ರಿತ್ವಿಕ್​ ನಟನೆ ನೋಡಿ ಫಿದಾ ಆದ ಕಿಚ್ಚ ಸುದೀಪ್​; ಅಷ್ಟಕ್ಕೂ ಅವರು ಮಾಡಿದ್ದೇನು?

| Updated By: ರಾಜೇಶ್ ದುಗ್ಗುಮನೆ

Updated on: Aug 31, 2021 | 5:35 PM

‘ಗಿಣಿರಾಮ’ ಧಾರಾವಾಹಿಯಲ್ಲಿ ರಫ್​ ಆ್ಯಂಡ್ ಟಫ್​ ಆಗಿ ಕಾಣಿಸಿಕೊಳ್ಳುತ್ತಾರೆ ನಟ ರಿತ್ವಿಕ್​ ಮಠದ್. ಆದರೆ, ನಿಜ ಜೀವನದಲ್ಲಿ ಅವರು ಸಖತ್​ ಫನ್ನಿ. ಬಿಗ್​ ಬಾಸ್​ ಮಿನಿ ಸೀಸನ್​ನಲ್ಲಿ ಅವರು ಮಾಡಿದ ಕೀಟಲೆಗಳು ಒಂದೆರಡಲ್ಲ.

ರಿತ್ವಿಕ್​ ನಟನೆ ನೋಡಿ ಫಿದಾ ಆದ ಕಿಚ್ಚ ಸುದೀಪ್​; ಅಷ್ಟಕ್ಕೂ ಅವರು ಮಾಡಿದ್ದೇನು?
ರಿತ್ವಿಕ್​ ಮಠದ್​, ಕಿಚ್ಚ ಸುದೀಪ್​
Follow us on

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಮುಗಿದ ಕೂಡಲೇ ಆರಂಭವಾದ ‘ಬಿಗ್ ಬಾಸ್​ ಮಿನಿ ಸೀಸನ್​’ ಹಲವು ಕಾರಣಗಳಿಂದಾಗಿ ಗಮನ ಸೆಳೆಯುತ್ತಿದೆ. ಕಲರ್ಸ್​ ಕನ್ನಡ ಧಾರಾವಾಹಿಯ 15 ಕಲಾವಿದರನ್ನು ಒಂದೇ ಮನೆಯಲ್ಲಿ ನೋಡಿ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ಈ ಕಾರ್ಯಕ್ರಮದ ಮೂಲಕ ಸೀರಿಯಲ್​ ಕಲಾವಿದರ ರಿಯಲ್​ ಲೈಫ್​ ಬಗ್ಗೆ ಒಂದಷ್ಟು ಪರಿಚಯ ವೀಕ್ಷಕರಿಗೆ ಆಗಿದೆ. ಅದೇ ರೀತಿ ನಟ ರಿತ್ವಿಕ್​ ವೈಯಕ್ತಿಕವಾಗಿ ಅನೇಕರಿಗೆ ಇಷ್ಟವಾಗಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗಿಣಿರಾಮ’ ಧಾರಾವಾಹಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು ರಿತ್ವಿಕ್​ ಮಠದ್​. ಸೀರಿಯಲ್​ನಲ್ಲಿ ಅವರ ಪಾತ್ರ ಸ್ವಲ್ಪ ರಫ್​ ಆ್ಯಂಡ್ ಟಫ್​. ಆದರೆ, ಅವರು ನಿಜ ಜೀವನದಲ್ಲಿ ಸಖತ್​ ಫನ್ನಿ. ಅವರು ಮಾಡುವ ಕೀಟಲೆಗಳು ಒಂದೆರಡಲ್ಲ. ಬಿಗ್​ ಬಾಸ್​ ಮನೆಯಲ್ಲಿ ಅವರು ನಿರಂಜನ್​ ಅವರನ್ನು ಬಕ್ರಾ ಮಾಡಿದ್ದಾರೆ. ಅವರ ಆ್ಯಕ್ಟಿಂಗ್​ ನೋಡಿ ಸ್ವತಃ ಸುದೀಪ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್​ನ ಕನ್ಫೆಷನ್​ ರೂಮ್​ಗೆ ತೆರಳಿದ್ದರು ರಿತ್ವಿಕ್. ಅಲ್ಲಿ ಬಿಗ್​ ಬಾಸ್​ ಮನೆಯ ಅನುಭವಗಳನ್ನು ಕೇಳಲಾಗಿದೆ. ಕನ್ಫೆಷನ್​ ರೂಮ್​ನಿಂದ ರಿತ್ವಿಕ್​ ಹೊರ ಬಂದಿದ್ದನ್ನು ನೋಡಿದ ನಿರಂಜನ್​ ‘ಬಿಗ್​ ಬಾಸ್​ ನಿಮಗೆ ಸೀಕ್ರೆಟ್​ ಟಾಸ್ಕ್​ ನೀಡಿದ್ರಾ’ ಎಂದು ಪ್ರಶ್ನೆ ಮಾಡಿದ್ದಾರೆ. ಇಲ್ಲ ಎನ್ನುವ ಉತ್ತರವನ್ನು ರಿತ್ವಿಕ್​ ನೀಡಿದರು. ಆದರೆ, ನಿರಂಜನ್​ ಇದನ್ನು ನಂಬಿಲ್ಲ. ಪದೇಪದೇ ಸೀಕ್ರೆಟ್​ ಟಾಸ್ಕ್​ ವಿಚಾರವನ್ನು ರಿತ್ವಿಕ್​ ಜತೆ ಚರ್ಚಿಸಿದ್ದಾರೆ ಅವರು​.

ಇದರಿಂದ ಬೇಸತ್ತ ರಿತ್ವಿಕ್​ ಕೊನೆಯಲ್ಲಿ ಹೌದು ಎಂದು ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ‘ಟೀಮ್​ಗೆ ಒಬ್ಬರನ್ನು ಸೇರಿಸಿಕೊಂಡು ಅವರಿಂದ ಟಾಸ್ಕ್​ ಮಾಡಿಸಬೇಕು. ಹಾಗೆ ಮಾಡಿದರೆ, ನನ್ನ ಟೀಮ್​ನಲ್ಲಿದ್ದವರಿಗೆ 15 ಪಾಯಿಂಟ್​ ಸಿಗಲಿದೆ. ಟಾಸ್ಕ್​ ತುಂಬಾನೇ ಸಿಂಪಲ್​. ಮೂರು ಜನರ ಬ್ಯಾಗ್​ನಿಂದ ಮೂರು ವಸ್ತುಗಳನ್ನು ಎತ್ತಬೇಕು’ ಎಂದು ರಿತ್ವಿಕ್ ಕುರಿ ಮಾಡೋಕೆ ಪ್ಲ್ಯಾನ್​ ರೂಪಿಸಿದರು​. ಆದರೆ, ಇದನ್ನು ನಿರಂಜನ್​ ನಂಬಲೇ ಇಲ್ಲ.

ಕೊನೆಯಲ್ಲಿ ನಿರಂಜನ್​ ನಂಬುವ ರೀತಿಯಲ್ಲಿ ರಿತ್ವಿಕ್​ ನಟನೆ ಮಾಡಿದರು. ಇದು ಸೀಕ್ರೆಟ್​ ಟಾಸ್ಕ್​ ಎಂದು ನಂಬಿದ ನಿರಂಜನ್​, ಮೂರು ಜನರ ಬ್ಯಾಗ್​ನಿಂದ ಮೂರು ವಸ್ತುಗಳನ್ನು ತೆಗೆದರು. ಕೊನೆಯಲ್ಲಿ ತಾವು ಬಕ್ರಾ ಆಗಿರುವ ವಿಚಾರ ನಿರಂಜನ್ ಅವರಿಗೆ ಗೊತ್ತಾಗಿದೆ. ಈ ಘಟನೆಯು ಸುದೀಪ್​ ಪಂಚಾಯ್ತಿಯಲ್ಲಿ ಚರ್ಚೆಗೆ ಬಂದಿದೆ. ರಿತ್ವಿಕ್​ ನಟನೆಯನ್ನು ಕಿಚ್ಚ ಸುದೀಪ್​ ಮನಸಾರೆ ಹೊಗಳಿದ್ದಾರೆ. ಅಷ್ಟೇ ಅಲ್ಲ, ಚಪ್ಪಾಳೆ ಕೂಡ ತಟ್ಟಿದ್ದಾರೆ.

‘ಬಿಗ್​ ಬಾಸ್​ ಮಿನಿ ಸೀಸನ್​’ ಈಗ ಮುಕ್ತಾಯದ ಹಂತದಲ್ಲಿದೆ. 15 ಸೆಲೆಬ್ರಿಟಿಗಳು ಇಷ್ಟು ದಿನ ಹಲವು ಟಾಸ್ಕ್​ಗಳನ್ನು ನಿಭಾಯಿಸುವ ಮೂಲಕ ಹಣಾಹಣಿ ನಡೆಸಿದ್ದಾರೆ. ಶನಿವಾರ (ಸೆ.4) ಮತ್ತು ಭಾನುವಾರ (ಸೆ.5) ಮಧ್ಯಾಹ್ನ ಮೂರು ಗಂಟೆಗೆ ಫಿನಾಲೆ ಪ್ರಸಾರ ಆಗಲಿದೆ. ಈಗಾಗಲೇ ಅದರ ಚಿತ್ರೀಕರಣ ಮುಗಿದಿದೆ.

ಇದನ್ನೂ ಓದಿ:

Kichcha Sudeep: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಕಿಚ್ಚ ಸುದೀಪ್​; ಫೋಟೋ ವೈರಲ್​

ಬಿಗ್​ ಬಾಸ್​ ಮಿನಿ ಸೀಸನ್​ ಫಿನಾಲೆಗೆ ಸಿಂಹಾಸನವೇರಿ ಬಂದ ಕಿಚ್ಚ; ಇಲ್ಲಿದೆ ಅದ್ದೂರಿ ವೇದಿಕೆಯ ಝಲಕ್​

Published On - 4:56 pm, Tue, 31 August 21