ಗಿಲ್ಲಿ-ಅಶ್ವಿನಿ ಮಧ್ಯೆ ರೂಪೇಶ್ ರಾಜಣ್ಣ ಹೆಸರು ಚರ್ಚೆ ಏಕೆ?
Bigg Boss Kannada 12: ಗಿಲ್ಲಿ ಮತ್ತು ಅಶ್ವಿನಿ, ಈ ಇಬ್ಬರಲ್ಲಿ ಒಬ್ಬರು ಗೆಲ್ಲುವುದು ಖಾಯಂ ಎನ್ನಲಾಗುತ್ತಿದೆ. ಇಬ್ಬರಿಗೂ ಹೊರಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಶ್ವಿನಿ ಗೌಡ ನಟಿ ಆಗಿರುವ ಜೊತೆಗೆ ರಕ್ಷಣಾ ವೇದಿಕೆ ಸಂಘಟನೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದು ಪ್ರಮುಖ ನಾಯಕಿ ಸಹ ಆಗಿದ್ದಾರೆ. ಇಬ್ಬರ ಪರವಾಗಿ ಅವರವರ ಅಭಿಮಾನಿಗಳು ವೋಟಿಗಾಗಿ ಪ್ರಚಾರ ಆರಂಭಿಸಿದ್ದಾರೆ. ಆದರೆ ಈ ಇಬ್ಬರ ನಡುವೆ ರೂಪೇಶ್ ರಾಜಣ್ಣ ಹೆಸರು ಏಕೋ ಹೆಚ್ಚು ಚರ್ಚೆಗೆ ಬರುತ್ತಿದೆ. ಕಾರಣವೇಣು?

ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada) ಫಿನಾಲೆ ವಾರ ಚಾಲ್ತಿಯಲ್ಲಿದೆ. ಇನ್ನೆರಡು ದಿನಗಳಲ್ಲಿ ಯಾರು ವಿನ್ನರ್ ಎಂಬುದು ಗೊತ್ತಾಗಲಿದೆ. ಸದ್ಯಕ್ಕೆ ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ಬಹಳ ಗಟ್ಟಿಯಾದ ಸ್ಪರ್ಧೆ ಇದೆ. ಈ ಇಬ್ಬರಲ್ಲಿ ಒಬ್ಬರು ಗೆಲ್ಲುವುದು ಖಾಯಂ ಎನ್ನಲಾಗುತ್ತಿದೆ. ಇಬ್ಬರಿಗೂ ಹೊರಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಶ್ವಿನಿ ಗೌಡ ನಟಿ ಆಗಿರುವ ಜೊತೆಗೆ ರಕ್ಷಣಾ ವೇದಿಕೆ ಸಂಘಟನೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದು ಪ್ರಮುಖ ನಾಯಕಿ ಸಹ ಆಗಿದ್ದಾರೆ. ಇಬ್ಬರ ಪರವಾಗಿ ಅವರವರ ಅಭಿಮಾನಿಗಳು ವೋಟಿಗಾಗಿ ಪ್ರಚಾರ ಆರಂಭಿಸಿದ್ದಾರೆ. ಆದರೆ ಈ ಇಬ್ಬರ ನಡುವೆ ರೂಪೇಶ್ ರಾಜಣ್ಣ ಹೆಸರು ಏಕೋ ಹೆಚ್ಚು ಚರ್ಚೆಗೆ ಬರುತ್ತಿದೆ. ಕಾರಣವೇಣು?
ಅಶ್ವಿನಿ ಗೌಡ ಅವರ ಪರವಾಗಿ ರಾಜ್ಯದಾದ್ಯಂತ ಇರುವ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಮತ ಚಲಾಯಿಸುತ್ತಾರೆ ಎನ್ನಲಾಗುತ್ತಿದೆ. ಇದರಿಂದ ಗಿಲ್ಲಿಗೆ ಹಿನ್ನಡೆ ಆಗಬಹುದು, ಗಿಲ್ಲಿ ವಿನ್ ಆಗದೇ ಇರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಕೆಲವೆಡೆ ರಕ್ಷಣಾ ವೇದಿಕೆ ಸದಸ್ಯರು ಖುದ್ದು ಗಿಲ್ಲಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿ, ಗಿಲ್ಲಿ ಪರವಾಗಿ ಮತ ಯಾಚನೆ ಮಾಡುತ್ತಿದ್ದಾರೆ.
ಅಶ್ವಿನಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಬಲ ಇದ್ದರೂ ಸಹ ಗಿಲ್ಲಿಯೇ ಗೆಲ್ಲುತ್ತಾರೆ ಎಂದು ಹೇಳಲು ಉದಾಹರಣೆಯಾಗಿ ರೂಪೇಶ್ ರಾಜಣ್ಣ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ರೂಪೇಶ್ ರಾಜಣ್ಣ ಸಹ ಕನ್ನಡಪರ ಹೋರಾಟಗಾರರಾಗಿದ್ದರು. ಅವರೂ ಸಹ ಬಿಗ್ಬಾಸ್ ಮನೆಗೆ ಹೋಗಿದ್ದರು. ಆದರೆ ಅವರು ಗೆಲ್ಲಲಿಲ್ಲ, ಒಂದೊಮ್ಮೆ ಕನ್ನಡ ಪರ ಹೋರಾಟಗಾರರಿಗೆ ರಕ್ಷಣಾ ವೇದಿಕೆಯ ಬೆಂಬಲ ಸಿಗುತ್ತದೆ ಎಂದಾಗಿದ್ದಿದ್ದರೆ ರೂಪೇಶ್ ರಾಜಣ್ಣ ಗೆಲ್ಲಬೇಕಿತ್ತಲ್ಲ, ಈಗಲೂ ಹಾಗೆಯೇ ಆಗಲಿದೆ, ಅಶ್ವಿನಿ ಅವರು ಹೋರಾಟಗಾರ್ತಿ ಆಗಿರಬಹುದು ಆದರೆ ಇಲ್ಲಿ ನಿಜವಾದ ಪ್ರತಿಭೆಯೇ ಗೆಲ್ಲುತ್ತದೆ ಎಂದು ಹಲವರು ವಾದಿಸುತ್ತಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಇನ್ನು ಇತ್ತೀಚೆಗೆ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರು ಕಿಚ್ಚ ಸುದೀಪ್ ಅವರನ್ನು ಭೇಟಿ ಆಗಿದ್ದರು. ಈ ಭೇಟಿಯನ್ನು ಸಹ ನಾರಾಯಣಗೌಡರು ಅಶ್ವಿನಿಯನ್ನು ಗೆಲ್ಲಿಸಲೆಂದು ಸುದೀಪ್ ಅವರನ್ನು ಭೇಟಿ ಆಗಿದ್ದಾರೆ ಎಂಬ ಸುದ್ದಿಗಳು ಹರಿದಾಡಿದವು ಆದರೆ ನಾರಾಯಣಗೌಡರು ತಮ್ಮ ಮಗನ ಮದುವೆ ಆಮಂತ್ರಣ ನೀಡಲೆಂದು ಸುದೀಪ್ ಮನೆಗೆ ಹೋಗಿದ್ದರು ಎಂಬುದು ಬಳಿಕ ತಿಳಿದುಬಂತು.
ಒಟ್ಟಾರೆ ಬಿಗ್ಬಾಸ್ ರೇಸಿನಲ್ಲಿ ಗಿಲ್ಲಿ ಮತ್ತು ಅಶ್ವಿನಿ ನಡುವೆ ಬಹಳ ಕಠಿಣವಾದ ಸ್ಪರ್ಧೆ ಇದೆ. ಇಬ್ಬರಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಭಾನುವಾರ ಗೊತ್ತಾಗಲಿದೆ. ಈಗಿರುವ ಟ್ರೆಂಡ್ ಪ್ರಕಾರ ಗಿಲ್ಲಿ ನಟ ಅವರೇ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಅಂದಹಾಗೆ ಸ್ವತಃ ರೂಪೇಶ್ ರಾಜಣ್ಣ ಅವರೇ ಗಿಲ್ಲಿಯ ಫ್ಯಾನ್ ಫಾಲೋವಿಂಗ್ ನೋಡಿ ಮೆಚ್ಚಿ ಪೋಸ್ಟ್ ಹಾಕಿದ್ದಾರೆ. ಈ ಬಾರಿ ಗಿಲ್ಲಿ ಗೆಲ್ಲಬಹುದೆಂಬ ಆಶಯ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




