ಕರ್ಣನ ಟಾರ್ಚರ್​​ಗೆ ಬೇಸತ್ತ ತಂದೆ ರಮೇಶ್; ಮುಂದಿದೆ ಮಾರಿ ಹಬ್ಬ

ಜೀ ಕನ್ನಡದ 'ಕರ್ಣ' ಧಾರಾವಾಹಿಯಲ್ಲಿ ಕರ್ಣನ ಪಾತ್ರದಲ್ಲಿ ಮಹತ್ವದ ಬದಲಾವಣೆಯಾಗಿದೆ. ತಂದೆ ರಮೇಶ್‌ನ ಕುತಂತ್ರಗಳಿಗೆ ಸೈಲೆಂಟ್ ಆಗಿದ್ದ ಕರ್ಣ ಈಗ ತಿರುಗಿಬಿದ್ದಿದ್ದಾನೆ. 'ದಂಡಂ ದಶಗುಣಂ' ಎಂದು ಹೇಳಿ, ಅಪ್ಪನಿಗೆ ಪಾತ್ರೆ ತೊಳೆಯುವ ಶಿಕ್ಷೆ ನೀಡಿದ್ದಾನೆ. ಈ ಹೊಸ ಬದಲಾವಣೆಯಿಂದಾಗಿ ಧಾರಾವಾಹಿಯ ಕಥೆ ರೋಚಕವಾಗಿದ್ದು, ಟಿಆರ್‌ಪಿ ಹೆಚ್ಚಾಗುವ ನಿರೀಕ್ಷೆ ಇದೆ.

ಕರ್ಣನ ಟಾರ್ಚರ್​​ಗೆ ಬೇಸತ್ತ ತಂದೆ ರಮೇಶ್; ಮುಂದಿದೆ ಮಾರಿ ಹಬ್ಬ
ಕರ್ಣ ಧಾರಾವಾಹಿ
Edited By:

Updated on: Jan 26, 2026 | 7:55 AM

ಜೀ ಕ್ನಡದ ‘ಕರ್ಣ’ ಧಾರಾವಾಹಿಯಲ್ಲಿ (Karna Serial) ಕರ್ಣ ಇಷ್ಟು ದಿನ ಸೈಲೆಂಟ್ ಆಗಿ ಇರುತ್ತಿದ್ದ. ತಂದೆ ಏನೇ ಹೇಳಿದರೂ ಅದನ್ನು ಸಹಿಸಿಕೊಳ್ಳುತ್ತಿದ್ದ. ಆದರೆ, ಈಗ ಎಲ್ಲವೂ ಬದಲಾಗಿ ಹೋಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಹೌದು, ಕರ್ಣನು ಈಗ ತಂದೆ ರಮೇಶ್​​ಗೆ ಟಾರ್ಚರ್ ಕೊಡುವ ನಿರ್ಧಾರಕ್ಕೆ ಬಂದಿದ್ದಾನೆ. ಈ ಟಾರ್ಚರ್​​ನಿಂದ ತಂದೆ ಬೇಸತ್ತು ಹೋಗುವ ಎಲ್ಲಾ ಲಕ್ಷಣ ಇದೆ.

ಕರ್ಣ ಇಷ್ಟು ದಿನ ತಂದೆಯನ್ನು ಅಪಾರವಾಗಿ ಗೌರವಿಸುತ್ತಿದ್ದ. ಈ ಗೌರವ ಅತಿಯಾಗಿತ್ತು. ತಂದೆಯನ್ನು ಸಾಕಷ್ಟು ಪ್ರೀತಿ ಮಾಡುತ್ತಿದ್ದ. ತಂದೆ ಏನೇ ಹೇಳಿದರೂ ಅದನ್ನು ಸಹಿಸಿಕೊಳ್ಳುತ್ತಿದ್ದ. ಇದನ್ನು ಕರ್ಣನ ತಂದೆ ಅಡ್ವಾಂಟೇಜ್ ಆಗಿ ತೆಗೆದುಕೊಂಡ. ಒಂದು ಮಾಸ್ಟರ್ ಪ್ಲ್ಯಾನ್ ಕೂಡ ಮಾಡಿದ ಎಂದೇ ಹೇಳಬಹುದು.

ತಾನು ಬದಲಾದಂತೆ ತೋರಿಸಿಕೊಂಡ. ಒಳ್ಳೆಯವನ ರೀತಿ ವರ್ತಿಸಿದ. ತೇಜಸ್ ಹಾಗೂ ನಿತ್ಯಾಳ ಮದುವೆ ಸಂದರ್ಭದಲ್ಲಿ ತೇಜಸ್​​ನ ಕಿಡ್ನ್ಯಾಪ್ ಮಾಡಿಸಿದ. ಕಿಡ್ನ್ಯಾಪ್ ಮಾಡಿದ ಬಳಿಕ ಅನಿವಾರ್ಯವಾಗಿ ಕರ್ಣ ಹಾಗೂ ನಿತ್ಯಾ ಮದುವೆ ಮಾಡಿಸಿದ. ಕರ್ಣ ಹಾಗೂ ನಿಧಿ ಪ್ರೀತಿ ಮುರಿದು ಬೀಳುವಂತೆ ಮಾಡಿದ. ಈಗ ಎಲ್ಲವೂ ಬದಲಾಗುವ ಸಮಯ.


ರಮೇಶ್ ತಾನು ಏನೇನು ಪ್ಲ್ಯಾನ್ ಮಾಡಿದ್ದೆ ಎಂಬುದನ್ನು ಹೇಳಿಕೊಳ್ಳುತ್ತಿದ್ದ. ಆ ಸಮಯಕ್ಕೆ ಸರಿಯಾಗಿ ಕರ್ಣ ಅಲ್ಲಿಗೆ ಬಂದು ಕೇಳಿಕೊಂಡ. ಇದನ್ನು ಕೇಳಿ ಕರ್ಣ ‘ದಂಡಂ ದಶಗುಣಂ’ ಎಂದು ಹೇಳಿದ್ದಾನೆ. ಇದರ ನಂತರ ಕರ್ಣನು ಸಂಪೂರ್ಣವಾಗಿ ಬದಲಾಗುವ ಸೂಚನೆ ಕೊಟ್ಟಿದ್ದಾನೆ.

ಕರ್ಣನ ಏಟಿಗೆ ರಮೇಶ್ ತತ್ತಿರಿಸುವ ಸೂಚನೆ ಸಿಕ್ಕಿದೆ. ಇಡೀ ಮನೆಯವರಿಗೆ ಅಡುಗೆ ಮಾಡೋಣ ಎಂದು ಹೇಳಿ ಅಡುಗೆ ಮಾಡಿಸಿದ್ದಾನೆ. ಆ ಬಳಿಕ ರಮೇಶ್ ಬಳಿ ಪಾತ್ರೆ ತೊಳೆಯುವಂತೆ ಹೇಳಿದ್ದಾನೆ.

ಇದನ್ನೂ ಓದಿ: ಹೊಟ್ಟೆಯಲ್ಲಿರೋ ಮಗು ವಿಚಾರ ಹೇಳೇಬಿಟ್ಟ ಕರ್ಣ; ಶಾಕ್ ಆದ ನಿತ್ಯಾ

ಇದೆಲ್ಲವನ್ನೂ ನೋಡಿ ರಮೇಶ್ ಕಂಗಾಲಾಗಿದ್ದಾನೆ. ಕರ್ಣ ಇಷ್ಟು ದಿನ ಸೈಲೆಂಟ್ ಆಗಿ ಇರುತ್ತಿದ್ದರು. ಆದರೆ, ಈಗ ಎಲ್ಲವನ್ನೂ ಸಹಿಸಿಕೊಳ್ಳುವ ಸಮಯ ಅಲ್ಲವೇ ಅಲ್ಲ. ಈ ಬದಲಾವಣೆಯನ್ನು ಸಾಕಷ್ಟು ಇಷ್ಟಪಡುತ್ತಾ ಇದ್ದಾರೆ. ಇದರಿಂದ ಟಿಆರ್​ಪಿ ಏರುವ ಎಲ್ಲಾ ಲಕ್ಷಣ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.