ಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋ ಹಾಕಿದ ಸುದೀಪ್; ಕೇಳೋಕೆ ಸಾಧ್ಯವಿಲ್ಲ

ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರು ಉಪವಾಸ ಮಾಡಿದರು. ತಮಗೆ ಅವಮಾನ ಆಗಿದೆ ಎಂದರು. ‘ಮಹಿಳೆಯರಿಗೆ ಅವಮಾನ ಆಗುತ್ತಿಲ್ಲ. ಆ ರೀತಿ ಆದರೆ, ಬಿಗ್ ಬಾಸ್ ಮಧ್ಯ ಬರುತ್ತಾರೆ. ಆ ಬಗ್ಗೆ ಪ್ರಶ್ನೆ ಮಾಡಬೇಡಿ. ಪದೇ ಪದೇ ಇದನ್ನು ಹೇಳಬೇಡಿ’ ಎಂದು ಸುದೀಪ್ ಅವರು ಅಶ್ವಿನಿಗೆ ಹೇಳಿದರು.

ಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋ ಹಾಕಿದ ಸುದೀಪ್; ಕೇಳೋಕೆ ಸಾಧ್ಯವಿಲ್ಲ
ಅಶ್ವಿನಿ-ಸುದೀಪ್
Edited By:

Updated on: Nov 22, 2025 | 10:35 PM

ಬಿಗ್ ಬಾಸ್ ಮನೆಯಲ್ಲಿ ಈ ವಾರ ಸಾಕಷ್ಟು ಬೆಳವಣಿಗೆಗಳು ನಡೆದವು. ಅದರಲ್ಲಿ ಒಂದು ವಿಷಯ ಪ್ರಮುಖವಾಗಿ ಚರ್ಚೆ ಆಯಿತು. ಅದುವೇ ಅಶ್ವಿನಿ ಹಾಗೂ ರಘು ಜಗಳ ಎಂದರೂ ತಪ್ಪಾಗಲಿಕ್ಕಿಲ್ಲ. ಇಬ್ಬರೂ ಸಾಕಷ್ಟು ಕಿತ್ತಾಡಿಕೊಂಡರು. ಮನೆ ಕೆಲಸ ಮಾಡುವ ವಿಷಯಕ್ಕೆ ಸಂಬಂಧಿಸಿ ಈ ಫೈಟ್ ನಡೆದಿತ್ತು. ಆದರೆ, ಇದು ಸಾಕಷ್ಟು ಅಶಾಂತಿಗೆ ಕಾರಣ ಆಯಿತು. ಅಲ್ಲದೆ, ಅಶ್ವಿನಿ ವುಮನ್ ಕಾರ್ಡ್ ಪ್ಲೇ ಮಾಡಿದರು. ಈಗ ಸುದೀಪ್ ಅವರು ಅಶ್ವಿನಿಗೆ ಪಾಠ ಮಾಡಿದ್ದಾರೆ.

ಈ ವಾರ ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ರಘು ನಡುವೆ ಜಗಳ ಆಯಿತು. ಕೆಲಸ ಮಾಡಿ ಎಂಬ ವಿಷಯಕ್ಕೆ ಜಗಳ ನಡೆಯಿತು. ಈ ವೇಳೆ ರಘು ಅವರ ಧ್ವನಿ ಸ್ವಲ್ಪ ಏರಿಕೆ ಆಗಿತ್ತು. ಆದರೆ, ಇದಕ್ಕೆ ಅಶ್ವಿನಿ ಒಪ್ಪಿಲ್ಲ. 10 ನಿಮಿಷ ಬಿಟ್ಟು ಬರುತ್ತೇನೆ ಎಂದು ಹೇಳಿದರು. ಆದರೆ, ಇದಕ್ಕೆ ರಘು ಅವರು ಒಪ್ಪಿಲ್ಲ. ಇದು ಜಗಳಕ್ಕೆ ಕಾರಣವಾಗಿತ್ತು.

ಈ ವಿಷಯ ವೀಕೆಂಡ್​ನಲ್ಲಿ ಚರ್ಚೆ ಆಗಿದೆ. ಈ ಚರ್ಚೆಯ ವೇಳೆ ಸುದೀಪ್ ಅವರು ಅಶ್ವಿನಿ ಗೌಡ ಬಳಿ ಪ್ರಶ್ನೆ ಒಂದನ್ನು ಮಾಡಿದ್ದರು. ‘ರಘು ಅವರು ಕ್ಯಾಪ್ಟನ್ ಆಗಿದ್ದಾರೆ. ಅದಕ್ಕೆ ಗೌರವ ಕೊಡಬಹುದಿತ್ತಲ್ಲ’ ಎಂದು ಸುದೀಪ್ ಕೇಳಿದರು. ಏಕೆಂದರೆ ಕ್ಯಾಪ್ಟನ್ ಮನೆಯನ್ನು ನೋಡಿಕೊಳ್ಳಲು ಇರುವವರು ಅವರಿಗೆ ಗೌರವ ಕೊಡಬೇಕು ಎಂಬುದು ಸುದೀಪ್ ಅವರ ಅಭಿಪ್ರಾಯ ಆಗಿತ್ತು.

ಇನ್ನು, ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರು ಉಪವಾಸ ಮಾಡಿದರು. ತಮಗೆ ಅವಮಾನ ಆಗಿದೆ ಎಂದರು. ‘ಮಹಿಳೆಯರಿಗೆ ಅವಮಾನ ಆಗುತ್ತಿಲ್ಲ. ಆ ರೀತಿ ಆದರೆ, ಬಿಗ್ ಬಾಸ್ ಮಧ್ಯ ಬರುತ್ತಾರೆ. ಆ ಬಗ್ಗೆ ಪ್ರಶ್ನೆ ಮಾಡಬೇಡಿ. ಪದೇ ಪದೇ ಇದನ್ನು ಹೇಳಬೇಡಿ’ ಎಂದು ಸುದೀಪ್ ಅವರು ಅಶ್ವಿನಿಗೆ ಹೇಳಿದರು.

ಇದನ್ನೂ ಓದಿ: ಎಮೋಷನಲ್ ಬ್ಲಾಕ್​​ಮೇಲ್ ಮಾಡ್ತೀರ? ಮತ್ತೆ ಅಶ್ವಿನಿಗೆ ಕಿಚ್ಚನ ಕ್ಲಾಸ್

ಇನ್ನು, ಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋಗಳನ್ನು ಹಾಕಿದರು. ‘ಅಮಾವಾಸ್ಯೆ, ಜೋಕರ್, ಕಾರ್ಟೂನ್, ಫ್ರೀ ಪ್ರಾಡಕ್ಟ್, ಯಾವನೋ ನೀನು, ಹೋಗಲೋ, ಮುಚ್ಕೊಂಡು ಮಲ್ಕೊ, ಬೇಜಾನ್ ಐತಿ ಗಾಂಚಲಿ’ ಎಂಬಿತ್ಯಾದಿ ಶಬ್ದ ಬಳಸಿದ್ದರು. ಇದನ್ನು ಸುದೀಪ್ ಅವರು ಹಾಕಿ ಬಿಟ್ಟರು. ಆಗ ಅಶ್ವಿನಿ, ‘ನಾನು ತಪ್ಪು ಮಾಡಿದಾಗ ಒಪ್ಪಿಕೊಂಡಿದ್ದೇನೆ’ ಎಂದು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.