’; ಗೀತಾ ಭಾರತಿ ಭಟ್

ಗೀತಾ ಭಾರತಿ ಭಟ್ ಅವರು ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಡಾರ್ಲಿಂಗ್ ಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಗೀತಾ ಭಾರತಿ ಭಟ್ ಸಣ್ಣ ಪಾತ್ರ ಮಾಡಿದ್ದರು. ‘ಹೂವಿನ ತರ ಇದ್ದರು, ಹೂಕೋಸಿನ ತರ ಆಗಿದ್ದಾರೆ’ ಎಂದು ಅವರನ್ನು ಟೀಸ್ ಮಾಡಲಾಗುತ್ತದೆ. ಇದು ಗೀತಾ ಭಾರತಿ ಭಟ್ ಅವರಿಗೆ ನೋವು ತಂದಿತ್ತಂತೆ. ದೇಹದ ವಿಷಯದಲ್ಲಿ ಟೀಕೆ ಮಾಡುವುದು ಸರಿ ಅಲ್ಲ ಎಂಬುದು ಅನೇಕರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.