‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಫಿನಾಲೆಗೆ ಕ್ಷಣಗಣನೆ ಆರಂಭ ಆಗಿದೆ. ಇಂದು (ಜನವರಿ 27) ಹಾಗೂ ನಾಳೆ (ಜನವರಿ 28) ರಾತ್ರಿ ಅದ್ದೂರಿಯಾಗಿ ಫಿನಾಲೆ ನಡೆಯಲಿದೆ. ಇದಕ್ಕೆ ಬೆಳಿಗ್ಗಿನಿಂದಲೇ ಶೂಟ್ ನಡೆಯಲಿದೆ. ಕೊನೆಯ ಭಾಗದ ಶೂಟ್ಗಳನ್ನು ಭಾನುವಾರ ನಡೆಸುವ ಸಾಧ್ಯತೆ ಇದೆ ಎಂದು ವರದಿ ಆಗಿದೆ. ಈ ಬಾರಿಯ ಸೀಸನ್ ಸಾಕಷ್ಟು ಟಿಆರ್ಪಿ ತಂದುಕೊಂಟ್ಟಿದೆ. ಹೀಗಾಗಿ, ಗ್ರ್ಯಾಂಡ್ ಆಗಿ ಕಾರ್ಯಕ್ರಮ ನಡೆಸಿಕೊಡಲು ವಾಹಿನಿಯವರು ಮುಂದಾಗಿದ್ದಾರೆ.
ಸಾಮಾನ್ಯವಾಗಿ ಬಿಗ್ ಬಾಸ್ ಫಿನಾಲೆ ಸಂಜೆ ಆರು ಗಂಟೆಗೆ ಆರಂಭ ಆಗುತ್ತಿತ್ತು. ಆದರೆ, ಈ ಬಾರಿ ವಾಹಿನಿಯವರು ನಿರ್ಧಾರ ಬದಲಿಸಿದ್ದಾರೆ. ರಾತ್ರಿ 7:30ಕ್ಕೆ ಫಿನಾಲೆ ಆರಂಭ ಆಗಲಿದೆ. ವಾಹಿನಿಯವರ ಕಡೆಯಿಂದ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ.
ಪ್ರತಿ ಬಾರಿ ಐದು ಮಂದಿ ಮಾತ್ರ ಫಿನಾಲೆಯಲ್ಲಿ ಇರುತ್ತಿದ್ದರು. ಆದರೆ, ಈ ಬಾರಿ ಹಾಗಾಗಿಲ್ಲ. ಆರು ಮಂದಿ ಫಿನಾಲೆಯಲ್ಲಿ ಇದ್ದಾರೆ. ಈ ರೀತಿ ಆಗುತ್ತಿರುವುದು ಇದೇ ಮೊದಲು. ಕೆಲವು ವರದಿಗಳ ಪ್ರಕಾರ ಇಂದು ನಾಲ್ಕು ಮಂದಿಯನ್ನು ಹೊರಕ್ಕೆ ಕಳುಹಿಸಿ, ಕೊನೆಯಲ್ಲಿ ಇಬ್ಬರನ್ನು ಫಿನಾಲೆಗೆ ಕಳುಹಿಸುವ ಆಲೋಚನೆ ವಾಹಿನಿಗೆ ಇದೆ ಎನ್ನಲಾಗುತ್ತಿದೆ. ಮೂವರನ್ನು ಇಂದು ಹೊರಕ್ಕೆ ಕಳುಹಿಸಿ, ಉಳಿದ ಮೂವರನ್ನು ಹಾಗೆಯೇ ಉಳಿಸಿಕೊಳ್ಳುವ ಸಾಧ್ಯತೆಯೂ ಇದೆ.
ಈ ಸೀಸನ್ನ ಕಿಚ್ಚ ಸುದೀಪ್ ಅವರು ಎಂದಿನ ಗತ್ತಿನಲ್ಲಿ ನಡೆಸಿಕೊಟ್ಟಿದ್ದಾರೆ. ಈ ಕಾರಣಕ್ಕೆ ಅವರಿಗೆ ಗ್ರ್ಯಾಂಡ್ ಎಂಟ್ರಿ ಇರಲಿದೆ. ಎಲಿಮಿನೇಟ್ ಆದ ಸ್ಪರ್ಧಿಗಳ ಜೊತೆ ಸುದೀಪ್ ಅವರು ಒಂದಷ್ಟು ಹೊತ್ತು ಮಾತುಕತೆ ನಡೆಸಲಿದ್ದಾರೆ. ಅದ್ದೂರಿ ವೇದಿಕೆಯ ಮೇಲೆ ಮಾಜಿ ಸ್ಪರ್ಧಿಗಳು ಡ್ಯಾನ್ಸ್ ಮಾಡಲಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಾಣಲಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬಂತು ಪ್ರತಾಪ್ನ ಡ್ರೋನ್; ಅಂದು ಚುಚ್ಚುಮಾತು, ಇಂದು ಮೆಚ್ಚುಗೆ ಮಾತು
ಜನವರಿ 28ರಂದು ಕಪ್ ಎತ್ತೋದು ಯಾರು ಎನ್ನುವ ವಿಚಾರ ಗೊತ್ತಾಗಲಿದೆ. ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಮಧ್ಯೆ ಸದ್ಯ ಫೈಟ್ ನಡೆಯುತ್ತಿದೆ. ಇಂದು ಮಧ್ಯಾಹ್ನ 2 ಗಂಟೆಗೆ ವೋಟಿಂಗ್ ಲೈನ್ ಬಂದ್ ಆಗಲಿದೆ. ಈ ಬಾರಿ ಕಪ್ ಗೆದ್ದು 50 ಲಕ್ಷ ರೂಪಾಯಿ ತೆಗೆದುಕೊಂಡು ಹೋಗುವವರು ಯಾರು ಎನ್ನುವ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:06 am, Sat, 27 January 24