ಮದುವೆ ಬಳಿಕ ಮೊದಲ ಬಾರಿ ಜೋಡಿಯಾಗಿ ಟಿವಿ ಶೋಗೆ ಬರಲಿರುವ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​?

| Updated By: ಮದನ್​ ಕುಮಾರ್​

Updated on: Feb 21, 2022 | 12:57 PM

‘ಸ್ಮಾರ್ಟ್​ ಜೋಡಿ’ ಕಾರ್ಯಕ್ರಮದ ಪ್ರೋಮೋಗಳು ವೀಕ್ಷಕರ ಗಮನ ಸೆಳೆದಿವೆ. ಇದೇ ಶೋಗೆ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್ ಅವರನ್ನು ಕರೆತರಲು ಸಿದ್ಧತೆ ನಡೆದಿದೆ.

ಮದುವೆ ಬಳಿಕ ಮೊದಲ ಬಾರಿ ಜೋಡಿಯಾಗಿ ಟಿವಿ ಶೋಗೆ ಬರಲಿರುವ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​?
ಕತ್ರಿನಾ ಕೈಫ್, ವಿಕ್ಕಿ ಕೌಶಲ್
Follow us on

ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಕತ್ರಿನಾ ಕೈಫ್​ (Katrina Kaif) ಹಾಗೂ ವಿಕ್ಕಿ ಕೌಶಲ್​ ಅವರು ಕೆಲವು ತಿಂಗಳ ಹಿಂದೆ ಹಸೆಮಣೆ ಏರಿದರು. ತಮ್ಮ ಪ್ರೀತಿ-ಪ್ರೇಮದ ಬಗ್ಗೆ ಈ ಜೋಡಿ ಎಲ್ಲಿಯೂ ಸಾರ್ವಜನಿಕವಾಗಿ ಮಾತನಾಡಿಲ್ಲ. ಮದುವೆಯ ವಿಡಿಯೋಗಳು ಕೂಡ ಬಹಿರಂಗ ಆಗಿಲ್ಲ. ಅವರಿಬ್ಬರ ಲವ್​ಸ್ಟೋರಿ ಹೇಗೆ ಶುರುವಾಯಿತು? ಮೊದಲು ಪ್ರಪೋಸ್​ ಮಾಡಿದ್ದು ಯಾರು? ಮದುವೆಗೆ (Katrina Kaif Vicky Kaushal Wedding) ಮನೆಯವರನ್ನು ಒಪ್ಪಿಸಿದ್ದು ಹೇಗೆ? ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಪಡೆಯಲು ಫ್ಯಾನ್ಸ್​ ಕಾಯುತ್ತಿದ್ದಾರೆ. ಹಾಗಾಗಿ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್ (Vicky Kaushal)​ ಅವರು ಜೊತೆಯಾಗಿ ಯಾವುದಾದರೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ ಎಂದು ಜನರು ಬಯಸುತ್ತಿದ್ದಾರೆ. ಅದನ್ನು ಅರ್ಥ ಮಾಡಿಕೊಂಡಿರುವ ಖಾಸಗಿ ಮನರಂಜನಾ ವಾಹಿನಿಯೊಂದು ಸೂಕ್ತ ವೇದಿಕೆ ಸಜ್ಜು ಮಾಡುತ್ತಿದೆ ಎಂಬ ಸುದ್ದಿ ಕೇಳಿಬಂದಿದೆ. ಶೀಘ್ರದಲ್ಲೇ ಈ ನವದಂಪತಿ ಜೊತೆಯಾಗಿ ಟಿವಿ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಆ ಕ್ಷಣಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆ ಚಾನೆಲ್​ ಯಾವುದು? ಕಾರ್ಯಕ್ರಮದ ಹೆಸರೇನು? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರನ್ನು ಹೊಸ ಕಾರ್ಯಕ್ರಮದ ಲಾಂಚಿಂಗ್​ ಎಪಿಸೋಡ್​ಗೆ ಅತಿಥಿಗಳಾಗಿ ಕರೆತರಲು ಹಿಂದಿಯ ‘ಸ್ಟಾರ್​ ಪ್ಲಸ್​’ ವಾಹಿನಿ ತಯಾರಿ ನಡೆಸುತ್ತಿದೆ ಎಂದು ‘ಬಾಲಿವುಡ್​ ಲೈಫ್​’ ವರದಿ ಮಾಡಿದೆ. ಸ್ಟಾರ್​ ಪ್ಲಸ್​ ವಾಹಿನಿಯಲ್ಲಿ ‘ಸ್ಮಾರ್ಟ್​ ಜೋಡಿ’ ಶೋ ಶೀಘ್ರವೇ ಆರಂಭ ಆಗಲಿದೆ. ಹೆಸರೇ ಸೂಚಿಸುವಂತೆ ಇದು ಸೆಲೆಬ್ರಿಟಿ ದಂಪತಿಗಳ ಕಾರ್ಯಕ್ರಮ. ಕನ್ನಡದಲ್ಲಿ ಮೂಡಿಬಂದ ‘ರಾಜಾ ರಾಣಿ’ ಶೋ ಮಾದರಿಯಲ್ಲಿ ‘ಸ್ಮಾರ್ಟ್​ ಜೋಡಿ’ ಶೋ ಪ್ರಸಾರ ಆಗಲಿದೆ. ಅದರ ಮೊದಲ ಎಪಿಸೋಡ್​ಗೆ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಅತಿಥಿಗಳಾಗಿ ಬಂದರೆ ಹೆಚ್ಚು ಆಕರ್ಷಕವಾಗಿ ಇರಲಿದೆ ಎಂಬುದು ವಾಹಿನಿಯ ಲೆಕ್ಕಾಚಾರ.

‘ಸ್ಮಾರ್ಟ್​ ಜೋಡಿ’ ಕಾರ್ಯಕ್ರಮಕ್ಕೆ ಆಹ್ವಾನಿಸುವ ಕುರಿತು ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಜೊತೆಗೆ ಸ್ಟಾರ್​ ಪ್ಲಸ್​ ವಾಹಿನಿಯವರು ಮಾತುಕತೆ ನಡೆಸಿದ್ದಾರೆ. ಆದರೆ ಕತ್ರಿನಾ-ವಿಕ್ಕಿ ಕಡೆಯಿಂದ ಗ್ರೀನ್​ ಸಿಗ್ನಲ್​ ಸಿಗುವುದು ಇನ್ನೂ ಬಾಕಿ ಇದೆ ಎನ್ನಲಾಗಿದೆ. ಈಗಾಗಲೇ ಈ ಕಾರ್ಯಕ್ರಮದ ಪ್ರೋಮೋಗಳು ವೀಕ್ಷಕರ ಗಮನ ಸೆಳೆದಿವೆ. ಸೆಲೆಬ್ರಿಟಿ ದಂಪತಿಗಳು ವಿವಿಧ ಗೇಮ್ಸ್​ ಆಡುವುದರ ಜೊತೆಗೆ ಸಖತ್ ಮನರಂಜನೆ ನೀಡಲಿದ್ದಾರೆ.
ಬಾಲಿವುಡ್​ನಲ್ಲಿ ಸಾಧನೆ ಮಾಡಿದ ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​ ಅವರು ಮದುವೆ ಆಗುವ ಮೂಲಕ ಬದುಕಿನ ಹೊಸ ಅಧ್ಯಾಯ ಆರಂಭಿಸಿದ್ದಾರೆ. ತಮ್ಮ ಮದುವೆ ಬಗ್ಗೆ ಅವರು ಸಾಕಷ್ಟು ಗೌಪ್ಯತೆ ಕಾಯ್ದುಕೊಂಡಿದ್ದರು. ವಿವಾಹದ ದೃಶ್ಯಗಳ ಪ್ರಸಾರದ ಹಕ್ಕುಗಳನ್ನು ಒಟಿಟಿ ಸಂಸ್ಥೆಯೊಂದಕ್ಕೆ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಇದೆ. ಆದಷ್ಟು ಬೇಗ ಈ ಕುರಿತು ಅಧಿಕೃತ ಘೋಷಣೆ ಆಗಲಿದೆ. ಅದಕ್ಕಾಗಿಯೂ ಫ್ಯಾನ್ಸ್​ ಕಾದಿದ್ದಾರೆ.

ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್ ಅವರು ಹಲವು ವರ್ಷಗಳಿಂದ ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿದ್ದರೂ ಕೂಡ ಈವರೆಗೂ ಅವರಿಬ್ಬರು ಜೋಡಿಯಾಗಿ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆದರೂ ಅವರಿಬ್ಬರ ನಡುವೆ ಪ್ರೀತಿ ಚಿಗುರಿದ್ದು ವಿಶೇಷ. ‘ಜೀ ಲೇ ಝರಾ’ ಸಿನಿಮಾದಲ್ಲಿ ಕತ್ರಿನಾಗೆ ವಿಕ್ಕಿ ಕೌಶಲ್​ ಜೋಡಿ ಆಗುತ್ತಾರೆ ಎಂಬ ಸುದ್ದಿ ಹರಿದಾಡಿದೆ. ಆ ಬಗ್ಗೆ ತಿಳಿದುಕೊಳ್ಳಲು ಸಹ ಫ್ಯಾನ್ಸ್​ ಕಾಯುತ್ತಿದ್ದಾರೆ. ಸದ್ಯ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರು ಬೇರೆ ಬೇರೆ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:

ಗಂಡನ ಮನೆಯಲ್ಲಿ ಅಡುಗೆ ಕಲಿಯುತ್ತಿರುವ ಕತ್ರಿನಾ! ​ಮದುವೆ ಬಳಿಕ ವಿಕ್ಕಿ-ಕತ್ರಿನಾಗೆ ಮೊದಲ ಸಂಕ್ರಾಂತಿ

ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಮದುವೆಗೆ ಕೊನೆಗೂ ವಿಶ್ ಮಾಡಿದ ಸಲ್ಮಾನ್ ಖಾನ್

Published On - 12:47 pm, Mon, 21 February 22