ಕಿಚ್ಚ ಸುದೀಪ್ ಅವರು ಪ್ರತಿ ವಾರ ಬಿಗ್ ಬಾಸ್ನಲ್ಲಿ ಶನಿವಾರದ ಎಪಿಸೋಡ್ನ ಸ್ಪರ್ಧಿಗಳಿಗೆ ಬುದ್ಧಿವಾದ ಹೇಳಲು ಬಯಸಿದರೆ ಭಾನುವಾರದ ಎಪಿಸೋಡ್ನ ಫನ್ ಆಗಿ ನಡೆಸಿಕೊಡುತ್ತಾರೆ. ಈ ವಾರ ದೊಡ್ಮನೆಯಲ್ಲಿ ಎಲ್ಲವೂ ಫನ್ ಆಗಿ ನಡೆಯಿತು. ಮನೆಯಿಂದ ಸ್ಪರ್ಧಿಗಳ ಕುಟುಂಬದವರು ಬಂದಿದ್ದರು. ಹೀಗಾಗಿ, ಎಲ್ಲರೂ ಸಖತ್ ಜಾಲಿಯಾಗಿದ್ದರು. ಹೀಗಾಗಿ, ವೀಕೆಂಡ್ ಎಪಿಸೋಡ್ ಫನ್ ಆಗಿರುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಈ ವಾರವೂ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ ಆಗಿದೆ.
ಕಿಚ್ಚ ಸುದೀಪ್ ಶನಿವಾರ ಬೆಳಿಗ್ಗೆಯೇ ವೇದಿಕೆ ಏರಿ ಎಪಿಸೋಡ್ ನಡೆಸಿಕೊಡುತ್ತಾರೆ. ಇದರ ಮೊದಲ ಪ್ರೋಮೋನ ಮಧ್ಯಾಹ್ನ ಹಂಚಿಕೊಳ್ಳಲಾಗುತ್ತದೆ. ಆ ಎಪಿಸೋಡ್ನಲ್ಲಿ ಸುದೀಪ್ ಅವರು ಯಾವ ವಿಚಾರದ ಬಗ್ಗೆ ಮಾತನಾಡುತ್ತಾರೆ? ಅವರು ಕ್ಲಾಸ್ ತೆಗೆದುಕೊಳ್ಳುವ ಮೂಡ್ನಲ್ಲಿದ್ದಾರಾ ಅಥವಾ ಸೈಲೆಂಟ್ ಆಗಿದ್ದಾರಾ ಎಂಬಿತ್ಯಾದಿ ಸೂಚನೆ ಸಿಗುತ್ತದೆ. ಈಗ ರಿಲೀಸ್ ಆಗಿರೋ ಪ್ರೋಮೋ ನೋಡಿದರೆ ಸುದೀಪ್ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ ಆಗಿದೆ.
ಫ್ಯಾಮಿಲಿ ವೀಕ್ ಹಾಗೂ ಸುದೀಪ್ ಅವರು ಮಾಡಿಕೊಟ್ಟ ಅಡುಗೆಯ ಕಾರಣಕ್ಕೆ ಎಲ್ಲವೂ ಫನ್ ಆಗಿತ್ತು. ಸ್ಪರ್ಧೆ ಎಂಬುದನ್ನು ಮರೆತು ಎಲ್ಲರೂ ಒಟ್ಟಾಗಿ ಬೆರೆತರು. ಕುಟುಂಬದ ಜೊತೆ ಸಮಯ ಕಳೆದರು. ಇದನ್ನೇ ಇಟ್ಟುಕೊಂಡು ಸುದೀಪ್ ಈ ವಾರದ ಎಪಿಸೋಡ್ ನಡೆಸಕೊಡಲಿದ್ದಾರೆ. ‘ಈ ವಾರ ಸ್ಪರ್ಧಿಗಳು ರಕ್ತ ಸಂಬಂಧಿಗಳನ್ನು ಭೇಟಿ ಮಾಡಿದರು. ಮನೆ ಊಟ ತಿಂದು ಮೈಮರೆತವರು ಯಾರು? ಮನೆಯವರ ಮಾತು ಕೇಳಿ ಎಚ್ಚರ ಆದವರು ಯಾರು’ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ‘ರಾಬರ್ಟ್’ ಸಿನಿಮಾ ಗಳಿಕೆ ಬೀಟ್ ಮಾಡುವ ಸನಿಹದಲ್ಲಿದೆ ಸುದೀಪ್ ನಟನೆಯ ‘ಮ್ಯಾಕ್ಸ್’
ಈ ವಾರ ಮನೆಯಿಂದ ಬಂದ ಅನೇಕರು ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಮಂಜು ಕುಟುಂಬದವರು ಗೌತಮಿ ಜೊತೆಗಿನ ಬಾಂಧವ್ಯ ವಿಚಾರವನ್ನು ಪ್ರಶ್ನೆ ಮಾಡಿದ್ದಾರೆ. ಗೌತಮಿ ಪತಿ ಮಂಜು ಅವರಿಂದ ದೂರ ಇರುವಂತೆ ಪತ್ನಿಗೆ ಸಲಹೆ ನೀಡಿದ್ದಾರೆ. ಹೀಗಾಗಿ, ಸ್ಪರ್ಧಿಗಳಿಗೆ ಒಂದಷ್ಟು ಇನ್ಪುಟ್ ಅಂತೂ ಸಿಕ್ಕಿದೆ. ಈ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.