
ಬಿಗ್ ಬಾಸ್ ಮನೆಯಲ್ಲಿ ಕೆಲವೊಮ್ಮೆ ಟಾಸ್ಕ್ಗಳು ನಡೆಯುವಾಗ ಅದು ಯಾವ ಹಂತಕ್ಕೆ ಬೇಕಾದರೂ ಹೋಗಬಹುದು. ಆಟವನ್ನು ಗೆಲ್ಲಬೇಕು ಎಂಬ ಭರದಲ್ಲಿ ಸಾಕಷ್ಟು ತಪ್ಪುಗಳು ನಡೆದು ಹೋಗುತ್ತವೆ. ಈ ವಾರವೂ ಕೆಲವು ತಪ್ಪುಗಳು ನಡೆದವು. ಅದನ್ನು ಸುದೀಪ್ ತಿದ್ದಿದ್ದಾರೆ. ಇನ್ನು, ಆಟವನ್ನು ವೈಯಕ್ತಿಕವಾಗಿ ತೆಗೆದುಕೊಂಡ ಅಶ್ವಿನಿ ಗೌಡ ಅವರಿಗೆ ಸುದೀಪ್ ಪಾಠ ಮಾಡಿದರು. 10ನೇ ಸೀಸನ್ನ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಉದಾಹರಣೆಯನ್ನು ನೀಡಿದರು.
ಬಿಗ್ ಬಾಸ್ ಕನ್ನಡದಲ್ಲಿ ಈ ವಾರ ಒಂದು ಟಾಸ್ಕ್ ನೀಡಲಾಗಿತ್ತು. ಕ್ಯಾಪ್ಟನ್ ರೇಸ್ ಅಲ್ಲಿ ಕುಳಿತ ಅಶ್ವಿನಿ ಹಾಗೂ ಅಭಿಷೇಕ್ ಅವರನ್ನು ಡಿಸ್ಟ್ರಾಕ್ಟ್ ಮಾಡಬೇಕು. ಗಿಲ್ಲಿ ಅವರು ಅಶ್ವಿನಿ ಅವರ ವೈಯಕ್ತಿಕ ವಿಚಾರ ಇಟ್ಟುಕೊಂಡು ಅವರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದರು. ಈ ಪ್ರಯತ್ನ ಯಶಸ್ಸು ಆಗಿದೆ ಎಂದೇ ಹೇಳಿದರೂ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಗಿಲ್ಲಿ ಮಾತು ಕೇಳುತ್ತಾ ಕೇಳುತ್ತಾ ಅವರು ತಾವು 12 ನಿಮಿಷಕ್ಕೆ ಬೆಲ್ ಹೊಡೆಯಬೇಕು ಎಂಬುದನ್ನು ಮರೆತಿದ್ದರು.
ತಮ್ಮ ಕೆಲಸವನ್ನು ಅವರು ಸಮರ್ಥಿಸಿಕೊಳ್ಳಲು ಬಂದರು. ‘ಗಿಲ್ಲಿ ಮನಸ್ಸಲ್ಲಿ ಎಷ್ಟು ಕೆಟ್ಟ ಅಂಶಗಳು ಇವೆ ಎಂಬುದನ್ನು ನೋಡಬೇಕಿತ್ತು’ ಎಂದು ಅಶ್ವಿನಿ ಹೇಳಿದರು. ಇದನ್ನು ಸುದೀಪ್ ಒಪ್ಪಲಿಲ್ಲ. ‘10ನೇ ಸೀಸನ್ನಲ್ಲಿ ಸಂಗೀತಾ ಹಾಗೂ ಪ್ರತಾಪ್ ಟಾಸ್ಕ್ ಆಡುವಾಗ ಸಾಕಷ್ಟು ತೊಂದರೆ ಅನುಭವಿಸಿದರು. ಅವರು ಆಸ್ಪತ್ರೆಗೆ ಕೂಡ ಹೋಗಬೇಕಾಯಿತು. ಅಲ್ಲಿ ಆಟ ಆಡಿ ಗೆಲ್ಲೋದಷ್ಟೇ ಮುಖ್ಯ. ಹಾಗೆ ನೋಡಿದರೆ ಗಿಲ್ಲಿ-ಕಾವ್ಯಾ ಗೆದ್ದರು’ ಎಂದು ಹೇಳಿದರು.
‘ನೀವು ಟ್ರಿಗರ್ ಆಗದೆ 12 ನಿಮಿಷದ ಲೆಕ್ಕಾಚಾರಕ್ಕೆ ಬೆಲ್ ಹೊಡೆದಿದ್ದರೆ ಮೊದಲ ಮಹಿಳಾ ಕ್ಯಾಪ್ಟನ್ ಆಗುತ್ತಿದ್ದಿರಿ ಅಲ್ಲವೇ’ ಎಂದು ಸುದೀಪ್ ಪ್ರಶ್ನೆ ಮಾಡಿದರು. ಆದರೂ ಅಶ್ವಿನಿ ಅವರು ತಾವು ಮಾಡಿದ್ದೇ ಸರಿ ಎಂದು ಸಮರ್ಥಿಸಿಕೊಳ್ಳಲು ಬಂದರು.
ಇದನ್ನೂ ಓದಿ: ಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋ ಹಾಕಿದ ಸುದೀಪ್; ಕೇಳೋಕೆ ಸಾಧ್ಯವಿಲ್ಲ
10ನೇ ಸೀಸನ್ನಲ್ಲಿ ಸಂಗೀತಾ ಹಾಗೂ ಪ್ರತಾಪ್ ಚೇರ್ ಮೇಲೆ ಕುಳಿತುಕೊಳ್ಳಯವ ಟಾಸ್ಕ್ ಇತ್ತು. ಅವರನ್ನು ಮುಟ್ಟದೆಯೇ ಮೇಲಕ್ಕೆ ಎಬ್ಬಿಸಬೇಕಿತ್ತು. ಈ ವೇಳೆ ಸೋಪಿನ ನೀರು ಎರಚಲಾಗಿತ್ತು ಮತ್ತು ಇದರಿಂದ ಅವರಿನ ಕಣ್ಣಿನ ದೃಷ್ಟಿಗೆ ತೊಂದರೆ ಆಗಿತ್ತು. ಇದನ್ನು ಸುದೀಪ್ ನೆನಪಿಸಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.