‘ಗಿಲ್ಲಿ ಮೇಲಿನ ಅಭಿಪ್ರಾಯ ಬದಲಾಗಿದೆ’; ಅಶ್ವಿನಿ ಗೌಡ ಪ್ರೀತಿಯ ಮಾತು

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ಹಲವು ಬಾರಿ ಕಿತ್ತಾಟ ನಡೆದಿತ್ತು. ಆದರೆ, ಇತ್ತೀಚಿನ ಬಿಗ್ ಬಾಸ್ ಚಟುವಟಿಕೆಯಲ್ಲಿ ಇಬ್ಬರೂ ಪರಸ್ಪರ ಕ್ಷಮೆ ಕೇಳಿದ್ದಾರೆ. ತಮ್ಮ ಕೋಪಕ್ಕೆ ಕಾರಣಗಳನ್ನು ಅಶ್ವಿನಿ ವಿವರಿಸಿದರೆ, ಗಿಲ್ಲಿಯಿಂದ ತಾವು ಕಲಿತ ಪಾಠಗಳನ್ನು ಹಂಚಿಕೊಂಡಿದ್ದಾರೆ.

‘ಗಿಲ್ಲಿ ಮೇಲಿನ ಅಭಿಪ್ರಾಯ ಬದಲಾಗಿದೆ’; ಅಶ್ವಿನಿ ಗೌಡ ಪ್ರೀತಿಯ ಮಾತು
ಅಶ್ವಿನಿ-ಗಿಲ್ಲಿ

Updated on: Jan 16, 2026 | 9:43 AM

ಗಿಲ್ಲಿ ನಟ (Gilli Nata) ಹಾಗೂ ಅಶ್ವಿನಿ ಗೌಡ ಮಧ್ಯೆ ಆದ ಕಿತ್ತಾಟಗಳು ಒಂದೆರಡಲ್ಲ. ಇಬ್ಬರೂ ಸಾಕಷ್ಟು ಬಾರಿ ಕಿತ್ತಾಡಿಕೊಂಡಿದ್ದು ಇದೆ. ಇವರ ಮಾತುಗಳು ಸಾಕಷ್ಟು ಬಾರಿ ಮಿತಿಮೀರಿದ್ದವು. ಈ ಬಗ್ಗೆ ಇಬ್ಬರಿಗೂ ಬೇಸರ ಇತ್ತು. ಇದನ್ನು ಓಪನ್ ಆಗಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಕೊಟ್ಟ ಚಟುವಟಿಕೆ ವೇಳೆ ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾರೆ. ಈ ವೇಳೆ ಕ್ಷಮೆ ಕೂಡ ಕೇಳಿದ್ದಾರೆ. ಈ ಪ್ರೀತಿಯ ಮಾತುಗಳು ವೀಕ್ಷಕರಿಗೆ ಇಷ್ಟ ಆಗಿದೆ.

ಬಿಗ್ ಬಾಸ್ ಚಟುವಟಿಕೆ ಒಂದನ್ನು ನೀಡಿದ್ದರು. ಇದರ ಅನುಸಾರ ಯಾವುದೇ ಸ್ಪರ್ಧಿಗೆ ಕ್ಷಮೆ ಕೇಳುವ ಅವಕಾಶ ಇತ್ತು. ಆಗ ಅಶ್ವಿನಿ ಅವರು ಮೊದಲು ಗಿಲ್ಲಿಗೆ ಕ್ಷಮೆ ಕೇಳಿದರು. ‘ನಾನು ನಿನಗೆ ಸಾಕಷ್ಟು ಬೇಸರ ಮಾಡಿದ್ದೇನೆ. ಫ್ರೆಂಡ್ಸ್ ಹೇಗಿರ್ತಾರೆ ಗೊತ್ತಿಲ್ಲ, ಕಾಲೇಜು ಜೀವನ ಎಂಜಾಯ್ ಮಾಡಿಲ್ಲ. ಹೀಗಾಗಿ ಯಾರೇ ರೇಗಿಸಿದರೂ ಸಿಟ್ಟು ಬರುತ್ತಿತ್ತು. ಬಹುಶಃ ನಿನ್ನ ರೀತಿಯ ಗೆಳೆಯ ಅಥವಾ ತಮ್ಮ ಇದ್ದಿದ್ರೆ ನಾನು ಅದಕ್ಕೆ ಅಡ್ಜಸ್ಟ್ ಆಗುತ್ತಿದ್ದೆ. ರೇಗಿಸೋದು ನೋಡೋಕೆ ಆಗ್ತಾ ಇರಲಿಲ್ಲ’ ಎಂದು ಕೋಪಗೊಳ್ಳುತ್ತಿದ್ದರ ಹಿಂದಿನ ಕಾರಣವನ್ನು ಅಶ್ವಿನಿ ಹೇಳಿದರು.

‘ಹಲವು ವಿಷಯಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡೆ. ಆದರೆ, ನಿನ್ನನ್ನು ಗಮನಿಸುತ್ತಾ ಬಂದೆ. ನನಗೆ ಬೇಸರ ಆದಾಗ ನೀನು ಮಂಕಾಗುತ್ತಿದೆ. ಆಗ ನನಗೆ ಅರ್ಥ ಆಯಿತು. ಆದರೂ ರೇಗಿಸೋದು ನಿಲ್ಲಿಸಿಲ್ಲ. ನಿನ್ನ ತಂದೆ-ತಾಯಿ ಬಂದಾಗ ನಿನ್ನ ಮೇಲಿನ ಗೌರವ ಹೆಚ್ಚಾಯ್ತು.ನೀನು ಇರೋದೆ ಹೀಗೆ ಎಂದು ನಿನ್ನ ತಂದೆ ತಾಯಿಯಿಂದ ಅರಿತೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಹೊರ ಹೋದ್ಮೇಲೆ ಬ್ಲಾಕ್ ಮಾಡ್ತೀನಿ’; ಬ್ಲ್ಯಾಕ್​​ಮೇಲ್ ಮಾಡಿದ ಕಾವ್ಯಾಗೆ ತಿರುಗೇಟು ಕೊಟ್ಟ ಗಿಲ್ಲಿ

‘ಗಂಭೀರ ಪರಿಸ್ಥಿತಿಯಲ್ಲೂ ನಗಬಹುದು ಎಂಬುದನ್ನು ನಿನ್ನ ನೋಡಿ ಕಲಿತಿ. ನಿನ್ನ ಮೇಲೆ ಬಂದ ದಿನ ಇದ್ದ ಅಭಿಪ್ರಾಯಕ್ಕೂ, ಈಗಿನ ಅಭಿಪ್ರಾಯಕ್ಕೂ ಸಾಕಷ್ಟು ಬದಲಾಗಿದೆ. ಜೀವನನ ಲೈಟ್ ಆಗಿ ತೆಗೆದುಕೊಂಡು ಎಂಜಾಯ್ ಮಾಡಬಹುದು ಎಂಬುದನ್ನು ಕಲಿತಿದ್ದೇನೆ’ ಎಂದು ಅಶ್ವಿನಿ ಗೌಡ ಹೇಳಿದರು. ಜನವರಿ 17 ಹಾಗೂ 18ರಂದು ಫಿನಾಲೆ ನಡೆಯಲಿದೆ. ಒಬ್ಬರ ಕೈಗೆ ಕಪ್ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.