
‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಈಗ ಉಳಿದಿರುವುದು ಕೆಲವೇ ದಿನಗಳು ಮಾತ್ರ. ಯಾರು ಫಿನಾಲೆಗೆ ಹೋಗುತ್ತಾರೆ? ಯಾರು ಟ್ರೋಫಿ ಗೆಲ್ಲುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚುತ್ತಿದೆ. ಈ ಸೀಸನ್ನಲ್ಲಿ ಗಿಲ್ಲಿ ನಟ ಅವರು ಹೆಚ್ಚು ಹೈಲೈಟ್ ಆಗುತ್ತಿದ್ದಾರೆ. ಅವರ ಜೊತೆ ಇರುವ ಕಾರಣಕ್ಕೆ ಕಾವ್ಯಾ ಶೈವ (Kavya Shaiva) ಕೂಡ ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದಾರೆ. ಕಾವ್ಯಾ ಅವರನ್ನು ಗಿಲ್ಲಿ ಪ್ರತಿ ಹಂತದಲ್ಲೂ ಸೇವ್ ಮಾಡುತ್ತಿದ್ದಾರೆ ಎಂಬುದು ಅನೇಕರ ಅಭಿಪ್ರಾಯ. ಅಚ್ಚರಿ ಎಂದರೆ ಕಿಚ್ಚ ಸುದೀಪ್ ಅವರ ಎದುರಿನಲ್ಲಿ ಕೂಡ ಗಿಲ್ಲಿ ನಟ (Gilli Nata) ಅವರು ಕಾವ್ಯಾನ ಬಿಟ್ಟುಕೊಡಲಿಲ್ಲ.
ಕಳೆದ ವಾರ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಕ್ಯಾಪ್ಟನ್ ಗಿಲ್ಲಿ ನಟ ಅವರು ಪ್ರಮುಖ ಪಾತ್ರ ವಹಿಸಿದ್ದರು. ಬಿಗ್ ಬಾಸ್ ಮನೆಯ ಸದಸ್ಯರ ವಾದವನ್ನು ಆಲಿಸಿ, ಯಾರನ್ನು ನಾಮಿನೇಟ್ ಮಾಡಬೇಕು ಎಂಬ ಅಧಿಕಾರ ಗಿಲ್ಲಿಗೆ ನೀಡಲಾಗಿತ್ತು. ಕಾವ್ಯಾ ವಿರುದ್ಧ ಇನ್ನುಳಿದವರು ನೀಡಿದ ಕಾರಣವನ್ನು ಗಿಲ್ಲಿ ನಟ ಒಪ್ಪಿಕೊಳ್ಳಲೇ ಇಲ್ಲ. ಆ ಮೂಲಕ ಕ್ಯಾವಾನ ಅವರು ನಾಮಿನೇಷನ್ನಿಂದ ಹೊರಗೆ ಇಟ್ಟಿದ್ದರು.
ಇದು ಪಕ್ಷಪಾತ ಎಂದು ಅನೇಕರು ಆರೋಪ ಮಾಡಿದ್ದರು. ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಕೂಡ ಈ ಬಗ್ಗೆ ಪ್ರಶ್ನೆ ಮಾಡಿದರು. ಆಗಲೂ ಗಿಲ್ಲಿ ನಡೆ ಹಾಗೆಯೇ ಇತ್ತು. ಕಾವ್ಯಾನ ನಾಮಿನೇಟ್ ಮಾಡಲು ಕೆಲವು ಸೂಕ್ತ ಕಾರಣ ನೀಡುವಂತೆ ಗಿಲ್ಲಿಗೆ ಕಿಚ್ಚ ಸುದೀಪ್ ಅವರು ಹೇಳಿದರು. ಆಗ ಗಿಲ್ಲಿ ನಟ ಅವರು ಯಾವುದೇ ಕಾರಣಗಳನ್ನು ನೀಡದೇ ಸೈಲೆಂಟ್ ಆಗಿದ್ದರು.
ಈ ಸಂದರ್ಭದಲ್ಲಿ ಕೂಡ ಗಿಲ್ಲಿ ನಟ ಅವರು ಕಾವ್ಯಾ ಪರವಾಗಿಯೇ ವರ್ತಿಸಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಗಿಲ್ಲಿಗೆ ಕಾವ್ಯಾ ವಿರುದ್ಧ ಹೇಳಲು ಕಾರಣಗಳು ಇಲ್ಲವೇ ಇಲ್ಲ ಎಂದು ಒಪ್ಪಲು ಸಾಧ್ಯವಿಲ್ಲ. ಯಾಕೆಂದರೆ ಈ ಮೊದಲು ಕಾವ್ಯಾ ಅವರು ಪೋಷಕರ ಜೊತೆ ಸೇರಿ ಬಿಗ್ ಬಾಸ್ ಮನೆಯ ನಿಯಮ ಉಲ್ಲಂಘನೆ ಮಾಡಿದ್ದನ್ನೇ ಇತರರು ಕಾರಣವಾಗಿ ನೀಡಬಹುದಿತ್ತು ಎಂದು ಗಿಲ್ಲಿ ಒಬ್ಬರೇ ಊಹಿಸಿದ್ದರು. ಅದನ್ನು ಹೊರತು ಪಡಿಸಿ ಬೇರೆ ಕಾರಣ ನೀಡಿ ಎಂದು ಸುದೀಪ್ ಹೇಳಿದಾಗ ಗಿಲ್ಲಿ ಮೌನಕ್ಕೆ ಜಾರಿದರು. ಒಂದು ವೇಳೆ ಅವರು ಬೇರೆ ಕಾರಣಗಳನ್ನು ನೀಡಿದ್ದರೆ ಇನ್ನುಳಿದ ಸ್ಪರ್ಧಿಗಳಿಗೆ ಕಾವ್ಯಾರನ್ನು ಮುಂದಿನ ಬಾರಿ ನಾಮಿನೇಟ್ ಮಾಡಲು ಸ್ವತಃ ಗಿಲ್ಲಿಯೇ ಸಹಾಯ ಮಾಡಿಕೊಟ್ಟಂತೆ ಆಗಿರುತ್ತಿತ್ತು. ಹಾಗಾಗಿ ಈ ಬಾರಿ ಸುದೀಪ್ ಎದುರು ಗಿಲ್ಲಿ ಮೌನವಾಗಿ ಇದ್ದಿದ್ದು ಕೂಡ ಒಂದು ಬಗೆಯ ತಂತ್ರಗಾರಿಕೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ಇದನ್ನೂ ಓದಿ: ಬಿಗ್ಬಾಸ್: ಗಿಲ್ಲಿಯ ಗುಟ್ಟು ರಟ್ಟು ಮಾಡಿದ ಸುದೀಪ್
ಅದೇನೇ ಇರಲಿ, ಒಟ್ಟಿನಲ್ಲಿ ಗಿಲ್ಲಿ ನಟ ಅವರು ಕ್ಯಾಪ್ಟನ್ ಆಗಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟವನ್ನು ತೋರಿಸಿದ್ದಾರೆ. ಕೆಲವರಿಗೆ ಅವರ ವರ್ತನೆ ಇಷ್ಟ ಆಗಿಲ್ಲ. ಆದರೆ ಅವರು ಎಂದಿನಂತೆ ತಮ್ಮ ಕಾಮಿಡಿ ಮೂಲಕವೇ ಪ್ರೇಕ್ಷಕರು ನಗಿಸುತ್ತಿದ್ದಾರೆ. ಕಳೆದ ವಾರ ಧ್ರುವಂತ್ ಅವರು ಕಳಪೆ ಪಟ್ಟ ಪಡೆದು ಜೈಲು ಸೇರಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.