ಬಿಗ್ ಬಾಸ್​ನಲ್ಲಿರೋ ಕಾವ್ಯಾ ಶೈವ ಅವರ ಫೇವರಿಟ್ ಹೀರೋ ಯಾರು ಗೊತ್ತಾ?

ಕಾವ್ಯಾ ಶೈವ ಅವರ 'ಕೊತ್ತಲವಾಡಿ' ಸಿನಿಮಾ ಯಶಸ್ಸಿನ ಬಳಿಕ ಬಿಗ್ ಬಾಸ್‌ನಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಕೆಂಡಸಂಪಿಗೆ ಧಾರಾವಾಹಿಯಿಂದ ಗಮನ ಸೆಳೆದಿದ್ದ ಕಾವ್ಯಾ, ತಮ್ಮ ಅಚ್ಚುಮೆಚ್ಚಿನ ನಟರಾಗಿ ಯಶ್ ಮತ್ತು ರಾಧಿಕಾ ಪಂಡಿತ್ ಹೆಸರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನೇರ ನುಡಿ ಹಾಗೂ ಗಿಲ್ಲಿಯೊಂದಿಗಿನ ಅವರ ಸ್ನೇಹ ಚರ್ಚೆಯಲ್ಲಿದೆ.

ಬಿಗ್ ಬಾಸ್​ನಲ್ಲಿರೋ ಕಾವ್ಯಾ ಶೈವ ಅವರ ಫೇವರಿಟ್ ಹೀರೋ ಯಾರು ಗೊತ್ತಾ?
ಕಾವ್ಯಾ
Updated By: ರಾಜೇಶ್ ದುಗ್ಗುಮನೆ

Updated on: Nov 05, 2025 | 8:06 AM

ಕಾವ್ಯಾ ಶೈವ ಅವರು ಇತ್ತೀಚೆಗೆ ‘ಕೊತ್ತಲವಾಡಿ’ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ಕಾವ್ಯಾ ಶೈವ ಅವರು ಗಮನ ಸೆಳೆದರು. ಕಾವ್ಯಾ ಅಭಿಮಾನಿ ಬಳಗ ಮತ್ತಷ್ಟು ಹಿರಿದಾಗಲು ಕಾರಣ ಆಗಿದ್ದು ಬಿಗ್ ಬಾಸ್ (Bigg Boss). ಅವರು ತಮ್ಮ ಆಟವನ್ನು ಅದ್ಭುತವಾಗಿ ಪ್ರದರ್ಶನ ಮಾಡುತ್ತಿದ್ದಾರೆ. ಹೀಗಿರುವಾಗಲೇ ಅವರ ಫೇವರಿಟ್ ಹೀರೋ-ಹಿರೋಯಿನ್ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಕಾವ್ಯಾ ಶೈವ ಅವರು ಮೊದಲು ಕೆಂಡಸಂಪಿಗೆ ಹೆಸರಿನ ಧಾರಾವಾಹಿಯಲ್ಲಿ ನಟಿಸಿದರು. ಈ ಧಾರಾವಾಹಿ ಗಮನ ಸೆಳೆಯಿತು. ಕಲರ್ಸ್ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಕಂಡಿತ್ತು. ಆ ಬಳಿಕ ಕಾವ್ಯಾ ಶೈವ ಅವರು ಹೆಸರು ಮಾಡಿದ್ದು, ‘ಕೊತ್ತಲವಾಡಿ’ ಸಿನಿಮಾ ಮೂಲಕ. ಈ ಚಿತ್ರವನ್ನು ಯಶ್ ತಾಯಿ ಪುಷ್ಪಾ ಅರುಣ್​ ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಸಂದರ್ಶನದ ವೇಳೆ ಅವರಿಗೆ ಪ್ರಶ್ನೆ ಒಂದು ಎದುರಾಗಿತ್ತು.

ನಿಮ್ಮಿಷ್ಟದ ನಟಿ ಅಥವಾ ನಿಮಗೆ ಸ್ಫೂರ್ತಿ ನೀಡೋರು ಯಾರು ಎಂದು ಕೇಳಿದಾಗ ಕಾವ್ಯಾ ಅವರು ಹಿಂದೆ ಮುಂದೆ ಯೋಚಿಸದೇ ಉತ್ತರ ನೀಡಿದರು. ‘ಎಲ್ಲರ ಮನೆಯಲ್ಲೂ ಇಂಜಿನಿಯರ್ ಇರ್ತಾರೆ. ಹಾಗೇ ಎಲ್ಲರ ಮನೆಯಲ್ಲೂ ಯಶ್ ಅಭಿಮಾನಿಗಳು ಇರ್ತಾರೆ. ನಾನು ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಡೈ ಹಾರ್ಡ್ ಫ್ಯಾನ್’ ಎಂದು ಕಾವ್ಯಾ ಶೈವ ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ: ಗಿಲ್ಲಿಗೆ ಹೊಡೆದ ಬಳಿಕವೂ ರಿಷಾಗೆ ಸಿಕ್ತು ವಿಶೇಷ ಅಧಿಕಾರ; ವೀಕ್ಷಕರಲ್ಲಿ ಮೂಡಿದೆ ಅಸಮಾಧಾನ

ಕಾವ್ಯಾ ಶೈವ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಅವರು ಏನೇ ಇದ್ದರೂ ನೇರ ಮಾತುಗಳಲ್ಲಿ ಹೇಳುತ್ತಿದ್ದಾರೆ. ಇದು ಎಲ್ಲರಿಗೂ ಖುಷಿ ಕೊಟ್ಟಿದೆ. ಕಾವ್ಯಾ ಹಾಗೂ ಗಿಲ್ಲಿ ಅವರ ಕಾಂಬಿನೇಷನ್ ಕೂಡ ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ. ಕಾವ್ಯಾ ಶೈವ ಅವರು ಫಿನಾಲೆವರೆಗೂ ಇರಬಹುದು ಎಂದು ಊಹಿಸಲಾಗುತ್ತಿದೆ. ​ಗಿಲ್ಲಿಗೆ ಕಾವ್ಯಾ ಹಾಗೂ ಕಾವ್ಯಾಗೆ ಗಿಲ್ಲಿ ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಅವರ ಸಂಬಂಧವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಕೆಲವು ಚರ್ಚೆಗಳು ನಡೆದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.