
ಕಿಚ್ಚ ಸುದೀಪ್ ಅವರು ಪ್ರತಿ ವಾರ ಒಬ್ಬ ಸ್ಪರ್ಧಿಗೆ ಚಪ್ಪಾಳೆ ಕೊಡುತ್ತಾರೆ. ಇಡೀ ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಆಟ ಆಡುವವರಿಗೆ ಸುದೀಪ್ ಈ ಚಪ್ಪಾಳೆ ನೀಡುತ್ತಾರೆ. ಇಡೀ ವಾರವನ್ನು ಗಮನಿಸಿ ಅವರು ಇದನ್ನು ನೀಡುತ್ತಾರೆ. ಈ ಬಾರಿ ಕಿಚ್ಚ ಸುದೀಪ್ ಅವರು ಈ ಚಪ್ಪಾಳೆಯನ್ನು ಗಿಲ್ಲಿ ನಟನಿಗೆ ನೀಡಿದರು. ಇದಕ್ಕೆ ಕಾರಣವೂ ಇದೆ. ಅವರು ರಕ್ಷಿತಾ ಪರ ನಿಂತರು. ಇದಕ್ಕಾಗಿ ಈ ಚಪ್ಪಾಳೆ ಸಿಕ್ಕಿದೆ ಎನ್ನಬಹುದು.
ಕಿಚ್ಚ ಸುದೀಪ್ ಅವರು ಪ್ರತಿ ವಾರ ಚಪ್ಪಾಳೆ ಕೊಡುತ್ತಾರೆ. ಈ ಚಪ್ಪಾಳೆ ತೆಗೆದುಕೊಳ್ಳಬೇಕು ಎಂಬುದು ಅನೇಕರ ಆಸೆ ಆಗಿರುತ್ತದೆ. ಆದರೆ, ಇದಕ್ಕೆ ಸಾಕಷ್ಟು ಶ್ರಮ ಹಾಕಲೇಬೇಕು. ಆದರೆ, ಇದು ಅಷ್ಟು ಸುಲಭವಾಗಿ ಸಿಗೋದೆ ಇಲ್ಲ. ಈಗ ಗಿಲ್ಲಿ ಅವರು ಈ ಚಪ್ಪಾಳೆ ಪಡೆದರು. ಇದಕ್ಕೆ ಕಾರಣವನ್ನು ಸುದೀಪ್ ಅವರು ವಿವರಿಸಿದರು.
ಈ ಬಾರಿ ರಕ್ಷಿತಾ ಶೆಟ್ಟಿ ಅವರಿಗೆ ಅಶ್ವಿನಿ ಗೌಡ ಹಾಗೂ ಜಾನ್ವಿ ಅವರು ಸಾಕಷ್ಟು ರ್ಯಾಗ್ ಮಾಡಿದರು. ಈ ರೀತಿ ರ್ಯಾಗ್ ಮಾಡೋದು ಸರಿ ಅಲ್ಲ ಎಂದು ಯಾರೊಬ್ಬರೂ ಮುಂದೆ ಬಂದು ಹೇಳಲೇ ಇಲ್ಲ. ಆದರೆ ಗಿಲ್ಲಿ ಹಾಗಿಲ್ಲ. ಪ್ರತಿ ಹಂತದಲ್ಲೂ ರಕ್ಷಿತಾ ಅವರನ್ನು ಬೆಂಬಲಿಸುತ್ತಾ ಬಂದರು. ಅವರು ಪ್ರತಿ ಹಂತದಲ್ಲೂ ರಕ್ಷಿತಾನ ಸಪೋರ್ಟ್ ಮಾಡಿದರು. ಈ ಕಾರಣಕ್ಕೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.
ಇದನ್ನೂ ಓದಿ: ಸುದೀಪ್ ಅವಾಜ್ಗೆ ಅಶ್ವಿನಿ ಗೆಜ್ಜೆ ಸದ್ದು ಸೈಲೆಂಟ್; ಇಷ್ಟೆಲ್ಲ ಆದ್ರೂ ಪಶ್ಚಾತಾಪ ಮಾತ್ರ ಇಲ್ಲ
‘ಸರಿಯಾದ ಸಮಯದಲ್ಲಿ ಸ್ಟ್ಯಾಂಡ್ ತಗೊಳೋದು ಮುಖ್ಯ. ನೀವು ತೆಗೆದುಕೊಳ್ಳುವ ಸ್ಟ್ತಾಂಡ್ಗೆ ಇಡೀ ಕರ್ನಾಟಕ ಚಪ್ಪಾಳೆ ತಟ್ಟುತ್ತೆ. ಹಾಗೆ ತೆಗೆದುಕೊಳ್ಳುವ ಸ್ಟ್ಯಾಂಡ್ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ’ ಎಂದು ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.