
‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಗಿಲ್ಲಿ ನಟ ಅವರು ಕಾಮಿಡಿ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಅವರ ಹವಾ ಜೋರಾಗಿದೆ. ಯಾರೇ ಬಂದರೂ ಕೂಡ ಗಿಲ್ಲಿ ಮುಂದೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಗಿಲ್ಲಿ ಹವಾ ಹೇಗಿದೆ ಎಂಬುದನ್ನು ತಿಳಿಯಲು ಸೋಶಿಯಲ್ ಮೀಡಿಯಾ ನೋಡಬೇಕು. ಈಗಾಗಲೇ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರುವ ಸ್ಪರ್ಧಿಗಳು ಕೂಡ ಗಿಲ್ಲಿ (Gilli Nata) ಜನಪ್ರಿಯತೆಯನ್ನು ಕಂಡು ಶಾಕ್ ಆಗಿದ್ದಾರೆ. ಈ ಬಾರಿ ಗಿಲ್ಲಿಯೇ ಗೆಲ್ಲೋದು ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
ಪ್ರತಿದಿನ ‘ಕಲರ್ಸ್ ಕನ್ನಡ’ ವಾಹಿನಿಯು ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಪ್ರೋಮೋ ಹಂಚಿಕೊಳ್ಳುತ್ತದೆ. ಅದಕ್ಕೆ ಕಮೆಂಟ್ ಮಾಡುವ ಅಭಿಮಾನಿಗಳು ಗಿಲ್ಲಿಯ ಗುಣಗಾನ ಮಾಡುತ್ತಾರೆ. ಅಚ್ಚರಿ ಎಂದರೆ, ಒಂದಲ್ಲ ಒಂದು ಪ್ರೋಮೋದಲ್ಲಿ ಗಿಲ್ಲಿ ಪ್ರತಿ ದಿನ ಕಾಣಿಸಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಅವರು ಈ ಸೀಸನ್ನಲ್ಲಿ ಹೈಲೈಟ್ ಆಗುತ್ತಿದ್ದಾರೆ.
ಈ ಮೊದಲು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ರಿಷಾ, ರಘು, ಸೂರಜ್ ಸಿಂಗ್ ಬಂದರು. ಅವರ ಎಂಟ್ರಿ ಅದ್ದೂರಿಯಾಗಿತ್ತು. ಆದರೆ ಅವರ ಪೈಕಿ ಯಾರೂ ಕೂಡ ಗಿಲ್ಲಿಗಿಂತ ಹೆಚ್ಚು ಮಿಂಚಲು ಸಾಧ್ಯವಾಗಲೇ ಇಲ್ಲ. ಬಳಿಕ ರಜತ್ ಮತ್ತು ಚೈತ್ರಾ ಕುಂದಾಪುರ ಅವರ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದರು. ಅವರು ಕೂಡ ಗಿಲ್ಲಿಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ.
ಅಶ್ವಿನಿ ಗೌಡ, ರಘು, ಧ್ರುವಂತ್, ರಾಶಿಕಾ ಮುಂತಾದವರು ಗಿಲ್ಲಿ ಮೇಲೆ ಹತ್ತಾರು ಆರೋಪ ಮಾಡಿದ್ದರು. ಆ ಮೂಲಕ ಗಿಲ್ಲಿಯನ್ನು ಸೈಲೆಂಟ್ ಆಗಿಸುವ ಪ್ರಯತ್ನ ನಡೆಯಿತು. ಆದರೂ ಸಹ ಪ್ರೇಕ್ಷಕರು ಗಿಲ್ಲಿಗೆ ತೋರಿಸುವ ಪ್ರೀತಿ ಕಡಿಮೆ ಆಗಿಲ್ಲ. ಗಿಲ್ಲಿಯ ಎಲ್ಲ ಆಟವನ್ನು ವೀಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ಪ್ರೋಮೋಗಳಿಗೆ ಜನರು ಮಾಡುತ್ತಿರುವ ಕಮೆಂಟ್ಗಳೇ ಈ ಮಾತಿಗೆ ಸಾಕ್ಷಿ ಆಗಿದೆ.
ಇದನ್ನೂ ಓದಿ: ಗಿಲ್ಲಿ ನಟ ಓದಿದ ಶಾಲೆಯಲ್ಲಿ ಬಿಡುಗಡೆ ಆಯ್ತು ‘ಸರ್ಕಾರಿ ಶಾಲೆ H8’ ಸಿನಿಮಾ ಪೋಸ್ಟರ್
‘ಈ ವಾರದ ಕಿಚ್ಚನ ಚಪ್ಪಾಳೆ ನಮ್ಮ ಗಿಲ್ಲಿ ನಟನಿಗೆ’ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಕ್ಯಾಪ್ಟನ್ ಆಗಬೇಕು ಅಂತ ನಾವು ಕಾಯುತ್ತಿದ್ದೇವೆ’ ಎಂಬ ಕಮೆಂಟ್ ಕೂಡ ಬಂದಿದೆ. ‘ಈ ಬಾರಿ ಕಪ್ ಗೆಲ್ಲೋದು ನಮ್ಮ ಗಿಲ್ಲಿ’ ಎಂದು ಅಭಿಮಾನಿಗಳು ಫಿಕ್ಸ್ ಆಗಿದ್ದಾರೆ. ‘ಈ ಮಟ್ಟಕ್ಕೆ ಯಾವ ಸೀಸನ್ನ ಯಾವ ಆಟಗಾರರೂ ಕೂಡ ಹವಾ ಮಾಡಿರಲಿಲ್ಲ’ ಎಂದು ಗಿಲ್ಲಿ ಫ್ಯಾನ್ಸ್ ಹೊಗಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:53 pm, Wed, 10 December 25