‘ನನ್ನ ಮಗ ನಿಧನ ಹೊಂದಿಲ್ಲ, ಆರೋಗ್ಯ ಸ್ಥಿತಿ ತುಂಬಾನೇ ಗಂಭೀರವಾಗಿದೆ’; ಮಂಡ್ಯ ರವಿ ತಂದೆಯ ಸ್ಪಷ್ಟನೆ

| Updated By: ರಾಜೇಶ್ ದುಗ್ಗುಮನೆ

Updated on: Sep 14, 2022 | 7:48 PM

ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಈಗ ಅವರನ್ನು ಮಂಡ್ಯಕ್ಕೆ ಕರೆದೊಯ್ಯಲಾಗುತ್ತಿದೆ.

‘ನನ್ನ ಮಗ ನಿಧನ ಹೊಂದಿಲ್ಲ, ಆರೋಗ್ಯ ಸ್ಥಿತಿ ತುಂಬಾನೇ ಗಂಭೀರವಾಗಿದೆ’; ಮಂಡ್ಯ ರವಿ ತಂದೆಯ ಸ್ಪಷ್ಟನೆ
ಮಂಡ್ಯ ರವಿ
Follow us on

‘ನನ್ನ ಮಗ ಸತ್ತಿಲ್ಲ. ಅವನ ಸ್ಥಿತಿ ತುಂಬಾನೇ ಗಂಭೀರವಾಗಿದೆ’ ಎಂದು ಮಂಡ್ಯ ರವಿ ತಂದೆ ಅವರು ಟಿವಿ9 ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ. ಮಂಡ್ಯ ರವಿ (Mandya Ravi) ಜಾಂಡೀಸ್​​ನಿಂದ ಬಳಲುತ್ತಿದ್ದಾರೆ. ಜೊತೆಗೆ ಕಿಡ್ನಿ ಸಮಸ್ಯೆ ಕಾಡುತ್ತಿದೆ. ಅವರ ಸ್ಥಿತಿ ಗಂಭೀರ ಆಗಿರುವ ಕಾರಣ ಬೆಂಗಳೂರಿನಿಂದ ಮಂಡ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ.

ಇದನ್ನೂ ಓದಿ: ಕೊನೆಗೂ ಈಡೇರಲಿಲ್ಲ ಪ್ರಾರ್ಥನೆ: 42ನೇ ವಯಸ್ಸಿಗೆ ಕಿರುತೆರೆ ನಟ ಮಂಡ್ಯ ರವಿ ನಿಧನ

ಮಂಡ್ಯ ರವಿ ಅವರಿಗೆ ಕಾಮಾಲೆ ರೋಗ ಇತ್ತು. ಇದರ ಜೊತೆಗೆ ಕಿಡ್ನಿ ಸಮಸ್ಯೆ ಕಾಡಿತ್ತು. ಈ ಕಾರಣಕ್ಕೆ ಅವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.

Published On - 4:59 pm, Wed, 14 September 22