
‘ಬಿಗ್ ಬಾಸ್ ಕನ್ನಡ ಸೀಸನ್ 11’ ವಿನ್ ಆಗೋ ಮೂಲಕ ಹನುಮಂತ ಅವರು ಫೇಮಸ್ ಆಗಿದ್ದಾರೆ. ಅವರಿಗೆ ಅಪಾರ ಜನಪ್ರಿಯತೆ ಸಿಕ್ಕಿದೆ. ಅವರು ಸೈಲೆಂಟ್ ಆಗಿರೋದು ಹೆಚ್ಚು. ಹಾಗಂತ ಅವರನ್ನು ಯಾರಾದರೂ ಕೆಣಕಲು ಬಂದರೆ ಅದಕ್ಕೆ ಉತ್ತರ ಕೊಡದೆ ಸುಮ್ಮನಾಗುವುದೇ ಇಲ್ಲ. ಈಗ ‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ನಿವೇದಿತಾ ಗೌಡ ಅವರನ್ನು ಇಟ್ಟುಕೊಂಡು ತಮ್ಮ ಕೆಣಕಲು ಬಂದವರಿಗೆ ಹನುಮಂತ ಖಡಕ್ ಉತ್ತರ ನೀಡಿದ್ದಾರೆ. ಅಲ್ಲಿ ಆಗಿದ್ದೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಫೆಬ್ರವರಿ 1ರಿಂದ ಆರಂಭ ಆಗಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ಕಾರ್ಯಕ್ರಮ ಪ್ರಸಾರ ಕಾಣಲಿದೆ. ಈ ವೇದಿಕೆ ಮೇಲೆ ನಿವೇದಿತಾ ಗೌಡ ಅವರು ಹೆಚ್ಚು ಚರ್ಚೆ ಆದರು. ಅವರ ಎರಡರಿಂದ ಮೂರು ಇಂಚಿನ ಉಗುರು ಸಾಕಷ್ಟು ಗಮನ ಸೆಳೆಯಿತು. ಇದರ ಗುಣಗಾನ ಮಾಡಲಾಯಿತು.
‘ಬಾಯ್ಸ್ vs ಗರ್ಲ್ಸ್’ ಶೋನ ನಿರೂಪಕಿ ಅನುಪಮಾ ಗೌಡ ಅವರು ನಿವೇದಿತಾ ಗೌಡ ಅವರ ಉಗುರನ್ನು ಹೊಗಳಿದರು. ಇದರಿಂದ ಖುಷಿ ಆದ ನಿವೇದಿತಾ, ‘ನಾನು ಇದೇ ಉಗುರಲ್ಲಿ ಹಣ್ಣನ್ನು ಕಟ್ ಮಾಡುತ್ತೇನೆ, ಮುದ್ದೆಯನ್ನು ಕಟ್ ಮಾಡಿ ತಿನ್ನುತ್ತೇನೆ’ ಎಂದೆಲ್ಲ ಹೇಳಿದರು. ಅಲ್ಲದೆ, ಇದು ಸಂಪೂರ್ಣ ನ್ಯಾಚುರಲ್ ಉಗುರು ಎಂದು ಹೇಳಿದರು. ಇದನ್ನು ಕೇಳಿ ಹನುಮಂತ ಶಾಕ್ ಆದರು.
ಇದನ್ನೂ ಓದಿ: ಬಿಗ್ ಬಾಸ್ನಿಂದ ಭವ್ಯಾಗೆ ಸಿಕ್ಕಿದೆ ಕಡಿಮೆ ಪೇಮೆಂಟ್? ಅವರ ಮಾತಿನ ಅರ್ಥವೇನು?
‘ಅನುಪಮಾ ಉಗುರಿನ ವಿಚಾರ ಕೇಳಿ ಹನುಮಂತ ಶಾಕ್ ಆಗಿದ್ದಾರೆ. ಅವರನ್ನು ಮಾತನಾಡಿಸೋಣ’ ಎಂದು ಅನುಪಮಾ ಹೇಳಿದರು. ‘ಏನನ್ನಿಸುತ್ತಿದೆ ಹನುಮಂತು ಅವರೇ’ ಎಂದು ಅನುಪಮಾ ಕೇಳಿದರು. ‘ಅದು ಉಗುರಷ್ಟೇ. ನಾನು ಬಿಟ್ಟರೂ ಬರುತ್ತದೆ. ಕೆರೆದುಕೊಳ್ಳೋಕೆ ಒಂದೇ ಒಂದು ಉಗುರು ಬಿಟ್ಟುಕೊಂಡಿದ್ದೇನೆ’ ಎಂದರು. ಈ ಮೂಲಕ ಎಲ್ಲರ ಬಾಯಿಯನ್ನು ಮುಚ್ಚಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.