
ನಟ ಜಗ್ಗೇಶ್ ಅವರದ್ದು ವಿಶೇಷ ವ್ಯಕ್ತಿತ್ವ. ಅವರಿಗೆ ಯಾರಾದರೂ ಇಷ್ಟ ಆದರೆ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಅವರ ಬಗ್ಗೆ ವೇದಿಕೆ ಮೇಲೆ ಹೊಗಳುತ್ತಾರೆ. ಅನೇಕ ವೇದಿಕೆಗಳ ಮೇಲೆ ಅವರು ಈ ರೀತಿ ಮಾಡಿದ ಉದಾಹರಣೆ ಇದೆ. ಈ ಮೊದಲು ಗಿಲ್ಲಿ ನಟನ ಬಗ್ಗೆ ಜಗ್ಗೇಶ್ ಹೇಳಿದ ಮಾತೊಂದು ಈಗ ವೈರಲ್ ಆಗುತ್ತಿದೆ. ಅವರು ಹೇಳಿದ ಮಾತು ನಿಜವಾಗಿದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
ಜಗ್ಗೇಶ್ ಅವರು ರಾಯರ ಭಕ್ತರು. ಕೆಲವರಿಗೆ ಒಳ್ಳೆಯದಾಗಲಿ ಎಂದು ಅವರು ಪ್ರಿತಿಯಿಂದ ಹರಸುತ್ತಾರೆ.ಆ ವ್ಯಕ್ತಿ ಜಗ್ಗೇಶ್ಗೆ ಇಷ್ಟ ಆಗಬೇಕು. ಆಗ ಈ ರೀತಿಯ ಹಾರೈಕೆ ಸಿಗುತ್ತದೆ. ಈ ರೀತಿ ಆಶೀರ್ವಾದ ಪಡೆದ ಅನೇಕರಿಗೆ ಒಳ್ಳೆಯದಾಗಿದೆ. ಅವರಿಗೆ ಗಿಲ್ಲಿ ಕಾಮಿಡಿ ಹಾಗೂ ಪ್ರಾಪರ್ಟಿ ಕಾಮಿಡಿಗಳು ಇಷ್ಟ ಆಗುತ್ತಿದ್ದವು. ಈ ಕಾರಣದಿಂದಲೇ ಅವರು ಮನಸಾರೆ ಹಾರೈಸಿದ್ದರು.
ಇದನ್ನೂ ಓದಿ: ಗಿಲ್ಲಿ ಗೆಲ್ಲೋ ಸೂಚನೆ ಕೊಟ್ರಾ ಬಿಗ್ ಬಾಸ್? ಅಭಿಮಾನಿಗಳ ಮುಂದೆಯೇ ಘೋಷಣೆ
‘ಕಾಮಿಡಿ ಕಿಲಾಡಿಗಳು’ ವೇದಿಕೆಗೆ ಜಗ್ಗೇಶ್ ಅವರು ಜಡ್ಜ್ ಸ್ಥಾನದಲ್ಲಿದ್ದರು. ವೇದಿಕೆ ಮೇಲೆ ಗಿಲ್ಲಿ ಕೂಡ ಇದ್ದರು. ಆ ಸಂದರ್ಭದಲ್ಲಿ ಮಾತನಾಡಿದ್ದ ಜಗ್ಗೇಶ್ ಅವರು, ‘ಮುಂದಿನ ವರ್ಷ ಇಷ್ಟು ಹೊತ್ತಿಗೆ ಚತ್ರಿ ಹಿಡಿಯೋಕೆ ಒಬ್ಬರನ್ನು ಇಟ್ಟುಕೊಂಡು, ಬಾಡಿಗಾರ್ಡ್ನ ಹಾಕಿಕೊಂಡು ಓಡಾಡುವ ಮಟ್ಟಕ್ಕೆ ಈತ ಬೆಳೆಯುತ್ತಾನೆ’ ಎಂದು ಗಿಲ್ಲಿ ಬಗ್ಗೆ ಜಗ್ಗೇಶ್ ಹೇಳಿದ್ದರು. ಅದು ಈಗ ನಿಜವಾಗಿದೆ.
ಗಿಲ್ಲಿ ನಟ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಬಿಗ್ ಬಾಸ್ಗೆ ಸೇರುವಾಗ 1 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 13 ಲಕ್ಷಕ್ಕೆ ಏರಿಕೆ ಆಗಿದೆ. ಈ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ. ಈಗ ಅವರು ಹೊರಗೆ ಕಾಣಿಸಿಕೊಂಡರೆ ಬಾಡಿಗಾರ್ಡ್ನ ಇಟ್ಟುಕೊಳ್ಳಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಆ ಮಟ್ಟದ ಜನಪ್ರಿಯತೆಯನ್ನು ಅವರು ಪಡೆದಿದ್ದಾರೆ. ಶಿವರಾಜ್ಕುಮಾರ್ ಕೂಡ ಗಿಲ್ಲಿ ನಟ ಅವರನ್ನು ಮೆಚ್ಚಿಕೊಂಡಿದ್ದರು. ಗಿಲ್ಲಿ ಬಗ್ಗೆ ಅವರು ಖುಷಿ ವ್ಯಕ್ತಪಡಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.