ಗಗನ್ ಬಾಯಿಯಿಂದ ಸತ್ಯ ಹೇಳಿಸಿದ ಸುದೀಪ್; ಫಿನಾಲೆ ಸಮೀಪದಲ್ಲಿ ಎಡವಿದ ಸ್ಪರ್ಧಿ

ಬಿಗ್ ಬಾಸ್ ಮನೆಯಲ್ಲಿ ನಾಲ್ಕು ಹೆಣ್ಣುಮಕ್ಕಳಿದ್ದಾರೆ ಎಂದು ಗಗನ್ ಆಡಿದ್ದ ವ್ಯಂಗ್ಯದ ಮಾತಿನ ಸತ್ಯವನ್ನು ಕಿಚ್ಚ ಸುದೀಪ್ ಹೊರತೆಗೆದಿದ್ದಾರೆ. ವಿಟಿ ತೋರಿಸಿದ ಬಳಿಕ ಯಶಸ್‌ಗೆ ಆ ಮಾತು ಹೇಳಿದ್ದಾಗಿ ಗಗನ್ ಒಪ್ಪಿಕೊಂಡಿದ್ದಾರೆ. ಇದರ ಬೆನ್ನಲ್ಲೇ ವಿಶೇಷ ಅಧಿಕಾರ ಪಡೆದ ಯಶಸ್, ಗಗನ್ ಅವರನ್ನು ಇಡೀ ಸೀಸನ್ ನಾಮಿನೇಟ್ ಮಾಡಿದ್ದಾರೆ.

ಗಗನ್ ಬಾಯಿಯಿಂದ ಸತ್ಯ ಹೇಳಿಸಿದ ಸುದೀಪ್; ಫಿನಾಲೆ ಸಮೀಪದಲ್ಲಿ ಎಡವಿದ ಸ್ಪರ್ಧಿ
ಬಿಗ್ ಬಾಸ್

Updated on: Nov 29, 2026 | 8:42 AM

ಮುಖ್ಯಾಂಶಗಳು

  • ಮನೆಯಲ್ಲಿ ನಾಲ್ಕು ಹೆಣ್ಣುಮಕ್ಕಳಿದ್ದಾರೆ ಎಂದು ವ್ಯಂಗ್ಯವಾಡಿದ್ದ ಗಗನ್ ಚಿನ್ನಪ್ಪ
  • ವಿಡಿಯೋ ತುಣುಕು ತೋರಿಸಿ ಗಗನ್ ಬಾಯಿಯಿಂದ ಸತ್ಯ ಕಕ್ಕಿಸಿದ ಕಿಚ್ಚ ಸುದೀಪ್
  • ವಿಡಿಯೋ ತುಣುಕು ತೋರಿಸಿ ಗಗನ್ ಬಾಯಿಯಿಂದ ಸತ್ಯ ಕಕ್ಕಿಸಿದ ಕಿಚ್ಚ ಸುದೀಪ್

ಬಿಗ್ ಬಾಸ್ ಕನ್ನಡ ಶೋ ಫಿನಾಲೆ ಹಂತಕ್ಕೆ ತಲುಪುತ್ತಿದೆ. ಈ ಸಮಯದಲ್ಲಿ ಸ್ಪರ್ಧಿಗಳ ನಡುವಿನ ಮಾತುಕತೆಗಳು ದೊಡ್ಡ ವಿವಾದಕ್ಕೆ ಕಾರಣವಾಗುತ್ತಿವೆ. ಇದೀಗ ಗಗನ್ ಚಿನ್ನಪ್ಪ ಅವರು ಸಹಸ್ಪರ್ಧಿ ಯಶಸ್ ಬಗ್ಗೆ ಆಡಿದ ಒಂದು ಮಾತು ಅವರಿಗೇ ಮುಳುವಾಗಿದೆ. ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಗಗನ್ ಬಾಯಿಯಿಂದ ಅಸಲಿ ಸತ್ಯವನ್ನು ಕಕ್ಕಿಸಿದ್ದಾರೆ.

ಏನಿದು ವಿವಾದ?

ಸದ್ಯ ಬಿಗ್ ಬಾಸ್ ಮನೆಯಲ್ಲಿ ಗಾನವಿ, ಸೌಂದರ್ಯಾ ಮತ್ತು ಆಸಿಯಾ ಎಂಬ ಮೂವರು ಮಹಿಳಾ ಸ್ಪರ್ಧಿಗಳು ಮಾತ್ರ ಇದ್ದಾರೆ. ಇತ್ತೀಚೆಗೆ ತಾಂಡವ್ ಮತ್ತು ಪ್ರಶಾಂತ್ ಜೊತೆ ಗಗನ್ ಊಟ ಮಾಡುತ್ತಾ ಕುಳಿತಿದ್ದರು. ಈ ವೇಳೆ ತಾಂಡವ್ ಅವರು ಮನೆಯಲ್ಲಿ ಮೂರು ಹೆಣ್ಣುಮಕ್ಕಳಿದ್ದಾರೆ ಮತ್ತು ಅವರು ಬಹಳ ಡೇಂಜರ್ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಗಗನ್, ಮನೆಯಲ್ಲಿ ನಾಲ್ಕು ಹೆಣ್ಣುಮಕ್ಕಳು ಇರುವುದಲ್ಲವೇ ಎಂದು ಹೇಳಿ ಮುಗುಳುನಗೆ ಬೀರಿದ್ದರು.

Loading...

ಸೋನಿಕಾ ಹೆಸರು ಹೇಳಿ ನುಣುಚಿಕೊಳ್ಳಲು ಯತ್ನ

ಗಗನ್ ಆಡಿದ ಈ ಮಾತು ಕೇಳಿ ತಾಂಡವ್ ತಕ್ಷಣ ಎಚ್ಚರಿಸಿದರು. ಆಗ ಎಚ್ಚೆತ್ತುಕೊಂಡ ಗಗನ್ ತಮ್ಮ ಮಾತನ್ನು ಬದಲಿಸಿದರು. ಮನೆಯಲ್ಲಿ ಸೋನಿಕಾ ಇದ್ದಾರೆ ಅಂದುಕೊಂಡು ಹಾಗೆ ಹೇಳಿದೆ ಎಂದು ಸಮಜಾಯಿಷಿ ನೀಡಿದ್ದರು. ಆದರೆ ಗಗನ್ ಆಡಿದ ಈ ವ್ಯಂಗ್ಯದ ಮಾತು ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿತ್ತು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಹೊಸ ವಿವಾದ; ವಿಕೆಂಡ್​ನಲ್ಲಿ ಚರ್ಚೆ ಆಗಬೇಕು ಎಂದ ನೆಟ್ಟಿಗರು

ವಿಟಿ ತೋರಿಸಿ ಬಿಸಿ ಮುಟ್ಟಿಸಿದ ಕಿಚ್ಚ

ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಈ ವಿಷಯವನ್ನು ಕೈಗೆತ್ತಿಕೊಂಡರು. ಮನೆಯಲ್ಲಿರುವ ಆ ನಾಲ್ಕು ಹೆಣ್ಣುಮಕ್ಕಳು ಯಾರು ಎಂದು ಗಗನ್ ಅವರನ್ನು ಪ್ರಶ್ನಿಸಿದರು. ಮೊದಲಿಗೆ ನಾನು ಆ ರೀತಿ ಹೇಳಿಯೇ ಇಲ್ಲ ಎಂದು ಗಗನ್ ವಾದಿಸಲು ಮುಂದಾದರು. ಆಗ ಸುದೀಪ್ ಅವರು ನೇರವಾಗಿ ವಿಟಿ (ವಿಡಿಯೋ ತುಣುಕು) ತೋರಿಸಿದರು. ವಿಡಿಯೋ ನೋಡಿದ ಮೇಲೂ ಸೋನಿಕಾ ಅವರನ್ನು ಉದ್ದೇಶಿಸಿ ಹೇಳಿದ್ದು ಎಂದು ಗಗನ್ ಮತ್ತೆ ವಾದಿಸಿದರು.

ಸತ್ಯ ಒಪ್ಪಿಕೊಂಡ ಗಗನ್; ಸೇಡು ತೀರಿಸಿಕೊಂಡ ಯಶಸ್

ಗಗನ್ ಅವರ ವಾದಕ್ಕೆ ಸುದೀಪ್ ಖಡಕ್ ಆಗಿ ಪ್ರತಿಕ್ರಿಯಿಸಿ ನಿಜ ಹೇಳುವಂತೆ ಸೂಚಿಸಿದರು. ಆ ನಗೆಯನ್ನು ನಾವು ನೋಡಿದ್ದೇವೆ ಎಂದು ಚೆಕ್​ಮೇಟ್ ಮಾಡಿದರು. ಕೊನೆಗೂ ಸುದೀಪ್ ಮುಂದೆ ಸೋಲೊಪ್ಪಿಕೊಂಡ ಗಗನ್, ಆ ಮಾತನ್ನು ಯಶಸ್‌ಗೆ ಹೇಳಿದ್ದು ಎಂದು ಸತ್ಯ ಒಪ್ಪಿಕೊಂಡರು. ಈ ಘಟನೆಯ ಬೆನ್ನಲ್ಲೇ ವಿಶೇಷ ಟಾಸ್ಕ್ ಗೆದ್ದಿದ್ದ ಯಶಸ್‌ಗೆ ಇಡೀ ಸೀಸನ್ ಒಬ್ಬರನ್ನು ನಾಮಿನೇಟ್ ಮಾಡುವ ವಿಶೇಷ ಅಧಿಕಾರ ಸಿಕ್ಕಿತು. ಈ ಅವಕಾಶ ಬಳಸಿಕೊಂಡ ಯಶಸ್, ಗಗನ್ ಅವರನ್ನು ಇಡೀ ಸೀಸನ್‌ಗೆ ನಾಮಿನೇಟ್ ಮಾಡಿ ಭರ್ಜರಿ ಸೇಡು ತೀರಿಸಿಕೊಂಡರು. ಫಿನಾಲೆ ಸಮೀಪಿಸಿದಾಗ ಗಗನ್ ಎಡವಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us