ಬಿಗ್ ಬಾಸ್ ಆಫರ್ ಬಂದ್ರೆ ಸಂಜನಾ ಬುರ್ಲಿ ಏನು ಮಾಡ್ತಾರೆ? ಉತ್ತರಿಸಿದ ನಟಿ
ಸಂಜನಾ ಬುರ್ಲಿ ಅವರು ಬಿಗ್ ಬಾಸ್ ಆಫರ್ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸದ್ಯ ‘ಶ್ರೀ ಗಂಧದ ಗುಡಿ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಸಂಜನಾ, ಪ್ರಸ್ತುತ ಬಿಗ್ ಬಾಸ್ ಮನೆಗೆ ಪ್ರವೇಶಿಸಲು ಆಸಕ್ತಿ ಇಲ್ಲ ಎಂದಿದ್ದಾರೆ. ಧಾರಾವಾಹಿ ಮುಗಿದ ನಂತರ ಬಿಗ್ ಬಾಸ್ ಆಫರ್ ಪರಿಗಣಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ಹಿಂದೆ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಿಂದ ಹೊರಬಂದಾಗ ಬಿಗ್ ಬಾಸ್ ಕಾರಣ ಎಂಬ ವದಂತಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಸಂಜನಾ ಬುರ್ಲಿ (Sanjana Burli) ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅವರು ಈಗ ಕಲರ್ಸ್ ಕನ್ನಡದ ‘ಶ್ರೀ ಗಂಧದ ಗುಡಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಗಮನ ಸೆಳೆಯೋ ರೀತಿಯಲ್ಲಿ ಇದೆ. ಈಗ ಸಂಜನಾ ಬುರ್ಲಿ ಅವರು ಬಿಗ್ ಬಾಸ್ ಆಫರ್ ಬಗ್ಗೆ ಹಾಗೂ ಅದು ಬಂದರೆ ಒಪ್ಪಿಕೊಳ್ಳುತ್ತೇನೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಸಂಜನಾ ಬುರ್ಲಿ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸಿದರು. ಅವರು ಈ ಧಾರಾವಾಹಿಯನ್ನು ಅರ್ಧಕ್ಕೆ ತೊರೆದರು. ಇದಕ್ಕೆ ಬಿಗ್ ಬಾಸ್ ಕಾರಣ ಎಂದು ಹೇಳಲಾಯಿತು. ಆದರೆ, ಅವರು ಬಿಗ್ ಬಾಸ್ ರಿಯಾಲಿಟಿ ಶೋಗೆ ಬಂದಿಲ್ಲ. ಈ ಮೂಲಕ ಆ ವಿಚಾರ ಸುಳ್ಳಾಯಿತು. ನಂತರ ಸಂಜನಾ ಅವರು ಓದಿನ ಕಡೆ ಗಮನ ಹರಿಸಿದರು ಎನ್ನಲಾಗಿದೆ.
ಸಂಜನಾ ಬುರ್ಲಿ ಅವರು ಈಗ ‘ಶ್ರೀ ಗಂಧದ ಗುಡಿ’ ಧಾರಾವಾಹಿ ಮಾಡುತ್ತಿದ್ದಾರೆ. ಈ ವೇಳೆ ಸಂದರ್ಶನದಲ್ಲಿ ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ. ‘ಬಿಗ್ ಬಾಸ್ ಆಫರ್ ಬಂದರೆ ಒಪ್ಪಿಕೊಳ್ತೀರಾ’ ಎಂದು ಕೇಳಿದರು. ಇದಕ್ಕೆ ಅವರು ನೋ ಎನ್ನುವ ಉತ್ತರ ನೀಡಿದ್ದಾರೆ. ಸದ್ಯ ಅವರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ, ಬಿಗ್ ಬಾಸ್ ಆಫರ್ ಒಪ್ಪಿಕೊಳ್ಳಲು ಅವರು ಆಸಕ್ತಿ ತೋರಿಸಿಲ್ಲ ಎನ್ನಲಾಗಿದೆ.
View this post on Instagram
‘ಶ್ರೀ ಗಂಧದ ಗುಡಿ’ ಧಾರಾವಾಹಿ ಮುಗಿದ ಬಳಿಕ ಸಂಜನಾ ಬುರ್ಲಿ ಅವರು ಬಿಗ್ ಬಾಸ್ ಆಫರ್ನ ಒಪ್ಪಿಕೊಳ್ಳಬಹುದು ಎಂಬುದು ಅನೇಕರ ಊಹೆ. ಈ ಬಾರಿ ಸಂಜನಾ ಅವರು ಬಂದೇ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಧಾರಾವಾಹಿ ಕಾರಣಕ್ಕೆ ಬಂದಿಲ್ಲ.
ಇದನ್ನೂ ಓದಿ: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಬಿಡಲು ನಿಜವಾದ ಕಾರಣ ಹೇಳಿದ ಸಂಜನಾ ಬುರ್ಲಿ
ಸಂಜನಾ ಅವರು ‘ಶ್ರೀಗಂಧದ ಗುಡಿ ಧಾರಾವಾಹಿಯಲ್ಲಿ ಚಂದನಾ ಹೆಸರಿನ ಪಾತ್ರ ಮಾಡಿದ್ದಾರೆ. ಚಂದನಾ ಹಾಗೂ ಹರಿಯ ಮದುವೆ ನಡೆದಿದೆ. ಈ ಮದುವೆ ಅಚಾನಕ್ಕಾಗಿ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಎಲ್ಲರೂ ಶಾಕ್ ಆಗುವ ರೀತಿಯಲ್ಲಿ ಇತ್ತು. ಚಂದನಾ ಇದರಿಂದ ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



