
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ (Gilli Nata) ಅವರು ನಾನಾ ಕಡೆಗಳಲ್ಲಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾರೆ. ಪ್ರತಿ ವೇದಿಕೆಯಲ್ಲೂ ಅವರಿಗೆ ರಾಜ ಮರ್ಯಾದೆ ಸಿಗುತ್ತಿದೆ. ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆಯುತ್ತಿದ್ದಾರೆ. ಈ ವಿಷಯ ಅವರ ಖುಷಿಗೆ ಕಾರಣ ಆಗಿದೆ. ಬಿಗ್ ಬಾಸ್ ವೀಕ್ಷಕರು ಕೂಡ ಗಿಲ್ಲಿ ಜನಪ್ರಿಯತೆ ಕಂಡು ನಿಬ್ಬರಗಾಗುತ್ತಿದ್ದಾರೆ. ಈಗ ಗಿಲ್ಲಿ ಹೋದಲ್ಲಿ ಬಂದಲ್ಲಿ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಈಗ ಗಿಲ್ಲಿ ಅವರ ಫನ್ ವಿಡಿಯೋ ವೈರಲ್ ಆಗಿದೆ.
ಗಿಲ್ಲಿ ನಟ ಅವರು ಹಲವು ರಿಯಾಲಿಟಿ ಶೋಗಳನ್ನು ನೀಡಿದವರು. ಇದರಿಂದ ಸ್ವಲ್ಪ ಜನಪ್ರಿಯತೆ ಅವರಿಗೆ ಸಿಕ್ಕಿತ್ತು. ಆದರೆ, ಬಿಗ್ ಬಾಸ್ ತಂದುಕೊಟ್ಟಷ್ಟು ಜನಪ್ರಿಯತೆ ಅವರಿಗೆ ಯಾವ ಶೋ ಕೂಡ ನೀಡಿಲ್ಲ. ಈ ಕಾರಣದಿಂದ ಬಿಗ್ ಬಾಸ್ ಶೋಗೆ ಅವರು ಚಿರಋಣಿ ಆಗಿದ್ದಾರೆ. ಇತ್ತೀಚೆಗೆ ಅವರು ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು. ಈ ವೇಳೆ ಒಂದು ಫನ್ ಘಟನೆ ನಡೆದಿದೆ.
ಕಾರ್ಯಕ್ರಮ ಮುಗಿದ ಬಳಿಕ ಗಿಲ್ಲಿನ ಭೇಟಿ ಮಾಡಬೇಕು, ಗಿಲ್ಲಿ ಜೊತೆ ಮಾತನಾಡಬೇಕು, ಗಿಲ್ಲಿ ಜೊತೆ ಸೆಲ್ಫಿ ತೆಗೆಸಿಕೊಳ್ಳಬೇಕು ಎಂದು ಅನೇಕರು ಮುತ್ತಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಗಿಲ್ಲಿಗೆ ತೊಂದರೆ ಆಗುತ್ತದೆ. ಆ ರೀತಿ ಆಗಬಾರದು ಎಂದೇ ಗಿಲ್ಲಿ ನಟ ಅವರಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ.
ಗಿಲ್ಲಿನ ತೆಗೆದುಕೊಂಡು ಹೋಗುತ್ತಿದ್ದನ್ನು ನೋಡಿದ ಅನೇಕರಿಗೆ, ಪೊಲೀಸರು ಆರೋಪಿಯನ್ನು ಕರೆದುಕೊಂಡು ಹೋದಂತೆ ಕಾಣಿಸಿದೆ. ಗಿಲ್ಲಿ ಯಾರು ಎಂಬ ಗೊತ್ತಿಲ್ಲದ ವ್ಯಕ್ತಿ ಯಾರಾದರೂ ಇದ್ದಲ್ಲಿ ಅವರಿಗೆ ಈ ವಿಡಿಯೋ ಅದೇ ರೀತಿ ಕಾಣಿಸಲಿದೆ. ಗಿಲ್ಲಿ ಕೂಡ ‘ಸರ್, ನಾನೇನು ಕಳ್ಳನಾ?’ ಎಂದು ಕೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೊಲೀಸರು ನಕ್ಕಿದ್ದಾರೆ.
ಇದನ್ನೂ ಓದಿ: ಗಿಲ್ಲಿ ನಟನಿಗೆ ಬಿಗ್ ಬಾಸ್ನಿಂದ ಕಾರು ಸಿಗೋದು ಯಾವಾಗ? ಕೊನೆಗೂ ಸಿಕ್ತು ಉತ್ತರ
ಗಿಲ್ಲಿ ಅವಕಾಶ ಸಿಕ್ಕಾಗಲೆಲ್ಲ ಹಾಸ್ಯದ ಹೊಳೆ ಹರಿಸುತ್ತಾರೆ. ಪೊಲೀಸರು ಜೊತೆಯೂ ಅವರು ನಗೆ ಚಟಾಕಿ ಹಾರಿಸಿದ್ದಾರೆ. ಈ ಕಾರಣಕ್ಕೆ ಅವರು ಇಷ್ಟ ಆಗುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:41 am, Mon, 26 January 26