AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಿಗರ್ ಆಗಿ ಟಾಸ್ಕ್ ಸೋತ ಅಶ್ವಿನಿಗೆ ಸಂಗೀತಾ, ಡ್ರೋನ್ ಉದಾಹರಣೆ ಕೊಟ್ಟ ಸುದೀಪ್

Bigg Boss: 10ನೇ ಸೀಸನ್​ನಲ್ಲಿ ಸಂಗೀತಾ ಹಾಗೂ ಪ್ರತಾಪ್ ಚೇರ್ ಮೇಲೆ ಕುಳಿತುಕೊಳ್ಳಯವ ಟಾಸ್ಕ್ ಇತ್ತು. ಅವರನ್ನು ಮುಟ್ಟದೆಯೇ ಮೇಲಕ್ಕೆ ಎಬ್ಬಿಸಬೇಕಿತ್ತು. ಈ ವೇಳೆ ಸೋಪಿನ ನೀರು ಎರಚಲಾಗಿತ್ತು ಮತ್ತು ಇದರಿಂದ ಅವರಿನ ಕಣ್ಣಿನ ದೃಷ್ಟಿಗೆ ತೊಂದರೆ ಆಗಿತ್ತು. ಇದನ್ನು ಸುದೀಪ್ ನೆನಪಿಸಿಕೊಂಡರು.

ಟ್ರಿಗರ್ ಆಗಿ ಟಾಸ್ಕ್ ಸೋತ ಅಶ್ವಿನಿಗೆ ಸಂಗೀತಾ, ಡ್ರೋನ್ ಉದಾಹರಣೆ ಕೊಟ್ಟ ಸುದೀಪ್
ಬಿಗ್ ಬಾಸ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 22, 2025 | 10:56 PM

Share

ಬಿಗ್ ಬಾಸ್ ಮನೆಯಲ್ಲಿ ಕೆಲವೊಮ್ಮೆ ಟಾಸ್ಕ್​ಗಳು ನಡೆಯುವಾಗ ಅದು ಯಾವ ಹಂತಕ್ಕೆ ಬೇಕಾದರೂ ಹೋಗಬಹುದು. ಆಟವನ್ನು ಗೆಲ್ಲಬೇಕು ಎಂಬ ಭರದಲ್ಲಿ ಸಾಕಷ್ಟು ತಪ್ಪುಗಳು ನಡೆದು ಹೋಗುತ್ತವೆ. ಈ ವಾರವೂ ಕೆಲವು ತಪ್ಪುಗಳು ನಡೆದವು. ಅದನ್ನು ಸುದೀಪ್ ತಿದ್ದಿದ್ದಾರೆ. ಇನ್ನು, ಆಟವನ್ನು ವೈಯಕ್ತಿಕವಾಗಿ ತೆಗೆದುಕೊಂಡ ಅಶ್ವಿನಿ ಗೌಡ ಅವರಿಗೆ ಸುದೀಪ್ ಪಾಠ ಮಾಡಿದರು. 10ನೇ ಸೀಸನ್​ನ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಉದಾಹರಣೆಯನ್ನು ನೀಡಿದರು.

ಬಿಗ್ ಬಾಸ್ ಕನ್ನಡದಲ್ಲಿ ಈ ವಾರ ಒಂದು ಟಾಸ್ಕ್ ನೀಡಲಾಗಿತ್ತು. ಕ್ಯಾಪ್ಟನ್ ರೇಸ್​ ಅಲ್ಲಿ ಕುಳಿತ ಅಶ್ವಿನಿ ಹಾಗೂ ಅಭಿಷೇಕ್ ಅವರನ್ನು ಡಿಸ್ಟ್ರಾಕ್ಟ್ ಮಾಡಬೇಕು. ಗಿಲ್ಲಿ ಅವರು ಅಶ್ವಿನಿ ಅವರ ವೈಯಕ್ತಿಕ ವಿಚಾರ ಇಟ್ಟುಕೊಂಡು ಅವರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದರು. ಈ ಪ್ರಯತ್ನ ಯಶಸ್ಸು ಆಗಿದೆ ಎಂದೇ ಹೇಳಿದರೂ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಗಿಲ್ಲಿ ಮಾತು ಕೇಳುತ್ತಾ ಕೇಳುತ್ತಾ ಅವರು ತಾವು 12 ನಿಮಿಷಕ್ಕೆ ಬೆಲ್ ಹೊಡೆಯಬೇಕು ಎಂಬುದನ್ನು ಮರೆತಿದ್ದರು.

ತಮ್ಮ ಕೆಲಸವನ್ನು ಅವರು ಸಮರ್ಥಿಸಿಕೊಳ್ಳಲು ಬಂದರು. ‘ಗಿಲ್ಲಿ ಮನಸ್ಸಲ್ಲಿ ಎಷ್ಟು ಕೆಟ್ಟ ಅಂಶಗಳು ಇವೆ ಎಂಬುದನ್ನು ನೋಡಬೇಕಿತ್ತು’ ಎಂದು ಅಶ್ವಿನಿ ಹೇಳಿದರು. ಇದನ್ನು ಸುದೀಪ್ ಒಪ್ಪಲಿಲ್ಲ. ‘10ನೇ ಸೀಸನ್​ನಲ್ಲಿ ಸಂಗೀತಾ ಹಾಗೂ ಪ್ರತಾಪ್ ಟಾಸ್ಕ್ ಆಡುವಾಗ ಸಾಕಷ್ಟು ತೊಂದರೆ ಅನುಭವಿಸಿದರು. ಅವರು ಆಸ್ಪತ್ರೆಗೆ ಕೂಡ ಹೋಗಬೇಕಾಯಿತು. ಅಲ್ಲಿ ಆಟ ಆಡಿ ಗೆಲ್ಲೋದಷ್ಟೇ ಮುಖ್ಯ. ಹಾಗೆ ನೋಡಿದರೆ ಗಿಲ್ಲಿ-ಕಾವ್ಯಾ ಗೆದ್ದರು’ ಎಂದು ಹೇಳಿದರು.

‘ನೀವು ಟ್ರಿಗರ್ ಆಗದೆ 12 ನಿಮಿಷದ ಲೆಕ್ಕಾಚಾರಕ್ಕೆ ಬೆಲ್ ಹೊಡೆದಿದ್ದರೆ ಮೊದಲ ಮಹಿಳಾ ಕ್ಯಾಪ್ಟನ್ ಆಗುತ್ತಿದ್ದಿರಿ ಅಲ್ಲವೇ’ ಎಂದು ಸುದೀಪ್ ಪ್ರಶ್ನೆ ಮಾಡಿದರು. ಆದರೂ ಅಶ್ವಿನಿ ಅವರು ತಾವು ಮಾಡಿದ್ದೇ ಸರಿ ಎಂದು ಸಮರ್ಥಿಸಿಕೊಳ್ಳಲು ಬಂದರು.

ಇದನ್ನೂ ಓದಿ: ಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋ ಹಾಕಿದ ಸುದೀಪ್; ಕೇಳೋಕೆ ಸಾಧ್ಯವಿಲ್ಲ

10ನೇ ಸೀಸನ್​ನಲ್ಲಿ ಸಂಗೀತಾ ಹಾಗೂ ಪ್ರತಾಪ್ ಚೇರ್ ಮೇಲೆ ಕುಳಿತುಕೊಳ್ಳಯವ ಟಾಸ್ಕ್ ಇತ್ತು. ಅವರನ್ನು ಮುಟ್ಟದೆಯೇ ಮೇಲಕ್ಕೆ ಎಬ್ಬಿಸಬೇಕಿತ್ತು. ಈ ವೇಳೆ ಸೋಪಿನ ನೀರು ಎರಚಲಾಗಿತ್ತು ಮತ್ತು ಇದರಿಂದ ಅವರಿನ ಕಣ್ಣಿನ ದೃಷ್ಟಿಗೆ ತೊಂದರೆ ಆಗಿತ್ತು. ಇದನ್ನು ಸುದೀಪ್ ನೆನಪಿಸಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ