
ಕಾಕ್ರೋಚ್ ಸುಧಿ ಅವರು ರಕ್ಷಿತಾ ಶೆಟ್ಟಿಗೆ ‘ಸೆಡೆ’ ಪದ ಬಳಕೆ ಮಾಡಿದ್ದರು. ಸೆಡೆ ಎಂದರೆ ಯೂಸ್ಲೆಸ್ ಎಂಬ ಅರ್ಥವಿದೆ. ಈ ವಿಚಾರವು ವೀಕೆಂಡ್ನಲ್ಲಿ ಚರ್ಚೆಗೆ ಬರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಅಂದುಕೊಂಡ ರೀತಿಯೇ ಆಗಿದೆ. ಕಾಕ್ರೋಚ್ ಸುಧಿ ಅವರಿಗೆ ಸುದೀಪ್ ಅವರು ಪಾಠ ಹೇಳಿದ್ದಾರೆ. ಮಾತು ಬಾರದೆ ಸುಧಿ ಅವರು ಮೌನಕ್ಕೆ ಶರಣಾಗಿದ್ದಾರೆ.
‘ಸುಧಿ ಅವರೇ ಸೆಡೆ ಪದದ ಅರ್ಥವೇನು’ ಎಂದು ಸುದೀಪ್ ಅವರು ಕೇಳಿದರು. ‘ವೇಸ್ಟ್, ಯೂಸ್ಲೆಸ್, ಚೈಲ್ಡ್ ಎಂಬ ಅರ್ಥವಿದೆ’ ಎಂದು ಸುಧಿ ಅವರು ಹೇಳಿದರು. ‘ನೀವು ನಿಜವಾಗಲೂ ಇದನ್ನೇ ಹೇಳಿದ್ರಾ? ಚೈಲ್ಡ್ ಎಂದು ಮಾತ್ರ ಹೇಳಿದ್ರಿ. ನೀವು ಕ್ಷಮೆ ಕೇಳುವಾಗ ತುಂಬಾನೇ ನಾಟಕವಾಗಿ ಆಡಿದಿರಿ’ ಎಂದು ಸುದೀಪ್ ಹೇಳಿದರು. ಈ ವೇಳೆ ಒಂದು ವಿಚಾರವನ್ನು ಅವರು ಸ್ಪಷ್ಟವಾಗಿ ಹೇಳಿದರು.
‘ಕನ್ನಡದ ನಿಘಂಟಿನ ಪ್ರಕಾರ ಸೆಡೆ ಎಂಬ ಪದದ ಅರ್ಥ ಚೈಲ್ಡ್’ ಎಂದು ಸುಧಿ ಹೇಳಿದ್ದರು. ‘ಕನ್ನಡದ ನಿಘಂಟಲ್ಲಿ ಈ ರೀತಿಯ ಭಾಷೆ ಇಲ್ಲ. ಅಲ್ಲಿ ಒಳ್ಳೊಳ್ಳೆಯ ಶಬ್ದಗಳು ಇವೆ’ ಎಂದು ಸುದೀಪ್ ಅವರು ಹೇಳಿದರು. ಆ ಬಳಿಕ ತಲೆಬಗ್ಗಿಸಿಕೊಂಡು, ‘ಕ್ಷಮಿಸಿ, ಕ್ಷಮಿಸಿ’ ಎಂದು ಸುಧಿ ಹೇಳಿದ್ದಾರೆ.
ಜಾನ್ವಿ ಹಾಗೂ ಅಶ್ವಿನಿ ಗೌಡಗೆ ಸುಧಿ ಅವರು ಬಕೆಟ್ ಹಿಡಿಯುತ್ತಾರೆ ಎಂಬ ಮಾತಿದೆ. ಇದು ಎಲ್ಲರಿಗೂ ಅನಿಸಿದೆ. ಸುದೀಪ್ ಅವರು ಕೂಡ ಇದೇ ಅಭಿಪ್ರಾಯವನ್ನು ಹೊರಹಾಕಿದರು. ‘ನೀವು ಬಕೆಟ್ಗೆ ಬ್ರ್ಯಾಂಡ್ ಆಗಿದೀರಾ’ ಎಂದು ಸುದೀಪ್ ಅವರು ಸುಧಿಗೆ ಹೇಳಿದರು.
ಇದನ್ನೂ ಓದಿ: ‘ನೀವು ಗೌರವ ಕೊಟ್ಟಾಗಲೇ ಅಲ್ಲವೇ ಮರಳಿ ಸಿಗೋದು’; ಅಶ್ವಿನಿಗೆ ಸುದೀಪ್ ಮಾತಿನ ಚಾಟಿ
ಸುಧಿ ಅವರು ‘ಬಿಗ್ ಬಾಸ್’ನಲ್ಲಿ ಡಲ್ ಆಗಿದ್ದಾರೆ. ಈ ವಿಚಾರಕ್ಕೆ ವೀಕ್ಷಕರಿಗೆ ಬೇಸರ ಇದೆ. ಅವರು ಆಟಂ ಬಾಂಬ್ ಆಗುತ್ತಾರೆ ಎಂದು ಅನೇಕರು ಭಾವಿಸಿದ್ದರು. ಆದರೆ, ಅವರು ಟುಸ್ ಪಟಾಕಿ ಆಗಿದ್ದಾರೆ. ಸುದೀಪ್ ಪಾಠದ ಬಳಿಕ ಅವರು ಬದಲಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.