ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರ ನಡೆದಿರುವ ವಿಚಾರ ಗೊತ್ತೇ ಇದೆ. ಈ ಬಗ್ಗೆ ಹುಟ್ಟಿಕೊಂಡ ಚರ್ಚೆಗಳು ಒಂದೆರಡಲ್ಲ. ಅವರು ದೊಡ್ಮನೆಯಿಂದ ಹೊರ ಬಂದು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಹೀಗಿರುವಾಗಲೇ ಅವರು ಸುದೀಪ್ ಎದುರು ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಹೊರಗೆ ಆಪ್ತರಿಂದಲೇ ಮೋಸ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ದೊಡ್ಮನೆ ಒಳಗೆ ಹೋಗೋಕೆ ಅವರು ಮತ್ತೊಂದು ಅವಕಾಶ ಕೇಳಿದ್ದಾರೆ.
‘ಮನೆ ಒಳಗೆ ಹೋಗಬೇಕಾಗುವಾಗ ನನ್ನ ಸಂಸ್ಥೆ ಯಾರು ನೋಡಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಇತ್ತು. ನನ್ನ ಪತ್ನಿ ಹಾಗೂ ತಂಡದವರನ್ನು ನಂಬಿ ನನ್ನ ಕಂಪನಿ ಕೊಟ್ಟು ಹೋದೆ. ಗೆಳೆಯರು ಇದನ್ನು ತುಂಬಾ ಮಿಸ್ಯೂಸ್ ಮಾಡಿಕೊಂಡರು. ಯಾವಾಗ ಕಷ್ಟ ಆಗುತ್ತದೆ ಎಂದಾಗ ನನ್ನನ್ನು ಕರೆಯಿರಿ ಎಂದು ಹೇಳಿದ್ದೆ. ಅವರಿಗೆ ಆಗದ್ದೇ ಇದ್ದಾಗ ನನ್ನನ್ನು ಕರೆದರು. ನಾನು ಬಂದು ನನ್ನ ಕಂಟ್ರೋಲ್ಗೆ ತೆಗೆದುಕೊಂಡೆ’ ಎಂದಿದ್ದಾರೆ ಅವರು.
ಮತ್ತೊಮ್ಮೆ ಸುರೇಶ್ ಅವರು ಬಿಗ್ ಬಾಸ್ ಮನೆ ಒಳಗೆ ಹೋಗೋಕೆ ಅವಕಾಶ ಕೇಳಿದ್ದಾರೆ. ಇದಕ್ಕೆ ಸುದೀಪ್ ನೋ ಎಂದಿದ್ದಾರೆ. ‘ಚೈತ್ರಾನ ಒಂದು ದಿನ ಹೊರಕ್ಕೆ ಬಿಟ್ಟು ಅಲ್ಲಿ ಅವರ ಕಂಟ್ರೋಲ್ ಮಾಡೋಕೆ ಸಾಧ್ಯವಾಗುತ್ತಿಲ್ಲ. ಇನ್ನು ನೀವು ಇಡೀ ಪ್ರಪಂಚ ನೋಡಿ ಬಂದವರು. ನಿಮ್ಮನ್ನು ಒಳಕ್ಕೆ ಬಿಟ್ಟರೆ ಅಷ್ಟೇ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಹನುಮಂತನ ಮದುವೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡ ಗೋಲ್ಡ್ ಸುರೇಶ್
ಸುರೇಶ್ ಅವರು ಉತ್ತಮವಾಗಿ ಆಡುತ್ತಿದ್ದರು. ಅವರು ದೊಡ್ಮನೆಯಿಂದ ಹೊರ ಹೋದ ವಿಚಾರ ಅವರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ. ಈ ವಿಚಾರ ಚರ್ಚೆಗೆ ಕಾರಣ ಆಗಿದೆ. ಅವರು ಇನ್ನಷ್ಟು ವಾರ ಇರಬೇಕಿತ್ತು ಎಂದು ಅನೇಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.