ಬಾಯ್​​ಫ್ರೆಂಡ್ ಪರಿಚಯಿಸಿದ ನಟಿ ಅಮೂಲ್ಯ ಗೌಡ; ಹೊಸ ವೆಂಚರ್ ಶುರು

'ಕಮಲಿ' ಧಾರಾವಾಹಿ ಖ್ಯಾತಿಯ ನಟಿ ಅಮೂಲ್ಯ ಗೌಡ ತಮ್ಮ ಬಾಯ್‌ಫ್ರೆಂಡ್ ನಿರಂಜನ್ ಅವರನ್ನು ಅಧಿಕೃತವಾಗಿ ಪರಿಚಯಿಸಿದ್ದಾರೆ. ಹಲವು ವರ್ಷಗಳ ಪ್ರೀತಿಯ ವದಂತಿಗೆ ಬ್ರೇಕ್ ಹಾಕಿರುವ ಈ ಜೋಡಿ ಪ್ರೀತಿ ವಿಷಯ ಒಪ್ಪಿಕೊಂಡಿದ್ದಾರೆ. ಒಟ್ಟಿಗೆ ಹೊಸ ಯೂಟ್ಯೂಬ್ ಚಾನೆಲ್ ಆರಂಭಿಸುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.

ಬಾಯ್​​ಫ್ರೆಂಡ್ ಪರಿಚಯಿಸಿದ ನಟಿ ಅಮೂಲ್ಯ ಗೌಡ; ಹೊಸ ವೆಂಚರ್ ಶುರು
ಅಮೂಲ್ಯ-ನಿರಂಜನ್

Updated on: Jul 31, 2026 | 8:48 AM

ಮುಖ್ಯಾಂಶಗಳು

  • ಪ್ರೀತಿಯ ವಿಷಯ ಒಪ್ಪಿಕೊಂಡ 'ಕಮಲಿ' ಜೋಡಿ ಅಮೂಲ್ಯ-ನಿರಂಜನ್
  • ಅಡ್ಡಗೋಡೆ ಮೇಲಿನ ದೀಪ ತೆಗೆದ ನಟಿ; ಹೊಸ ಯೂಟ್ಯೂಬ್ ವೆಂಚರ್ ಆರಂಭ
  • ಸೀರಿಯಲ್ ಸೆಟ್‌ನಿಂದ ರಿಯಲ್ ಲೈಫ್‌ವರೆಗೆ; ಶೀಘ್ರದಲ್ಲೇ ವಿವಾಹ?

ನಟಿ ಅಮೂಲ್ಯ ಗೌಡ (Amulya Gowda) ಸಾಕಷ್ಟು ವರ್ಷಗಳಿಂದ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಹೊಸ ಹೊಸ ಆಫರ್​ಗಳು ಬರುತ್ತಿವೆ. ಸದ್ಯ ಅವರು ಉದಯ ಟಿವಿಯಲ್ಲಿ ‘ಮಹಾಲಕ್ಷ್ಮಿ ಮದುವೆ’  ಹೆಸರಿನ ಧಾರಾವಾಹಿ ಮಾಡುತ್ತಿದ್ದಾರೆ. ಈಗ ಅವರು ಅಭಿಮಾನಿಗಳಿಗೆ ಒಂದು ಗುಡ್​ ನ್ಯೂಸ್ ನೀಡಿದ್ದಾರೆ. ಹಲವು ವರ್ಷಗಳಿಂದ ಹರಿದಾಡುತ್ತಿದ್ದ ವದಂತಿಯನ್ನು ಅಮೂಲ್ಯ ನಿಜ ಎಂದು ಒಪ್ಪಿಕೊಂಡಿದ್ದಾರೆ.

2018ರಿಂದ 2022ರವರೆಗೆ ಜೀ ಕನ್ನಡದಲ್ಲಿ ಪ್ರಸಾರ ಕಂಡ ‘ಕಮಲಿ’ ಧಾರಾವಾಹಿಯಲ್ಲಿ ಅಮೂಲ್ಯ ನಟಿಸಿದ್ದರು. ಇವರಿಗೆ ಜೊತೆಯಾಗಿ ನಿರಂಜನ್ ಬಣ್ಣ ಹಚ್ಚಿದ್ದರು. ಆ ಸಮಯದಲ್ಲೇ ಇವರು ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಇದನ್ನು ಅವರು ಎಂದಿಗೂ ನೇರವಾಗಿ ಒಪ್ಪಿಕೊಂಡಿರಲಿಲ್ಲ. ಈಗ ಅದಕ್ಕೆ ಸಮಯ ಬಂದಿದೆ. ಹೊಸ ಯೂಟ್ಯೂಬ್ ಚಾನೆಲ್ ಮಾಡಿರೋ ಅಮೂಲ್ಯ ಗೌಡ ಅವರು, ಪ್ರೀತಿ ವಿಷಯವನ್ನು ಅಧಿಕೃತ ಮಾಡಿದ್ದಾರೆ.

ಇದನ್ನೂ ಓದಿ: ‘ಸನ್‌ ಉದಯ’ ಟಿವಿಯಲ್ಲಿ ಅಮೂಲ್ಯ ಗೌಡ ಹೊಸ ಧಾರಾವಾಹಿ ‘ಮಹಾಲಕ್ಷ್ಮೀ ಮದುವೆ’

ಈ ಮೊದಲು ‘ನಿರಂಜನ್ ಅವರೇನಾ ನಿಮ್ಮ ಬಾಯ್​ಫ್ರೆಂಡ್’ ಎಂದು ಕೇಳಿದಾಗ ಅಮೂಲ್ಯ ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದರು. ‘ನಾನು ಈಗಲೇ ಏನೂ ಹೇಳೋಲ್ಲ’ ಎಂದು ಹೇಳಿ ಜಾರಿಕೊಳ್ಳುತ್ತಿದ್ದರು. ಅವರು ಪ್ರೀತಿ ವಿಷಯವನ್ನು ಒಪ್ಪಿಕೊಂಡೂ ಇರಲಿಲ್ಲ, ನಿರಾಕರಿಸಿಯೂ ಇರಲಿಲ್ಲ. ಈಗ ಪ್ರೀತಿ ವಿಷಯವನ್ನು ಅಧಿಕೃತಮಾಡಿದ್ದಾರೆ.

YouTube video player

ಬಾಯ್​​ಫ್ರೆಂಡ್ ರಿವೀಲ್ ವಿಡಿಯೋ ಹಂಚಿಕೊಂಡಿರೋ ಅಮೂಲ್ಯ ಗೌಡ, ಅದರಲ್ಲಿ ನಿರಂಜನ್ ಅವರನ್ನೂ ಕರೆತಂದಿದ್ದಾರೆ. ಇಬ್ಬರೂ ಮೊದಲು ಭೇಟಿ ಆಗಿದ್ದು ಎಲ್ಲಿ, ಯಾವ ಗುಣ ಇಷ್ಟ ಆಯಿತು ಎಂಬಿತ್ಯಾದಿ ವಿಷಯಗಳನ್ನು ಹೇಳಿಕೊಂಡಿದ್ದಾರೆ. ಆ ಬಳಿಕ ಇಬ್ಬರೂ ಪ್ರೀತಿ ವಿಷಯ ಒಪ್ಪಿಕೊಂಡಿದ್ದಾರೆ. ಇಬ್ಬರೂ ಒಟ್ಟಾಗಿ ಯೂಟ್ಯೂಬ್ ಚಾನೆಲ್ ನಡೆಸೋದಾಗಿ ಹೇಳಿದ್ದಾರೆ. ಈ ಮೂಲಕ ಶೀಘ್ರವೇ ಇವರು ಮದುವೆ ಆಗೋ ಸೂಚನೆ ನೀಡಿದ್ದಾರೆ. ನಿರಂಜನ್ ಅವರು ಸ್ಟಾರ್ ಸುವರ್ಣದಲ್ಲಿ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us