ಬಿಗ್ ಬಾಸ್ನಲ್ಲಿ ಚೈತ್ರಾ ಹಾಗೂ ಶಿಶಿರ್ ಮಧ್ಯೆ ದೊಡ್ಡ ವಾಕ್ ಸಮರ ನಡೆದಿದೆ. ಅದಕ್ಕೆ ಕಾರಣ ಆಗಿರೋದು ಚೈತ್ರಾ ಬಳಕೆ ಮಾಡಿದ ಪದ. ಶಿಶಿರ್ ಜೊಲ್ಲ, ಹೆಣ್ಣುಮಕ್ಕಳ ಹಿಂದೆ ತಿರುಗುತ್ತಾ ಇರುತ್ತಾನೆ ಎಂಬ ಪದವನ್ನು ಚೈತ್ರಾ ಬಳಕೆ ಮಾಡಿದ್ದಾಗಿ ತ್ರಿವಿಕ್ರಂ ಹೇಳಿದ್ದಾರೆ. ಈ ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ಆಗಿವೆ. ಚೈತ್ರಾ, ತ್ರಿವಿಕ್ರಂ ಹಾಗೂ ಶಿಶಿರ್ ಮಧ್ಯೆ ಈ ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.
ಚೈತ್ರಾ ಅವರು ಮಾತಿನ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆದರೆ, ಕೆಲವೊಮ್ಮೆ ಅವರು ಆಡುವ ಮಾತುಗಳು ಮಿತಿ ಮೀರುತ್ತವೆ. ಇದರಿಂದ ಅನೇಕರಿಗೆ ಬೇಸರ ಆಗಿದ್ದು ಇದೆ. ಈ ವಿಚಾರದಲ್ಲಿ ಚೈತ್ರಾ ಹಲವು ಬಾರಿ ಎಡವಿದ್ದಾರೆ. ಈಗ ಚೈತ್ರಾ ಅವರು ತಾವು ಆ ಪದ ಬಳಕೆ ಮಾಡಿಲ್ಲ ಎಂದು ಹೇಳಿದರೆ, ತ್ರಿವಿಕ್ರಂ ಅವರು ಚೈತ್ರಾ ಆ ಪದ ಬಳಕೆ ಮಾಡಿದ್ದಾರೆ ಎಂದು ವಾದಿಸುತ್ತಿದ್ದಾರೆ.
ಚೈತ್ರಾ ಹಾಗೂ ತ್ರಿವಿಕ್ರಂ ಮಧ್ಯೆ ಜಗಳ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ತ್ರಿವಿಕ್ರಂ ಅವರು ಬಾಯ್ತಪ್ಪಿ ಚೈತ್ರಾ ಅವರು ಶಿಶಿರ್ ವಿರುದ್ಧ ಈ ರೀತಿ ಹೇಳಿದ್ದರು ಎಂದು ಹೇಳಿಕೆ ಕೊಟ್ಟರು. ಅಲ್ಲಿಂದ ಚರ್ಚೆಗಳು ಆರಂಭ ಆದವು. ಶಿಶಿರ್ ಅವರಿಗೆ ಈ ವಿಚಾರ ಸಾಕಷ್ಟು ಬೇಸರ ಮೂಡಿಸಿತು. ‘ನಾನು ಆ ಪದ ಬಳಕೆ ಮಾಡಿಲ್ಲ’ ಎಂದು ಚೈತ್ರಾ ಹೇಳಿದರೆ, ತ್ರಿವಿಕ್ರಂ ಅವರು ‘ನೀವು ಈ ಪದ ಬಳಕೆ ಮಾಡಿದ್ದೀರಿ’ ಎಂದು ಒತ್ತಿ ಹೇಳಿದರು.
ಇದನ್ನೂ ಓದಿ: ‘ತಲೆ ಸುತ್ತಿ ಬಿದ್ದು ಆಗಾಗ ಹೊರಗೆ ಹೋಗ್ತೀರಿ’: ಚೈತ್ರಾಗೆ ತಿವಿದ ಭವ್ಯಾ
‘ನಾನು ಆ ಶಬ್ದ (ಜೊಲ್ಲು) ಬಳಕೆ ಮಾಡಿದ್ದರೆ ನನಗೆ ನೀವು ಕಾಲಿನಲ್ಲಿ ಹಾಕಿಕೊಂಡಿದ್ದರಿಂದ ಹೊಡೆಯಿರಿ’ ಎಂದು ಶಿಶಿರ್ಗೆ ಚಾಲೆಂಜ್ ಮಾಡಿದರು ಚೈತ್ರಾ. ಆದರೆ, ಈ ಪದವನ್ನು ಅವರು ನಿಜಕ್ಕೂ ಹೇಳಿದ್ದಾರಾ ಅಥವಾ ಇಲ್ಲವಾ ಎಂಬ ಪ್ರಶ್ನೆಗೆ ಉತ್ತರ ಸಿಗೋದು ಕಷ್ಟ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:28 am, Fri, 6 December 24