ನಟಿ ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸದ್ಯ 8 ಜನರ ಪೈಕಿ ಒಬ್ಬರಾಗಿದ್ದಾರೆ. ಅವರು ಜನರ ವೋಟ್ ಪಡೆದು ಸೇವ್ ಆಗುತ್ತಿದ್ದಾರೆ. ಇಷ್ಟು ವಾರಗಳ ಕಾಲ ಅವರು ಆಡುತ್ತಾ ಬಂದಿದ್ದಾರೆ. ಅವರು ಮೂರು ಬಾರಿ ಕ್ಯಾಪ್ಟನ್ ಆಗಿದ್ದಾರೆ. ಟಾಪ್ ಐದಕ್ಕೆ ಏರೋಕೆ ಅವರಿಗೆ ಇನ್ನು ಉಳಿದಿರೋದು ಕೆಲವೇ ಮೆಟ್ಟಿಲು. ಭವ್ಯಾ ಗೌಡ ಅವರು ಕೆಲವೊಮ್ಮೆ ದುರಹಂಕಾರದಿಂದ ಮೆರೆದಿದ್ದು ಇದೆ. ಆ ಸಂದರ್ಭದಲ್ಲಿ ಅವರು ಏಟುಗಳನ್ನು ತಿಂದಿದ್ದೇ ಹೆಚ್ಚು ಎಂಬುದನ್ನು ಅನೇಕರು ಒಪ್ಪಿದ್ದಾರೆ. ಅನೇಕರು ಇದನ್ನು ‘ಕರ್ಮ’ ಎಂದು ಕರೆದಿದ್ದಾರೆ.
ಭವ್ಯಾ ಗೌಡ ಅವರು ಮೊದಲಿನಿಂದ ಗಮನ ಸೆಳೆಯುತ್ತಾ ಬಂದರು. ಅವರು ತ್ರಿವಿಕ್ರಂ ಸಹಾಯ ಪಡೆಯುತ್ತಾರೆ ಎಂದು ಅನೇಕರು ಆರೋಪಿಸಿದ್ದು ಇದೆ. ಆದರೆ, ಇದನ್ನು ಅವರು ಒಪ್ಪಿಕೊಳ್ಳೋಕೆ ರೆಡಿ ಇಲ್ಲ. ನಿಜ ಹೇಳಬೇಕು ಎಂದರೆ ಅವರು ಅನೇಕ ಸಂದರ್ಭದಲ್ಲಿ ತ್ರಿವಿಕ್ರಂ ಅವರನ್ನು ಕೇಳಿಯೇ ನಿರ್ಧಾರ ತೆಗೆದುಕೊಂಡಿದ್ದು ಇದೆ. ಇದರ ಜೊತೆ ಅವರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ.
ಈ ವಾರ ಫಿನಾಲೆ ಟಿಕೆಟ್ ರೇಸ್ನಲ್ಲಿ ಇದ್ದೇನೆ ಎಂದು ಮೆರೆಯುತ್ತಿದ್ದರು. ಆದರೆ, ಈ ಮೆರೆಯುವಿಕೆಗೆ ಈಗ ಬ್ರೇಕ್ ಬಿದ್ದಿದೆ. ಅವರಿಗೆ ಫಿನಾಲೆ ಟಿಕೆಟ್ ಪಡೆಯೋಕೆ ಸಾಧ್ಯವಾಗಿಲ್ಲ. ಅತ್ತ ಅವರು ಹನುಮಂತ ಅವರ ಮೇಲೆ ಹಲ್ಲೆ ಮಾಡಿ ಈಗ ಜೈಲು ಸೇರಿದ್ದಾರೆ. ಪ್ರತಿ ಸ್ಪರ್ಧಿಗೆ ಹೊಡೆದ ಆರೋಪದ ಮೇಲೆ ಅವರು ಜೈಲು ಸೇರಿದ್ದಾರೆ. ನಾನೇ ಎಂದು ಮೆರೆಯುತ್ತಿದ್ದ ಅವರಿಗೆ ಹೊಡೆತ ಕೊಟ್ಟಂತೆ ಆಗಿದೆ.
ಈ ಮೊದಲು ಮೂರನೇ ಬಾರಿಗೆ ಕ್ಯಾಪ್ಟನ್ ಆದೆ ಎಂದು ಭವ್ಯಾ ಬೀಗಿದ್ದರು. ಆದರೆ, ಅಲ್ಲಿ ಅವರು ಮೋಸ ಮಾಡಿದ್ದರು. ಆ ವಾರ ಕೂಡ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು. ಭವ್ಯಾ ಗೌಡ ಅವರು ಇನ್ನಾದರೂ ತಿದ್ದಿಕೊಂಡು ನಡೆಯಬೇಕಿದೆ.
ಇದನ್ನೂ ಓದಿ: ಭವ್ಯಾ ಗೌಡ ಬಗ್ಗೆ ತ್ರಿವಿಕ್ರಮ್ಗೆ ಜ್ಞಾನೋದಯ; ಮುಖವಾಡ ಕಳಚಿದ ಮೇಲೆ ಬಂತು ನಿಜವಾದ ಮಾತು
ಭವ್ಯಾ ಗೌಡ ಅವರು ಉತ್ತಮ ಆಟಗಾರ್ತಿ. ಮಹಿಳಾ ಸ್ಪರ್ಧಿಯಾದರೂ ಪುರುಷ ಸ್ಪರ್ಧಿಗಳಿಗೆ ಕಾಂಪಿಟೇಷನ್ ಕೊಡವ ರೀತಿಯಲ್ಲಿ ಆಡುತ್ತಾರೆ. ಆದರೆ, ಅವರು ದುರಹಂಕಾರ ತೋರಿಸುವ ಗುಣ ಅನೇಕರಿಗೆ ಇಷ್ಟ ಆಗುವುದಿಲ್ಲ. ಇದರಿಂದ ಸಾಕಷ್ಟು ನಷ್ಟ ಅನುಭವಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:46 am, Mon, 13 January 25