ಮೂರು ತಿಂಗಳಲ್ಲಿ ಎಂ.ಡಿ. ಪಟ್ಟದಿಂದ ಕೆಳಗಿಳಿಯಲಿದ್ದಾಳೆ ಸಾನಿಯಾ; ಭುವಿ ಮುಂದಿನ ವ್ಯವಸ್ಥಾಪಕ ನಿರ್ದೇಶಕಿ

ಮೂರು ತಿಂಗಳಲ್ಲಿ ಎಂ.ಡಿ. ಪಟ್ಟದಿಂದ ಕೆಳಗಿಳಿಯಲಿದ್ದಾಳೆ ಸಾನಿಯಾ; ಭುವಿ ಮುಂದಿನ ವ್ಯವಸ್ಥಾಪಕ ನಿರ್ದೇಶಕಿ
ಸಾನಿಯಾ-ರಂಜನಿ

ಸಾನಿಯಾ ಮಾವ ಮನೆ ಬಿಟ್ಟು ಹೋಗಿ ತುಂಬಾ ಸಮಯವಾಗಿದೆ. ಈಗ ರತ್ನಮಾಲಾ ಕೋರಿಕೆ ಹಿನ್ನೆಲೆಯಲ್ಲಿ ಆತ ಮರಳಿ ಬಂದಿದ್ದಾನೆ. ರತ್ನಮಾಲಾ ಆತನ ಬಳಿ ಮಾತುಕತೆ ನಡೆಸಿದ್ದಾಳೆ. ಇದಾದ ಬೆನ್ನಲ್ಲೇ ಸಾನಿಯಾಳನ್ನು ಭೇಟಿ ಮಾಡಿದ ಆತ, ಮೂರು ತಿಂಗಳಲ್ಲಿ ನಿನ್ನ ಎಂ.ಡಿ. ಪಟ್ಟ ಹೋಗಲಿದೆ ಎಂದು ಎಚ್ಚರಿಕೆ ನೀಡಿದ್ದಾನೆ.

TV9kannada Web Team

| Edited By: Rajesh Duggumane

Nov 18, 2021 | 4:08 PM

‘ಕನ್ನಡತಿ’ ಧಾರಾವಾಹಿ (Kannadathi Serial) ನಿತ್ಯ ಒಂದೊಂದು ತಿರುವು ಪಡೆದುಕೊಂಡು ಸಾಗುತ್ತಿದೆ. ಎಲ್ಲರೂ ಅವರವರದೇ ಚಿಂತೆಯಲ್ಲಿ ಮುಳುಗಿದ್ದಾರೆ. ಭುವಿ ಯಾವಾಗ ತನ್ನ ಪ್ರಪೋಸ್​ ಒಪ್ಪಿಕೊಳ್ಳುತ್ತಾಳೆ ಎನ್ನುವ ಕುತೂಹಲ ಹರ್ಷನಿಗೆ ಇದೆ. ಹರ್ಷನ ಪ್ರಪೋಸ್​ ಒಪ್ಪಿಕೊಂಡರೆ ವರುಧಿನಿ ಬೇಸರ ಮಾಡಿಕೊಳ್ಳಬಹುದು ಎಂಬ ಆಲೋಚನೆ ಭುವಿಯದ್ದು. ಇವಿಷ್ಟು ಒಂದು ಕಡೆಯಾದರೆ, ಮಗ ಹರ್ಷನ ಮದುವೆ ತಯಾರಿಯಲ್ಲಿ ರತ್ನಮಾಲಾ ಬ್ಯುಸಿ ಆಗಿದ್ದಾಳೆ. ಆದರೆ, ಸಾನಿಯಾ ಚಿಂತೆಯೇ ಬೇರೆ. ಮಾಲಾ ಶಿಕ್ಷಣ ಸಂಸ್ಥೆಯ ಎಂ.ಡಿ. ಪಟ್ಟ ಕೊಟ್ಟರೂ ಸಾನಿಯಾ ಖುಷಿಯಾಗಿಲ್ಲ. ಹರ್ಷನ ಲವರ್​ ಯಾರು ಎಂಬುದನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿದ್ದಾಳೆ. ಈ ಮಧ್ಯೆ ಅವಳ ಎಂ.ಡಿ. ಪಟ್ಟ ಹೋಗುವ ಕಾಲ ಸಮೀಪವಾಗಿದೆ. ಈ ವಿಚಾರವನ್ನು ಅವಳ ಮಾವನೇ ಹೇಳಿದ್ದಾನೆ. ಈ ವಿಚಾರ ಕೇಳಿ ಸಾನಿಯಾಗೆ ಚಿಂತೆ ಹೆಚ್ಚಾಗಿದೆ.

ಸಾನಿಯಾ ಮಾವ ಮನೆ ಬಿಟ್ಟು ಹೋಗಿ ತುಂಬಾ ಸಮಯವಾಗಿದೆ. ಈಗ ರತ್ನಮಾಲಾ ಕೋರಿಕೆ ಹಿನ್ನೆಲೆಯಲ್ಲಿ ಆತ ಮರಳಿ ಬಂದಿದ್ದಾನೆ. ರತ್ನಮಾಲಾ ಆತನ ಬಳಿ ಮಾತುಕತೆ ನಡೆಸಿದ್ದಾಳೆ. ಇದಾದ ಬೆನ್ನಲ್ಲೇ ಸಾನಿಯಾಳನ್ನು ಭೇಟಿ ಮಾಡಿದ ಆತ, ಮೂರು ತಿಂಗಳಲ್ಲಿ ನಿನ್ನ ಎಂ.ಡಿ. ಪಟ್ಟ ಹೋಗಲಿದೆ ಎಂದು ಎಚ್ಚರಿಕೆ ನೀಡಿದ್ದಾನೆ. ಈ ವಿಚಾರ ಕೇಳಿ ಸಾನಿಯಾ ತುಂಬಾನೇ ಚಿಂತೆಗೆ ಒಳಗಾಗಿದ್ದಾಳೆ. ಮುಂದಿನ ಮೂರು ತಿಂಗಳಲ್ಲಿ ಹರ್ಷನ ಮದುವೆ ಆಗಲಿದೆ. ಹರ್ಷನ ಹೆಂಡತಿ ಮಾಲಾ ಶಿಕ್ಷಣ ಸಂಸ್ಥೆಯ ಎಂ.ಡಿ. ಆಗಲಿದ್ದಾಳೆ.

ಭುವಿಯನ್ನು ಹರ್ಷನಿಗೆ ಕೊಟ್ಟು ಮದುವೆ ಮಾಡಬೇಕು ಎನ್ನುವ ಆಲೋಚನೆ ರತ್ನಮಾಲಾ ಅವಳದ್ದು. ಹರ್ಷನಿಗೂ ಭುವಿ ಮೇಲೆ ಪ್ರೀತಿ ಮೂಡಿದೆ. ಈ ಕಾರಣಕ್ಕೆ ಆಕೆಗೆ ಹರ್ಷ ಪ್ರಪೋಸ್​ ಮಾಡಿದ್ದಾನೆ. ಅವಳು ಇದನ್ನು ಒಪ್ಪಿಕೊಂಡಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಹರ್ಷನ ಎಂಗೇಜ್​ಮೆಂಟ್​ ನಡೆಯಲಿದೆ. ಅದು ಭುವಿ ಜತೆಗೆ ಮಾಡಬೇಕು ಎನ್ನುವ ನಿರ್ಧಾರ ರತ್ನಮಾಲಾ ಅವಳದ್ದು.

ಈ ಎಲ್ಲಾ ಬೆಳವಣಿಗೆ ಮಧ್ಯೆ ಸಾನಿಯಾ ಎಂ.ಡಿ. ಪಟ್ಟ ಹೋಗುವ ಕಾಲ ಸಮೀಪಿಸಿದೆ. ಈ ಮೂಲಕ ಅವಳ ತಲೆಗೆ ಎಲ್ಲಾ ಜವಾಬ್ದಾರಿ ಬರಲಿದೆ. ಇದರಿಂದ ಸಾನಿಯಾ ಮೂಲೆಗುಂಪು ಆಗುವ ಅನುಮಾನ ಪಕ್ಕಾ ಎನ್ನುತ್ತಿದ್ದಾರೆ ವೀಕ್ಷಕರು.

ಇದನ್ನೂ ಓದಿ: ಹರ್ಷನ ಪ್ರಪೋಸ್​ಗೆ ಭುವಿ ಕಡೆಯಿಂದ ಬಂತು ಉತ್ತರ; ಬೇಸರಗೊಂಡ ‘ಕನ್ನಡತಿ’ ಹೀರೋ

Follow us on

Related Stories

Most Read Stories

Click on your DTH Provider to Add TV9 Kannada