ಹಲವು ಹಿಂದಿ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದ ಮಧುರಾ ನಾಯ್ಕ್ ಅವರು ಈಗ ನೋವಿನಲ್ಲಿದ್ದಾರೆ. ಸದ್ಯ ನಡೆಯುತ್ತಿರುವ ಇಸ್ರೇಲ್ (Israel) ಯುದ್ಧದಲ್ಲಿ ಅವರು ಕುಟುಂಬದವರನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ಮಕ್ಕಳ ಎದುರೇ ತಂದೆ-ತಾಯಿಯನ್ನು ಹತ್ಯೆ ಮಾಡಲಾಯಿತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಮಧುರಾ. ಅಭಿಮಾನಿಗಳು ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.
‘ನಾನು ಮಧುರಾ ನಾಯ್ಕ್. ನಾನು ಯಹೂದಿ ಧರ್ಮಕ್ಕೆ ಸೇರಿದವಳು. ಭಾರತದಲ್ಲಿ ನಮ್ಮ ಸಂಖ್ಯೆ 3000 ಇರಬಹುದು ಅಷ್ಟೇ. ಅಕ್ಟೋಬರ್ 7ರಂದು ನಮ್ಮ ಕುಟುಂಬದವರನ್ನು ಕಳೆದುಕೊಂಡೆವು. ನನ್ನ ಕುಟುಂಬದ ಒಡಯಾ ಹಾಗೂ ಅವರ ಪತಿಯನ್ನು ಹತ್ಯೆ ಮಾಡಲಾಗಿದೆ. ಅವರ ಮಕ್ಕಳ ಎದುರೇ ಕೊಲೆ ಮಾಡಲಾಗಿದೆ. ಈ ನೋವನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ. ಇಡೀ ಇಸ್ರೇಲ್ ದುಃಖದಲ್ಲಿದೆ. ಹಮಾಸರು ಇಸ್ರೇಲ್ನ ಮಕ್ಕಳು, ಮಹಿಳೆಯರನ್ನು, ಅಲ್ಲಿನ ರಸ್ತೆ ಬೀದಿಗಳನ್ನು ಸುಡುತ್ತಿದ್ದಾರೆ. ದುರ್ಬಲರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
‘ನಾನು ನನ್ನ ಕುಟುಂಬದ ಫೋಟೋ ಪೋಸ್ಟ್ ಮಾಡಿದೆ. ನಾನು ಯಹೂದಿ ಎನ್ನುವ ಕಾರಣಕ್ಕೆ ಅವಮಾನ ಮಾಡಲಾಯಿತು. ನನ್ನ ಭಾವನೆಗಳನ್ನು ನಾನು ವ್ಯಕ್ತಪಡಿಸಬೇಕಿದೆ. ನಾನು ಹಿಂಸೆಯನ್ನು ಬೆಂಬಲಿಸುವುದಿಲ್ಲ. ನನಗೆ ಅರಬ್ ಹಾಗೂ ಯಹೂದಿಗಳಲ್ಲಿ ಗೆಳೆಯರಿದ್ದಾರೆ. ಇಲ್ಲಿ ಸಾಯುತ್ತಿರುವವರು ಮುಗ್ಧರು’ ಎಂದಿದ್ದಾರೆ ಮಧುರಾ.
ಇದನ್ನೂ ಓದಿ: ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಮುಂದಾದ ಭಾರತ ಸರ್ಕಾರ:‘ಆಪರೇಷನ್ ಅಜಯ್’ ಘೋಷಣೆ
ಮಧುರಾ ಅವರು ಮಾಡೆಲ್. 2007ರಿಂದ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಕಹೇ ನಾ ಕಹೇ’ ಹೆಸರಿನ ಹಿಂದಿ ಧಾರಾವಾಹಿ ಮೂಲಕ ಅವರು ವೃತ್ತಿ ಬದುಕು ಆರಂಭಿಸಿದರು. ಹಿಂದಿ ಸಿನಿಮಾಗಳಲ್ಲೂ ಅವರು ನಟಿಸಿ ಫೇಮಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ