
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಗಿಲ್ಲಿ ನಟ ಅವರು ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಅವರ ಆಟ ಗಮನ ಸೆಳೆಯುವ ರೀತಿಯಲ್ಲಿ ಇದೆ. ಗಿಲ್ಲಿ ನಟನ ಬಗ್ಗೆ ಎಲ್ಲ ಕಡೆಗಳಲ್ಲೂ ಪಾಸಿಟಿವ್ ಮಾತು ಇದೆ. ಈಗ ಅವರ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿಯೊಬ್ಬರು ಮೆಚ್ಚುಗೆಯ ಮಾತುಗಳನ್ನು ಆಡಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಅವರು ಗಿಲ್ಲಿ ಇಲ್ಲದಿದ್ದರೆ ಈ ಸೀಸನ್ ಝೀರೋ ಎಂದು ಹೇಳಿದ್ದಾರೆ. ಅವರ ಮಾತನ್ನು ಅನೇಕರು ಒಪ್ಪಿದ್ದಾರೆ.
ಗಿಲ್ಲಿ ನಟ ಅವರು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದವರು. ಆ ಬಳಿಕ ಅವರು ವಿವಿಧ ರಿಯಾಲಿಟಿ ಶೋಗಳಿಗೆ ಕಾಲಿಟ್ಟರು. ಪ್ರಾಪರ್ಟಿ ಕಾಮಿಡಿ ಮೂಲಕ ಎಲ್ಲರ ಗಮನ ಸೆಳೆದರು. ಈಗ ಬಿಗ್ ಬಾಸ್ ಮನೆಗೆ ಬಂದು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಅವರು ಹೊರಗೆ ಅಪಾರ ಜನಪ್ರಿಯತೆ ಅನ್ನು ಪಡೆದುಕೊಂಡಿರುವುದನ್ನು ನೀವು ಕಾಣಬಹುದು. ಗಿಲ್ಲಿ ನಟನ ಬಗ್ಗೆ ಪ್ರಶಾಂತ್ ಸಂಬರ್ಗಿ ಮೆಚ್ಚುಗೆಯ ಮಾತನ್ನು ಆಡಿದ್ದಾರೆ.
ಪ್ರಶಾಂತ್ ಸಂಬರ್ಗಿ ಅವರು ಸಾಮಾಜಿಕ ಹೋರಾಟದ ಮೂಲಕ ಗುರುತಿಸಿಕೊಂಡರು. ಅಲ್ಲದೆ, ಅವರು ಎರಡೆರಡು ಬಾರಿ ಬಿಗ್ ಬಾಸ್ಗೆ ಬಂದು ಗಮನ ಸೆಳೆದರು. ಅವರು ತಮ್ಮ ಮಾತುಗಳಿಂದ, ಜಗಳಗಳ ಮೂಲಕ ಬಿಗ್ ಬಾಸ್ನಲ್ಲಿ ಗಮನ ಸೆಳೆದವರು. ಅವರು ಗಿಲ್ಲಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
‘ಬಿಗ್ ಬಾಸ್ 12 ನಡೀತಾ ಇದೆ. ನಾನು 8 ಹಾಗೂ 9ರಲ್ಲಿ ನಾನಿದ್ದೆ. ಈ ಸೀಸನ್ನ ನಾನು ನೋಡುತ್ತಾ ಇದ್ದೇನೆ. ಫ್ಯಾಮಿಲಿಗೆ ಬೇಕಿರೋ ಎಂಟರ್ಟೇನ್ಮೆಂಟ್ ಕೊಡ್ತಾ ಇರೋದು ಗಿಲ್ಲಿ. ಗಿಲ್ಲಿ ಇಲ್ದೆ ಇರೋ ಶೋ ಶೂನ್ಯ. ಅವನು ಇಲ್ದೆ ಹೋಗಿದ್ರೆ ಶೋ ಮುಚ್ಕೊಂಡು ಹೋಗಬೇಕಿತ್ತು. ಸಪೋರ್ಟಿಂಗ್ ಆಗಿ ಅಶ್ವಿನಿ ಮೊದಲಾದವರು ಇದ್ದಾರೆ. ಆದರೂ ಗಿಲ್ಲಿ ಬೆಸ್ಟ್. ಎಲ್ಲರಿಗೂ ಆಲ್ ದಿ ಬೆಸ್ಟ್’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಹೀಗೆ ಆದರೆ ಹೊರ ಹೋಗ್ತೀರಿ’; ಒಂದೇ ಎಪಿಸೋಡ್ನಲ್ಲಿ ಗಿಲ್ಲಿಗೆ ಎರಡೆರಡು ಬಾರಿ ವಾರ್ನಿಂಗ್ ಕೊಟ್ಟ ಸುದೀಪ್
ಗಿಲ್ಲಿ ಅವರು ಈಗಾಗಲೇ ಕಿಚ್ಚನ ಚಪ್ಪಾಳೆ ಪಡೆದಿದ್ದಾರೆ. ಮತ್ತಷ್ಟು ಬಾರಿ ಅವರು ಕಿಚ್ಚನ ಚಪ್ಪಾಳೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಅವರ ಆಟ ಎಲ್ಲರಿಗೂ ಇಷ್ಟ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.