ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್’ನ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಸುದೀಪ್ ಬಿಗ್ ಬಾಸ್ ನಡೆಸಿಕೊಡ್ತಾರೆ ಎಂದರೆ ಟಿಆರ್ಪಿ ಬರೋದು ಪಕ್ಕಾ. ಈ ಮೊದಲು ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುವಾಗ ದೊಡ್ಮನೆ ಒಳಗೆ ಬಂದು ಅಡುಗೆ ಮಾಡಿ ಹೋಗಿದ್ದರು. ಇದು ವೀಕ್ಷಕರಿಗೆ ಸರ್ಪ್ರೈಸ್ ಆಗಿತ್ತು. ಆ ಬಗ್ಗೆ ಇಲ್ಲಿದೆ ಮಾಹಿತಿ.
‘ಬಿಗ್ ಬಾಸ್ ಕನ್ನಡ ಸೀಸನ್ 6’ ಅನ್ನು ಸುದೀಪ್ ಅವರು ನಡೆಸಿಕೊಟ್ಟಿದ್ದರು. ಈ ಸೀಸನ್ ಗಮನ ಸೆಳೆದಿತ್ತು. ಅನುಪಮಾ ಗೌಡ, ನಿವೇದಿತಾ ಗೌಡ, ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ದಿವಾಕರ್ ಮೊದಲಾದವರು ಈ ಸೀಸನ್ನಲ್ಲಿ ಇದ್ದರು. ಈ ಸೀಸನ್ನಲ್ಲಿ ಸರ್ಪ್ರೈಸ್ ಕೊಟ್ಟಿದ್ದರು ಸುದೀಪ್.
ಅಡುಗೆ ಮನೆಗೆ ಬಂದು ಕೆಲವರು ಅಡುಗೆ ಮಾಡಿ ಹೋಗಿದ್ದರು. ಅಲ್ಲಿ ಮುಖ ರಿವೀಲ್ ಆಗಿರಲಿಲ್ಲ. ಎಲ್ಲರೂ ಮುಖಕ್ಕೆ ಏನನ್ನೂ ಹಾಕಿಕೊಂಡು ಬಂದು ಅಡುಗೆ ಮಾಡಿದ್ದರು. ಅಲ್ಲಿ ಅಡುಗೆ ಮಾಡಿದವರು ಯಾರು ಎಂಬುದು ಯಾರಿಗೂ ತಿಳಿದಿರಲಿಲ್ಲ. ಆ ಬಳಿಕ ಹೊರ ಬಂದು ಮುಖವನ್ನು ರಿವೀಲ್ ಮಾಡಲಾಯಿತು.
ಈ ವೇಳೆ ಒಬ್ಬೊಬ್ಬರಾಗಿಯೇ ಮುಖ ರಿವೀಲ್ ಮಾಡುತ್ತಾ ಹೋದರು. ಮೊದಲು ಚಂದನ್ ಕುಮಾರ್ ಅವರು ತಮ್ಮ ಮುಖ ತೋರಿಸಿದರು. ಹೀಗೆ, ಹಲವರು ಮುಖ ರಿವೀಲ್ ಮಾಡಿದರು. ಕೊನೆಯಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಮುಖವನ್ನು ತೋರಿಸಿದರು. ಆಗ ಎಲ್ಲರಿಗೂ ಶಾಕ್ ಆಯಿತು. ಅದು ಸುದೀಪ್ ಎನ್ನುವ ವಿಚಾರ ತಿಳಿದು ಅಚ್ಚರಿ ಆಯಿತು. ಆ ಸೀಸನ್ನಲ್ಲಿ ಚಂದನ್ ಶೆಟ್ಟಿ ಅವರು ಗೆದ್ದಿದ್ದರು.
ಇದನ್ನೂ ಓದಿ: ಬಿಗ್ಬಾಸ್ನಿಂದ ಬಂದು ಕಿಚ್ಚ ಸುದೀಪ್ ಉದ್ದೇಶಿಸಿ ಪೋಸ್ಟ್ ಹಾಕಿದ ಶೋಭಾ ಶೆಟ್ಟಿ
ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ’ ನಡೆಸಿಕೊಡುವಾಗ ಅನೇಕ ಬಾರಿ ಮನೆಯಿಂದ ಅಡುಗೆ ಮಾಡಿ ಕಳುಹಿಸಿದ್ದು ಇದೆ. ಈ ಬಾರಿಯೂ ಅದನ್ನು ಮುಂದುವರಿಸೋ ಸಾಧ್ಯತೆ ಇದೆ. ಈ ಬಾರಿಯೂ ಕಳೆದ ಸೀಸನ್ ರೀತಿಯೇ ಮನೆ ಒಳಗೆ ಬಂದು ಅಡುಗೆ ಮಾಡಿ ಹೋಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಇದು ನಿಜವಾಗಲಿ ಎಂಬುದು ಫ್ಯಾನ್ಸ್ ಕೋರಿಕೆ. ಇನ್ನುಮುಂದೆ ಸುದೀಪ್ ಬಿಗ್ ಬಾಸ್ನಲ್ಲಿ ಇರುವುದಿಲ್ಲ ಎಂಬ ವಿಚಾರವೇ ಬೇಸರ ಮೂಡಿಸುವಂತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.