ನಟ ಸೋನು ಸೂದ್ (Sonu Sood) ಅವರು ಅನೇಕರ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ. ಮೊದಲ ಲಾಕ್ಡೌನ್ನಿಂದ ಇಲ್ಲಿಯವರೆಗೆ ಅವರು ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ. ಸಹಾಯಕ್ಕಾಗಿ ಪ್ರತಿದಿನ ಅವರ ಬಳಿ ಅಪಾರ ಸಂಖ್ಯೆಯ ಜನರು ಮನವಿ ಮಾಡಿಕೊಳ್ಳುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಸೋನು ಸೂದ್ ಅವರ ಇಮೇಜ್ ಬದಲಾಗಿದೆ. ಈ ಮೊದಲು ಸಿನಿಮಾಗಳಲ್ಲಿ ಅವರು ವಿಲನ್ ಪಾತ್ರ ಮಾಡುತ್ತಿದ್ದರು. ಆದರೆ ಈಗ ಅವರು ಅಂಥ ಪಾತ್ರ ಮಾಡಿದರೆ ಜನರು ಒಪ್ಪುವುದಿಲ್ಲ. ಅಷ್ಟರಮಟ್ಟಿಗೆ ಅವರ ಮೇಲೆ ಜನರಿಗೆ ಗೌರವ ಭಾವನೆ ಮೂಡಿದೆ. ಆದರೆ ಅಂಥ ನಟನಿಗೆ ಕಾಮಿಡಿಯಲ್ ಕಪಿಲ್ ಶರ್ಮಾ (Kapil Sharma) ಅವರು ಲೇವಡಿ ಮಾಡಿದ್ದಾರೆ. ಈ ಘಟನೆಗೆ ಸಾಕ್ಷಿ ಆಗಿದ್ದು ‘ಕೌನ್ ಬನೇಗಾ ಕರೋಡ್ಪತಿ’ ಶೋ (Kaun Banega Crorepati). ಅಮಿತಾಭ್ ಬಚ್ಚನ್ (Amitabh Bachchan) ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ಸೋನು ಸೂದ್ ಮತ್ತು ಕಪಿಲ್ ಶರ್ಮಾ ಅವರು ಇತ್ತೀಚೆಗೆ ಅತಿಥಿಗಳಾಗಿ ಭಾಗವಹಿಸಿದ್ದರು.
ಕೆಲವೇ ತಿಂಗಳ ಹಿಂದೆ ಸೋನು ಸೂದ್ ಅವರ ಮನೆ ಮೇಲೆ ಐಟಿ ದಾಳಿ ಆಗಿದ್ದು ಗೊತ್ತೇ ಇದೆ. ಅದನ್ನೇ ಇಟ್ಟುಕೊಂಡು ಕಪಿಲ್ ಶರ್ಮಾ ಈಗ ಕಾಮಿಡಿ ಮಾಡಿದ್ದಾರೆ. ‘ಇವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಷ್ಟರಮೇಲೂ ಅವರು ಹಣ ಗಳಿಸಲು ಈ ಶೋಗೆ ಬಂದಿದ್ದಾರೆ’ ಎಂದರು ಕಪಿಲ್ ಶರ್ಮಾ. ಅದಕ್ಕೆ ನಗುವಿನಿಂದಲೇ ಪ್ರತಿಕ್ರಿಯಿಸಿದರು ಸೋನು ಸೂದ್.
ವೇದಿಕೆ ಮೇಲೆ ಕಪಿಲ್ ಶರ್ಮಾ ಮತ್ತು ಸೋನು ಸೂದ್ ಸ್ಕಿಟ್ ಮಾಡಬೇಕಿತ್ತು. ‘ನನ್ನ ಬಳಿ ಗಾಡಿ ಇದೆ, ಹಣ ಇದೆ, ಬ್ಯಾಂಕ್ ಬ್ಯಾಲೆನ್ಸ್ ಇದೆ. ನಿನ್ನ ಬಳಿ ಏನಿದೆ’ ಎಂದು ಸೋನು ಸೂದ್ ಅವರು ‘ದೀವಾರ್’ ಸಿನಿಮಾದ ಡೈಲಾಗ್ ಹೊಡೆದರು. ಅದಕ್ಕೆ ಉತ್ತರಿಸಿದ ಕಪಿಲ್ ಶರ್ಮಾ, ‘ನನ್ನ ಬಳಿ ಐಟಿ ಅಧಿಕಾರಿಗಳ ಫೋನ್ ನಂಬರ್ ಇದೆ, ಕೊಡಲೇ?’ ಎಂದು ಕುಟುಕಿದರು. ಕಪಿಲ್ ಶರ್ಮಾ ಅವರ ಯಾವ ಮಾತುಗಳನ್ನೂ ಕೂಡ ಸೋನು ಸೂದ್ ಗಂಭೀರವಾಗಿ ಪರಿಗಣಿಸಲಿಲ್ಲ. ಈ ಎಲ್ಲ ಮಾತುಗಳನ್ನು ಅವರು ತಮಾಷೆಗೆ ಹೇಳಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಹಾಗಾಗಿ ಅವರು ಜೋರಾಗಿ ನಕ್ಕು ಎಂಜಾಯ್ ಮಾಡಿದರು.
ಈ ಕಾರ್ಯಕ್ರಮದಲ್ಲಿ ಸೋನು ಮತ್ತು ಕಪಿಲ್ ಶರ್ಮಾ ಜೊತೆಯಾಗಿ 25 ಲಕ್ಷ ರೂ. ಗಳಿಸಿದರು. ಅದನ್ನು ‘ಸೂದ್ ಚಾರಿಟಿ ಫೌಂಡೇಶನ್’ಗೆ ನೀಡಲಾಯಿತು. ಆ ಮೂಲಕ ಜನರಿಗೆ ಸಹಾಯ ಮಾಡುವಲ್ಲಿ ಕಪಿಲ್ ಕೂಡ ನೆರವಾಗಿದ್ದಾರೆ.
ಇದನ್ನೂ ಓದಿ:
ಪದ್ಮಶ್ರೀ ಪ್ರಶಸ್ತಿ ಸಿಗದಿದ್ದಕ್ಕೆ ಸೋನು ಸೂದ್ಗೆ ಬೇಸರ? ನಟನ ಪ್ರತಿಕ್ರಿಯೆ ಏನು?
KBC: 25 ಲಕ್ಷ ರೂಪಾಯಿ ಪ್ರಶ್ನೆಗೆ ಸ್ಟಾರ್ ನಟರೇ ಹೇಳಿಲ್ಲ ಉತ್ತರ; ನೀವು ಉತ್ತರಿಸಬಲ್ಲಿರಾ?