ನಿತ್ಯಾಗೆ ಗೊತ್ತಾಯ್ತ ಪ್ರೀತಿಯ ಸತ್ಯ; ಕರ್ಣ-ನಿಧಿ ವಿವಾಹ ಮಾಡಿಸಲು ಮುಂದಾದ ಸಹೋದರಿ

ಕರ್ಣ ಧಾರಾವಾಹಿಯಲ್ಲಿ ಮಹತ್ವದ ತಿರುವು ಬಂದಿದೆ. ಕರ್ಣ ಮತ್ತು ನಿಧಿ ಪ್ರೀತಿಸುತ್ತಿದ್ದರೂ, ಅನಿವಾರ್ಯವಾಗಿ ನಿತ್ಯಾಳನ್ನು ಮದುವೆಯಾಗಿದ್ದನು. ಈಗ ಸತ್ಯ ತಿಳಿದ ನಿತ್ಯಾ, ಕರ್ಣ ಹಾಗೂ ನಿಧಿ ಮದುವೆ ಮಾಡಿಸಲು ಮುಂದಾಗಿದ್ದಾಳೆ. ಕರ್ಣ ಮತ್ತು ನಿತ್ಯಾ ಮದುವೆಯಾಗಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ನಿತ್ಯಾ ನಿರ್ಧಾರದಿಂದ ಮನೆಯವರಿಗೆ ಶಾಕ್ ಆಗಿದ್ದು, ಮುಂದಿನ ಕಥೆ ಕುತೂಹಲ ಮೂಡಿಸಿದೆ.

ನಿತ್ಯಾಗೆ ಗೊತ್ತಾಯ್ತ ಪ್ರೀತಿಯ ಸತ್ಯ; ಕರ್ಣ-ನಿಧಿ ವಿವಾಹ ಮಾಡಿಸಲು ಮುಂದಾದ ಸಹೋದರಿ
Karna Serial (2)
Edited By:

Updated on: May 18, 2026 | 8:15 AM

‘ಕರ್ಣ’ ಧಾರಾವಾಹಿಯಲ್ಲಿ ಒಂದು ಪ್ರಮುಖ ಬೆಳವಣಿಗೆ ನಡೆದಿದೆ. ಇಷ್ಟು ದಿನ ಮುಚ್ಚಿಟ್ಟ ಸತ್ಯವು ಹೊರ ಬೀಳುವ ಸಮಯ ಬಂದಿದೆ. ಕರ್ಣ ಹಾಗೂ ನಿಧಿ ಪರಸ್ಪರ ಪ್ರೀತಿಸುತ್ತಾ ಇದ್ದವರು. ಆದರೆ, ಕರ್ಣನ ತಂದೆ ಮಾಡಿದ ಮೋಸದಿಂದ ಒಂದು ದೊಡ್ಡ ಆಘಾತ ಉಂಟಾಗಿತ್ತು. ಕರ್ಣನು ನಿತ್ಯಾಳನ್ನು ಮದುವೆ ಆಗುವ ಅನಿವಾರ್ಯತೆ ಬಂತು. ಈಗ ಆ ತಪ್ಪನ್ನು ಸರಿ ಮಾಡುವ ಸಮಯ ಎಂದೇ ಹೇಳಬಹುದು. ಧಾರಾವಾಹಿಯಲ್ಲಿ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ನಿಧಿ ಹಾಗೂ ಕರ್ಣ ಪ್ರೀತಿ ಮಾಡುತ್ತಿದ್ದರು. ಆದರೆ, ಕರ್ಣ ಹಾಗೂ ನಿತ್ಯಾ ವಿವಾಹ ನಡೆದಿದೆ. ಈ ವಿವಾಹದ ಬಳಿಕ ನಿಧಿಗೆ ಸಾಕಷ್ಟು ಬೇಸರ ಆಯಿತು. ಮುಂದೇನು ಮಾಡಬೇಕು ಎಂಬ ಚಿಂತೆ ಆಕೆಗೆ ಬಂದಿತ್ತು. ಕೊನೆಗೆ ಕರ್ಣನು ಮುಂದಿನ ದಿನಗಳಲ್ಲಿ ಅವಳನ್ನು ಮದುವೆ ಆಗುವ ಭರವಸೆ ನೀಡಿದನು. ಈಗ ಆ ಸಮಯ ಬಂದಿದೆ.

ಕರ್ಣನು ಮತ್ತೊಂದು ಕುತಂತ್ರ ಮಾಡಿದ್ದಾನೆ. ಈ ಕುತಂತ್ರ ಸಣ್ಣದಲ್ಲ. ಅದು ದೊಡ್ಡ ಕತಂತ್ರವೇ. ನಿಧಿಗೆ ಬೇರೆ ಮದುವೆ ಮಾಡಬೇಕು ಎಂದು ಆತ ನಿರ್ಧರಿಸಿದೆ. ಈ ಬೆನ್ನಲ್ಲೇ ಅರ್ಜುನ್​​ನ (ಗಗನ್ ಚಿನ್ನಪ್ಪ) ಕರೆ ತಂದನು. ಇಬ್ಬರೂ ಮದುವೆ ಮಾಡಬೇಕು ಎಂಬ ಪ್ರಯತ್ನ ನಡೆಯಿತು. ಇದನ್ನು ಈಗ ನಿಧಿಯೇ ಬದಲಿಸುವ ಸಮಯ ಬಂದಿದೆ.

ಇದನ್ನೂ ಓದಿ: ‘ಕರ್ಣ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್; ಕರ್ಣ-ನಿಧಿ ಮದುವೆ ಮಾಡಿಸ್ತಾಳೆ ನಿತ್ಯಾ

ಕರ್ಣ ಧಾರಾವಾಹಿಯಲ್ಲಿ ಈಗ ನಿತ್ಯಾಗೆ ಸತ್ಯ ಗೊತ್ತಾಗಿದೆ. ಆಕೆ ನಿಧಿ ಹಾಗೂ ಕರ್ಣನ ಮದುವೆ ಮಾಡಿಸಲು ಮುಂದಾಗಿದ್ದಾಳೆ. ಈ ನಿರ್ಧಾರ ಮನೆಯವರಿಗೆ ಶಾಕಿಂಗ್ ಎನಿಸಿದೆ. ಈ ಮೊದಲೇ ಹೇಳಿದಂತೆ ನಿತ್ಯಾ ಹಾಗೂ ಕರ್ಣ ಮದುವೆ ನಡೆದೇ ಇಲ್ಲ. ಹೀಗಾಗಿ, ನಿಧಿ ಹಾಗೂ ಕರ್ಣನ ಮದುವೆ ಆಗಲು ಯಾವುದೇ ತೊಂದರೆ ಇಲ್ಲ. ಮತ್ತೊಂದು ವಿಷಯ ಎಂದರೆ ಕರ್ಣ ಹಾಗೂ ನಿತ್ಯಾ ಇನ್ನುಮುಂದೆ ಫ್ರೆಂಡ್ಸ್ ಆಗಿರಲು ನಿರ್ಧರಿಸಿದ್ದಾರೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us