ಬಿಗ್ ಬಾಸ್ ಅಲ್ಲಿ ಸಹೋದರಿಯನ್ನು ಲೆಸ್ಬಿಯನ್ ಎಂದು ಕರೆದ ಸ್ಪರ್ಧಿಗೆ ದೀಪಕ್ ಚಹಾರ್ ಪಾಠ
ಬಿಗ್ ಬಾಸ್ 19 'ಕುಟುಂಬ ವಾರ'ದಲ್ಲಿ ಕ್ರಿಕೆಟಿಗ ದೀಪಕ್ ಚಾಹರ್ ತಮ್ಮ ಸಹೋದರಿ ಮಾಲತಿಗಾಗಿ ಧ್ವನಿ ಎತ್ತಿದರು. ಕುಣಿಕಾ ಮಾಲತಿಯನ್ನು 'ಸಲಿಂಗಕಾಮಿ' ಎಂದು ಕರೆದ ಬಗ್ಗೆ ದೀಪಕ್ ನೇರವಾಗಿ ಪ್ರಶ್ನಿಸಿದರು. ಇದು ಲಕ್ಷಾಂತರ ವೀಕ್ಷಕರ ಮುಂದೆ ಇಮೇಜ್‌ಗೆ ಹಾನಿ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು. ಕುಣಿಕಾ ಸಮರ್ಥಿಸಿಕೊಳ್ಳಲು ಯತ್ನಿಸಿದರೆ, ಮಾಲತಿ, ಕುಣಿಕಾ ಮಗನ ಕ್ಷಮೆಯಾಚನೆಯ ವಿಷಯ ಬಹಿರಂಗಪಡಿಸಿದರು, ಇದು ಹೇಳಿಕೆಯ ಗಂಭೀರತೆಯನ್ನು ತೋರಿಸುತ್ತದೆ.

ಬಿಗ್ ಬಾಸ್ 19ರಲ್ಲಿ ‘ಕುಟುಂಬ ವಾರ’ ನಡೆದಿದೆ. ಇದು ಸ್ಪರ್ಧಿಗಳಿಗೆಎ ಖುಷಿಯನ್ನು ತರುರುತ್ತದೆ. ಬಿಗ್ ಬಾಸ್ ಸ್ಪರ್ಧಿ ಮಾಲತಿ ಅವರ ಸಹೋದರ ಮತ್ತು ಪ್ರಸಿದ್ಧ ಕ್ರಿಕೆಟರ್ ದೀಪಕ್ ಚಾಹರ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈ ವೇಳೆ ಅವರು ಕುಣಿಕಾ ಸದಾನಂದ್ ಅವರನ್ನು ಭೇಟಿಯಾದರು. ದೀಪಕ್ ಆರಂಭದಲ್ಲಿ ಎಲ್ಲಾ ಮನೆಯವರನ್ನು ಪ್ರೀತಿಯಿಂದ ಸ್ವಾಗತಿಸಿದರೆ, ನಂತರ ಅವರು ಮನೆಯಲ್ಲಿದ್ದಾಗ ಕುಣಿಕಾ ಎತ್ತಿದ್ದ ಗಂಭೀರ ಮತ್ತು ಸೂಕ್ಷ್ಮ ವಿಷಯವನ್ನು ಪ್ರಸ್ತಾಪಿಸಿದರು. ಕೆಲವು ದಿನಗಳ ಹಿಂದೆ ಮಾಲ್ತಿ ಅವರನ್ನು ಲೆಸ್ಬಿಯನ್ನು (ಸಲಿಂಗಕಾಮಿ) ಎಂದು ಕರೆದಿದ್ದರು.
ದೀಪಕ್ ಮಾಲತಿಯನ್ನು ಪ್ರೀತಿಯಿಂದ ಅಪ್ಪಿಕೊಂಡರು. ಅವರನ್ನು ಖುಷಿಯಿಂದ ಎಲ್ಲರೂ ಸ್ವಾಗತಿಸಿದರು. ಆದರೆ ಈ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ದೀಪಕ್ ನೇರವಾಗಿ ಕುಣಿಕಾಳ ಬಳಿಗೆ ಹೋಗಿ ಇಡೀ ಮನೆಯನ್ನು ಬೆಚ್ಚಿಬೀಳಿಸುವ ಪ್ರಶ್ನೆಯನ್ನು ಕೇಳಿದರು.
ತನ್ನ ಸಹೋದರಿಯ ವಿರುದ್ಧ ಮಾಡಿದ ಆಕ್ಷೇಪಾರ್ಹ ಹೇಳಿಕೆಯ ಬಗ್ಗೆ ದೀಪಕ್ ಚಾಹರ್ ಬಲವಾದ ನಿಲುವು ತೆಗೆದುಕೊಂಡರು. ‘ನೀವು ಯಾರನ್ನಾದರೂ ಸಲಿಂಗಕಾಮಿ ಎಂದು ಕರೆದರೆ ಹೇಗಾಗುತ್ತದೆ? ಇದು ಒಂದು ದೊಡ್ಡ ವೇದಿಕೆ. ಲೈಂಗಿಕತೆ ವಿಚಾರದಲ್ಲಿ ಈ ರೀತಿ ಲೇಬಲ್ ಮಾಡುವುದು ಬೇಜವಾಬ್ದಾರಿಯುತ ಮಾತ್ರವಲ್ಲ, ಲಕ್ಷಾಂತರ ವೀಕ್ಷಕರ ಮುಂದೆ ಯಾರೊಬ್ಬರ, ವಿಶೇಷವಾಗಿ ಅವಿವಾಹಿತ ಹುಡುಗಿಯ ಇಮೇಜ್‌ಗೆ ಹಾನಿ ಮಾಡುತ್ತದೆ’ ಎಂದು ಅವರು ಒತ್ತಿ ಹೇಳಿದರು.
ಕುನಿಕಾ ಏನು ಹೇಳಿದರು ಗೊತ್ತಾ?
ದೀಪಕ್ ಅವಳ ಮೇಲೆ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಂತೆ, ಕುಣಿಕಾ ತಕ್ಷಣ ತನ್ನನ್ನು ತಾವು ಸಮರ್ಥಿಸಿಕೊಳ್ಳಲು ಪ್ರಾರಂಭಿಸಿದರು. ಅವರ ಮಾತಲ್ಲಿ ಏರು ಧ್ವನಿ ಇತ್ತು. ಇದು ಮನೆಯಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿತು. ‘ನಾನು ಇಲ್ಲಿ ಜಗಳವಾಡಲು ಬಂದಿಲ್ಲ’ ಎಂದು ಹೇಳಿದರು.
ಇದನ್ನೂ ಓದಿ:
ಈ ಗಂಭೀರ ಚರ್ಚೆಯ ನಡುವೆ, ಮಾಲತಿ ಮತ್ತೊಂದು ಪ್ರಮುಖ ಸಂಗತಿಯನ್ನು ಬಹಿರಂಗಪಡಿಸಿದರು. ಫ್ಯಾಮಿಲಿ ವೀಕ್‌ನಲ್ಲಿ, ಕುನಿಕಾಳ ಮಗ ಅಯಾನ್ ಅವಳನ್ನು ಭೇಟಿ ಮಾಡಿದ್ದರು. ಅವರು ತಮ್ಮ ತಾಯಿಯ ಹೇಳಿಕೆಗೆ ಕ್ಷಮೆಯಾಚಿಸಿದ್ದಾಗಿ ವಿವರಿಸಿದರು. ಕುಣಿಕಾಳ ಹೇಳಿಕೆ ಎಷ್ಟು ನೋವುಂಟುಮಾಡಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



