ಬಿಗ್ ಬಾಸ್ ಮನೆಯಲ್ಲಿ ಊಟದ ವಿಚಾರಕ್ಕೆ ಜಗಳ; ಕಾರ್ತಿಕ್ ನಡೆದುಕೊಂಡಿದ್ದು ಸರೀನಾ?

ಟಾಸ್ಕ್ ಪೂರ್ಣಗೊಂಡು ಎಲ್ಲರೂ ಊಟ ಮಾಡಲು ಆಗಮಿಸಿದ್ದರು. ಈ ವೇಳೆ ಸ್ನೇಹಿತ್ ಅವರು ಪ್ಲೇಟ್ ಪೂರ್ತಿ ಅನ್ನ ಹಾಕಿಕೊಂಡು ಹೊರಟಿದ್ದರು. ಇದೇ ವೇಳೆ ಅನ್ನ ಶಾರ್ಟೇಜ್ ಇದೆ ಎನ್ನುವ ಮಾತು ಕೇಳಿ ಬಂತು. ಇದನ್ನು ಕೇಳಿದ ಬಳಿಕ ಕಾರ್ತಿಕ್ ಅವರು ಬೇಸರ ಮಾಡಿಕೊಂಡರು.

ಬಿಗ್ ಬಾಸ್ ಮನೆಯಲ್ಲಿ ಊಟದ ವಿಚಾರಕ್ಕೆ ಜಗಳ; ಕಾರ್ತಿಕ್ ನಡೆದುಕೊಂಡಿದ್ದು ಸರೀನಾ?
ಕಾರ್ತಿಕ್-ಸಂಗೀತಾ
Edited By:

Updated on: Nov 22, 2023 | 2:32 PM

ಬಿಗ್ ಬಾಸ್ (Bigg Boss) ಮನೆ ಒಳಗೆ ಬರುವ ಸ್ಪರ್ಧಿಗಳ ಹಿನ್ನೆಲೆ ಒಬ್ಬೊಬ್ಬರದ್ದು ಒಂದೊಂದು ರೀತಿ ಇರುತ್ತದೆ. ಸಾಕಷ್ಟು ಐಷಾರಾಮಿ ಆಗಿ ಜೀವನ ನಡೆಸಿದವರು, ಕಷ್ಟಪಟ್ಟು ಮೇಲೆ ಬಂದವರು ಹೀಗೆ ನಾನಾ ರೀತಿಯ ವ್ಯಕ್ತಿಗಳು ಇಲ್ಲಿಗೆ ಬರುತ್ತಾರೆ. ಬಿಗ್ ಬಾಸ್ ಮನೆ ಒಳಗೆ ಬಂದ ಬಳಿಕ ಎಲ್ಲರಿಗೂ ಒಂದೇ ರೀತಿಯ ನಿಯಮ. ಈ ನಿಯಮವನ್ನು ಸ್ಪರ್ಧಿಗಳು ಮೀರುವಂತಿಲ್ಲ. ಊಟದ ವಿಚಾರದಲ್ಲಿ ಕೆಲವೊಮ್ಮೆ ರಾಜಿ ಆಗಬೇಕಾಗುತ್ತದೆ. ಇದಕ್ಕಾಗಿ ಕಿತ್ತಾಟ ನಡೆದಿದ್ದೂ ಇದೆ. ಈಗ ಕಾರ್ತಿಕ್ ಆಡಿದ ಮಾತಿನಿಂದ ಘನಘೋರ ಜಗಳವೇ ನಡೆದುಬಿಟ್ಟಿದೆ. ಸಂಗೀತಾ ಶೃಂಗೇರಿ ಅತ್ತಿದ್ದಾರೆ.

ಟಾಸ್ಕ್ ಪೂರ್ಣಗೊಂಡು ಎಲ್ಲರೂ ಊಟ ಮಾಡಲು ಆಗಮಿಸಿದ್ದರು. ಈ ವೇಳೆ ಸ್ನೇಹಿತ್ ಅವರು ಪ್ಲೇಟ್ ಪೂರ್ತಿ ಅನ್ನ ಹಾಕಿಕೊಂಡು ಹೊರಟಿದ್ದರು. ಇದೇ ವೇಳೆ ಅನ್ನ ಶಾರ್ಟೇಜ್ ಇದೆ ಎನ್ನುವ ಮಾತು ಕೇಳಿ ಬಂತು. ಇದನ್ನು ಕೇಳಿದ ಬಳಿಕ ಕಾರ್ತಿಕ್ ಅವರು ಬೇಸರ ಮಾಡಿಕೊಂಡರು. ಅಲ್ಲದೇ ಸ್ನೇಹಿತ್ ಗೌಡ ಅವರ ಪ್ಲೇಟ್ ನೋಡಿ ‘ಏನಿದು ಸ್ನೇಹಿತ್​’ ಎಂದರು. ಆ ಬಳಿಕ ಜೋರು ಜೋರಾಗಿ ಕೂಗಲು ಆರಂಭಿಸಿದರು.

‘ಊಟ ಮಾಡುವಾಗ ನೋಡಿಕೊಂಡು ಹಾಕಿಕೊಳ್ಳಬೇಕು. ಮನಸೋ ಇಚ್ಛೇ ಪ್ಲೇಟ್​ನಲ್ಲಿ ಹಾಕಿಕೊಳ್ಳುವುದಲ್ಲ. ಎಲ್ಲರಿಗೂ ಸರಿಸಮನಾಗಿ ಊಟ ಸಿಗಬೇಕು. ನಾನು ಬಡಿಸುವಾಗ ನನಗೆ ಕಡಿಮೆ ಬಿದ್ದರೂ ತೊಂದರೆ ಇಲ್ಲ ಎಂದು ಬಡಿಸುತ್ತಿದ್ದೆ. ಆದರೆ, ಇಲ್ಲಿ ಯಾರಿಗೂ ಆ ಬಗ್ಗೆ ಕಾಳಜಿ ಇಲ್ಲ’ ಎಂದು ಜೋರು ಧ್ವನಿಯಲ್ಲಿ ಮಾತನಾಡೋಕೆ ಆರಂಭಿಸಿದರು. ಇದೆಲ್ಲವೂ ತನಗೇ ಹೇಳುತ್ತಿರುವುದು ಎಂದು ಭಾವಿಸಿದ ಸಂಗೀತಾ ಅವರು ಗಳಗಳನೆ ಅಳೋಕೆ ಆರಂಭಿಸಿದರು.

ಇದನ್ನೂ ಓದಿ: ಸಂಗೀತಾ ದುಡುಕಿನ ನಿರ್ಧಾರ; ಕಾರ್ತಿಕ್​ ಜತೆಗಿನ ಕಿರಿಕ್​ ಬಳಿಕ ಬಿಗ್​ ಬಾಸ್​ ಮನೆಯಿಂದ ಔಟ್​?

‘ಕಾರ್ತಿಕ್ ಏಕೆ ಆ ರೀತಿ ಮಾತನಾಡುತ್ತಿದ್ದೀರಿ. ನನಗೆ ಹಸಿವಾಗಿಲ್ಲ. ನನ್ನ ಪಾಲಲ್ಲಿ ಅರ್ಧ ಕೊಡ್ತೀನಿ’ ಎಂದು ವಿನಯ್ ಹೇಳಿದರು. ಆದರೂ ಕಾರ್ತಿಕ್ ಕೂಗಾಟ ಮುಂದುವರಿಸಿದರು. ಇದನ್ನು ನೋಡುತ್ತಿದ್ದ ಸಂಗೀತಾ ಅವರು ಪ್ಲೇಟ್​ನಲ್ಲಿ ಹಾಕಿಕೊಂಡಿದ್ದ ಊಟವನ್ನು ಅಲ್ಲಿಯೇ ತ್ಯಜಿಸಿ ಅಳೋಕೆ ಆರಂಭಿಸಿದರು. ಊಟದ ವಿಚಾರದಲ್ಲಿ ಕಾರ್ತಿಕ್ ಈ ರೀತಿ ಮಾತನಾಡಬಾರದಿತ್ತು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಸಂಗೀತಾ ಓವರ್ ಆಗಿ ರಿಯಾಕ್ಟ್ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾರ್ತಿಕ್ ಹಾಗೂ ಸಂಗೀತಾ ಮಧ್ಯೆ ಒಳ್ಳೆಯ ಬಾಂಡಿಂಗ್ ಇತ್ತು. ದಿನ ಕಳೆದಂತೆ ಇಬ್ಬರೂ ದೂರ ಆಗುತ್ತಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ