2 ವಿಚಾರದಲ್ಲಿ ತ್ರಿವಿಕ್ರಮ್​ಗೆ ಮಣ್ಣು ಮುಕ್ಕಿಸಿದ ಹನುಮಂತ; ಇದು ರಿಯಲ್ ಪ್ರತಿಭೆ

ಬಿಗ್ ಬಾಸ್ ಆಟದಲ್ಲಿ ಹನುಮಂತ ಅವರು ಈಗಾಗಲೇ ಎರಡು ಬಾರಿ ಕ್ಯಾಪ್ಟನ್ ಆಗಿದ್ದಾರೆ. ಅವರ ತಂತ್ರಗಾರಿಕೆಯೇ ಬೇರೆ ರೀತಿ ಇದೆ. ತ್ರಿವಿಕ್ರಮ್ ಅವರಿಗಿಂತ ಹನುಮಂತ ಕಮ್ಮಿ ಏನೂ ಇಲ್ಲ. ಗೌತಮಿ ಜೊತೆ ಸೇರಿ ಅವರು ಚೆನ್ನಾಗಿ ಆಟ ಆಡಿದ್ದಾರೆ. ಹನುಮಂತನ ಆಟಕ್ಕೆ ಅನೇಕರು ಚಪ್ಪಾಳೆ ತಟ್ಟಿದ್ದಾರೆ. ಈ ಮೊದಲು ಅವರಿಗೆ ಕಿಚ್ಚನ ಚಪ್ಪಾಳೆ ಸಹ ಸಿಕ್ಕಿತ್ತು

2 ವಿಚಾರದಲ್ಲಿ ತ್ರಿವಿಕ್ರಮ್​ಗೆ ಮಣ್ಣು ಮುಕ್ಕಿಸಿದ ಹನುಮಂತ; ಇದು ರಿಯಲ್ ಪ್ರತಿಭೆ
ಹನುಮಂತ, ಗೌತಮಿ ಜಾದವ್, ತ್ರಿವಿಕ್ರಮ್

Updated on: Nov 15, 2024 | 10:32 PM

ನಟನೆಯಲ್ಲಿ ಪಳಗಿದವರೇ ಹೆಚ್ಚಾಗಿ ಬಿಗ್ ಬಾಸ್ ಮನೆಗೆ ಕಾಲಿಡುತ್ತಾರೆ. ಅವರ ನಡುವೆ ಬೇರೆ ಕ್ಷೇತ್ರದ ಸ್ಪರ್ಧಿಗಳು ಕೂಡ ಬರುತ್ತಾರೆ. ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋಗೆ ಕಿರುತೆರೆ ಮತ್ತು ಸಿನಿಮಾ ಕಲಾವಿದರೇ ಹೆಚ್ಚಾಗಿ ಬಂದಿದ್ದಾರೆ. ಬೇರೆ ಕ್ಷೇತ್ರವರ ಸಂಖ್ಯೆ ಕಡಿಮೆ ಇದೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ಹನುಮಂತ ಕೂಡ ನಟ ಅಲ್ಲ. ಹಾಗಿದ್ದರೂ ಕೂಡ ಅವರು ಸೀರಿಯಲ್-ಸಿನಿಮಾ ನಟ-ನಟಿಯರಿಗೆ ಟಕ್ಕರ್​ ಕೊಡುವ ಮಟ್ಟಕ್ಕೆ ಬಿಗ್ ಬಾಸ್ ಮನೆಯಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಾನೇ ಮೇಲು ಎಂಬ ರೀತಿಯಲ್ಲಿ ಮೆರೆಯುತ್ತಿದ್ದ ತ್ರಿವಿಕ್ರಮ್​ಗೆ ಹನುಮಂತ ಮಣ್ಣು ಮುಕ್ಕಿಸಿದ್ದಾರೆ!

ತ್ರಿವಿಕ್ರಮ್ ಅವರು ದೈಹಿಕವಾಗಿ ಬಲಶಾಲಿ ಆಗಿದ್ದಾರೆ. ಹಾಗಾಗಿ ಅವರು ಪ್ರತಿ ಟಾಸ್ಕ್​ನಲ್ಲಿಯೂ ಮುಂದಿರುತ್ತಾರೆ. ಅವರ ಜೊತೆ ಜೋಡಿಯಾಗಿ ಆಟವಾಡಲು ಬಹುತೇಕರು ಇಷ್ಟಪಡುತ್ತಾರೆ. ಈ ವಾರದ ಜೋಡಿ ಟಾಸ್ಕ್​ನಲ್ಲಿ ಮೊದಲು ಗೌತಮಿ ಜಾದವ್ ಮತ್ತು ಹನುಮಂತ ಅವರು ಜೋಡಿ ಆಗಿದ್ದರು. ಆದರೆ ಮಧ್ಯದಲ್ಲಿ ಜೋಡಿ ಬದಲಾಯಿಸಲು ಬಿಗ್ ಬಾಸ್ ಅವಕಾಶ ನೀಡಿದಾಗ ಗೌತಮಿ ಅವರು ತ್ರಿವಿಕ್ರಮ್ ಜೊತೆ ಜೋಡಿಯಾಗಲು ಇಷ್ಟಪಟ್ಟಿದ್ದರು. ಆದರೆ ಅದಕ್ಕೆ ತ್ರಿವಿಕ್ರಮ್ ಅವಕಾಶ ನೀಡಲಿಲ್ಲ.

ತ್ರಿವಿಕ್ರಮ್ ಜೊತೆ ಕೈ ಜೋಡಿಸಿದರೆ ತಾವು ಗೆಲ್ಲಬಹುದು ಎಂಬುದು ಗೌತಮಿ ಅವರ ಆಲೋಚನೆ ಆಗಿತ್ತು. ಆದರೆ ಆಗಿದ್ದೇ ಬೇರೆ. ತ್ರಿವಿಕ್ರಮ್ ಅವರಿಗಿಂತಲೂ ಹನುಮಂತ ಅವರೇ ಚೆನ್ನಾಗಿ ಆಟವಾಡಿ ತಾವು ಕೂಡ ತ್ರಿವಿಕ್ರಮ್​ಗಿಂತ ಕಡಿಮೆ ಏನಿಲ್ಲ ಎಂದು ಸಾಬೀತು ಮಾಡಿದರು. ಅಷ್ಟೇ ಅಲ್ಲದೇ, ಡ್ಯಾನ್ಸ್ ಮಾಡುವ ಟಾಸ್ಕ್​ನಲ್ಲಿಯೂ ಹನುಮಂತ ಅವರು ತ್ರಿವಿಕ್ರಮ್ ಅವರಿಗಿಂತಲೂ ಚೆನ್ನಾಗಿ ಪರ್ಫಾರ್ಮೆನ್ಸ್​ ನೀಡಿ ಮೊದಲ ಸ್ಥಾನ ಪಡೆದುಕೊಂಡರು. ಕಡೆಗೂ ಹನುಮಂತ ಮತ್ತು ಗೌತಮಿ ಅವರಿಗೆ ಅತಿ ಹೆಚ್ಚು ಎಂದರೆ, 600 ಅಂಕಗಳು ಸಿಕ್ಕವು.

ಇದನ್ನೂ ಓದಿ: ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ

ಹನುಮಂತನ ಜೊತೆ ಕೈ ಜೋಡಿಸಿದ್ದಕ್ಕಾಗಿಯೇ ಗೌತಮಿ ಅವರಿಗೆ ಎಲ್ಲರಿಗಿಂತ ಹೆಚ್ಚು ಅಂಕ ಸಿಗಲು ಸಾಧ್ಯವಾಯ್ತು. ಅದಕ್ಕೂ ಮುನ್ನ ತಾವು ಹನುಮಂತನನ್ನು ಬಿಟ್ಟು ತ್ರಿವಿಕ್ರಮ್ ಜೊತೆ ಕೈ ಜೋಡಿಸಲು ಮನಸ್ಸು ಮಾಡಿದ್ದಕ್ಕೆ ಗೌತಮಿ ಪಶ್ಚಾತ್ತಾಪ ಮಾಡಿಕೊಂಡರು. ಹನುಮಂತನ ಎದುರು ಈ ವಿಚಾರ ಹೇಳಿಕೊಂಡು ಅವರು ಕಣ್ಣೀರು ಹಾಕಿದರು. ಒಟ್ಟಿನಲ್ಲಿ ಹನುಮಂತ ಅವರು ಟಾಸ್ಕ್​ ಮತ್ತು ಡ್ಯಾನ್ಸ್ ಎರಡರಲ್ಲಿಯೂ ತ್ರಿವಿಕ್ರಮ್​ಗೆ ಮಣ್ಣು ಮುಕ್ಕಿಸಿದರು. ಅವರ ರಿಯಲ್ ಪ್ರತಿಭೆ ಎಲ್ಲರಿಗೂ ತಿಳಿಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.